ಚಿಕನ್ ಡ್ರಮ್ ಸ್ಟಿಕ್ ಮನೆಯಲ್ಲೇ ಮಾಡೋದು ಹೀಗೇ…

Public TV
1 Min Read

ಕೆಲವೊಮ್ಮೆ ನಾನ್ ವೆಜ್ ತಿನ್ನಬೇಕೆಂದು ತುಂಬಾ ಆಸೆ ಇರುತ್ತದೆ. ಆದರೆ ನಾನ್ ವೆಜ್ ಮಾಡುವುದೆಂದರೆ ಒಂದು ದೊಡ್ಡ ಕೆಲಸ. ವಿವಿಧ ರೀತಿಯ ಸಾಮಗ್ರಿಗಳು, ತುಂಬಾ ಸಮಯ ತೆಗೆದುಕೊಂಡು ಮಾಡೋದೇ ಬೇಡ ಎನಿಸುತ್ತದೆ. ಹೀಗಿರುವಾಗ ಕಡಿಮೆ ಸಾಮಗ್ರಿಗಳನ್ನು ಉಪಯೋಗಿಸಿ ಸುಲಭವಾಗಿ ಈ ನಾನ್ ವೆಜ್ ಪದಾರ್ಥವನ್ನು ತಯಾರಿಸಬಹುದು. ಸುಲಭವಾಗಿ ಕಡಿಮೆ ಸಮಯದಲ್ಲಿ ಚಿಕನ್ ಡ್ರಮ್ ಸ್ಟಿಕ್ ಈ ರೀತಿಯಾಗಿ ಮಾಡಿ.

ಬೇಕಾಗುವ ಸಾಮಗ್ರಿಗಳು:
ಚಿಕನ್ ಲೆಗ್ ಪೀಸ್
ಮೊಸರು
ಧನಿಯಾ ಪುಡಿ
ಅರಿಶಿಣ
ಕೆಂಪು ಖಾರದಪುಡಿ
ಕಾಶ್ಮೀರಿ ಮಿರ್ಚಿ ಪುಡಿ
ಗರಂ ಮಸಾಲ
ಉಪ್ಪು
ಎಣ್ಣೆ
ಟೊಮೆಟೊ ಕೆಚಪ್

ಮಾಡುವ ವಿಧಾನ:
ಮೊದಲಿಗೆ ಚಿಕನ್ ಲೆಗ್ ಪೀಸ್ ಗಳನ್ನು ಚೆನ್ನಾಗಿ ತೊಳೆದು ಇಡಿ. ಒಂದು ಬಟ್ಟಲಿಗೆ ಮೊಸರು, ಅರಿಶಿಣ, ಕೆಂಪು ಖಾರದ ಪುಡಿ, ಕಾಶ್ಮೀರಿ ಮಿರ್ಚಿ ಪುಡಿ, ಗರಂ ಮಸಾಲ, ಧನಿಯ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಟೊಮೆಟೊ ಕೆಚಪ್ ಹಾಕಿ ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ತೊಳೆದಿಟ್ಟ ಚಿಕನ್ ಲೆಗ್ ಪೀಸ್ ಗಳನ್ನು ಮಧ್ಯದಲ್ಲಿ ಚಾಕುವಿನಿಂದ ಚೆನ್ನಾಗಿ ಕತ್ತರಿಸಿಕೊಳ್ಳಿ.

ಬಳಿಕ ತಯಾರಿಸಿಟ್ಟ ಮೊಸರಿನ ಮಿಶ್ರಣವನ್ನು ಚಿಕನ್ ಮೇಲೆ ಹಾಕಿ ಅದಕ್ಕೆ ಸ್ವಲ್ಪ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಕಲಸಿ. ಚಿಕನ್ ಮಿಶ್ರಣವನ್ನು 90 ನಿಮಿಷ ಪಕ್ಕಕ್ಕಿರಿಸಿ. ಅದಾದ ಬಳಿಕ ಒಂದು ಬಾಣಲಿಗೆ ಸ್ವಲ್ಪ ಎಣ್ಣೆ ಹಾಕಿ ಅದರ ಮೇಲೆ ಚಿಕನ್ ಲೆಗ್ ಪೀಸ್ ಗಳನ್ನು ಇರಿಸಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.

ಆಗ ಬಿಸಿ ಬಿಸಿಯಾದ ಚಿಕನ್ ಡ್ರಮ್ ಸ್ಟಿಕ್ ತಯಾರಾಗುತ್ತದೆ. ಇದನ್ನು ನೀವು ಸಾಸ್ ಅಥವಾ ಮಯೋನಿಸ್ ಜೊತೆಗೆ ಸೇವಿಸಬಹುದು.

Share This Article