ಪಾರ್ಟಿ ಮಾಡಲು ಪಬ್‌ಗೆ ಕರೆದು ಸ್ನೇಹಿತನಿಂದಲೇ ಸುಲಿಗೆ – ನಾಲ್ವರ ಬಂಧನ

Public TV
1 Min Read

ಬೆಂಗಳೂರು: ಪಬ್‌ಗೆ ಪಾರ್ಟಿಗೆ ಕರೆದ ಸ್ನೇಹಿತರೇ ಸುಲಿಗೆ ಮಾಡಿಸಿದ್ದ ಪ್ರಕರಣದಲ್ಲಿ ಬೆಂಗಳೂರಿನ (Bengaluru) ಚಿಕ್ಕಜಾಲ (Chikkajala) ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಜೆಪಿ ನಗರ ನಿವಾಸಿ ಚಂದನ್ ಎನ್ನುವ ಯುವಕನಿಗೆ ಪವನ್ ಮತ್ತು ಅಚಲ್ ಎಂಬಿಬ್ಬರು ಸ್ನೇಹಿತರಿದ್ದರು. ಚಂದನ್ ಅರ್ಥಿಕವಾಗಿ ಚನ್ನಾಗಿದ್ದ. ಕಳೆದ ಮೇ 1 ರಂದು ಚಂದನ್‌ಗೆ ಕರೆ ಮಾಡಿ ಚಿಕ್ಕಜಾಲ ಬಳಿಯ ಪಬ್‌ಗೆ ಬರುವಂತೆ ಹೇಳಿದ್ದರು. ಇದನ್ನೂ ಓದಿ: ರೈಲ್ವೇ ಟ್ರ್ಯಾಕ್‌ನಲ್ಲಿ ನವವಿವಾಹಿತೆ ಶವ ಪತ್ತೆ ಕೇಸ್ – ಪತಿ ಮನೆ ಮುಂದೆ ಮೃತದೇಹವಿಟ್ಟು ಪ್ರತಿಭಟನೆ

ತಡರಾತ್ರಿ ತನಕ ಅಚಲ್ ಮತ್ತು ಪವನ್, ಚಂದನ್ ಮೂವರು ಪಾರ್ಟಿ ಮಾಡಿದ್ದರು. ನಂತರ ಜಾಲಿ ರೈಡ್ ಹೋಗೋಣ ಅಂತಾ ಚಂದನ್ ಕಾರಿನಲ್ಲೇ ಏರ್ಪೋರ್ಟ್ ಕಡೆಗೆ ಹೊರಟಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಕಾರಿನಲ್ಲಿದ್ದ ಮೂವರ ಮೇಲೂ ಹಲ್ಲೆ ಮಾಡಿ ಚಂದನ್ ಬಳಿಯಿದ್ದ ಮೂರು ಲಕ್ಷ ಮೌಲ್ಯದ ಚಿನ್ನ, ನಗದು ದೋಚಿ ಎಸ್ಕೇಪ್ ಆಗಿದ್ದರು. ಈ ವೇಳೆ ಜೊತೆಗಿದ್ದ ಅಚಲ್ ಮತ್ತು ಪವನ್ ಪೊಲೀಸರಿಗೆ ದೂರು ನೀಡೋದು ಬೇಡ ಅಂತಾ ಚಂದನ್‌ಗೆ ಮನವೊಲಿಸಿದ್ದರು.

ಇದಾದ ಒಂದು ವಾರದ ನಂತರದ ಘಟನೆ ಬಗ್ಗೆ ಅನುಮಾನಗೊಂಡ ಚಂದನ್ ಪೊಲೀಸರಿಗೆ ದೂರು ನೀಡಿದ್ದ. ತನಿಖೆಯಲ್ಲಿ ಜೊತೆಗಿದ್ದ ಸ್ನೇಹಿತರೇ ಸುಲಿಗೆಕೋರರಿಗೆ ಸುಪಾರಿ ನೀಡಿ ಸುಲಿಗೆ ಮಾಡಿರುವುದು ಗೊತ್ತಾಗಿತ್ತು. ಸದ್ಯ ಪವನ್, ಪ್ರೇಮ್ ಶೆಟ್ಟಿ, ಅಚಲ್, ತರುಣ್ ಎಂಬವರನ್ನು ಬಂಧಿಲಾಗಿದೆ. ಇದನ್ನೂ ಓದಿ: ಪ್ರೀತಿ ವಿಚಾರಕ್ಕೆ ಕಿರಿಕ್ – ಶಿಕ್ಷಕಿಗೆ ಚಾಕು ಇರಿದು ಕೊಂದ ಯುವಕ

Share This Article