ಹುಬ್ಬಳ್ಳಿ: ಅಪಘಾತ ಮಾಡಿದ ಬಸ್ ಚಾಲಕರಿಗೆ ಡಿಪೋ ಮ್ಯಾನೇಜರ್ ಮತ್ತು ಅಧಿಕಾರಿಗಳು, ಸನ್ಮಾನ ಮಾಡಿ ಅಪಹಾಸ್ಯ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ.
ಹುಬ್ಬಳ್ಳಿ-ಧಾರವಾಡ ನಡುವೆ ಸಂಚರಿಸುವ ಚಿಗರಿ ಬಸ್ಗಳ ನಡುವೆ ಬುಧವಾರ ಧಾರವಾಡದಲ್ಲಿ (Dharwad) ಅಪಘಾತ ನಡೆದಿತ್ತು. ಮುಂದೆ ಹೋಗುತ್ತಿದ್ದ ಬಸ್ ಬ್ರೇಕ್ ಹಾಕಿದಾಗ ಹಿಂಬದಿಯ ಬಸ್ ಚಾಲಕ ಬ್ರೇಕ್ ಹಾಕಿದರೂ, ಬ್ರೇಕ್ ಹತ್ತದೇ ಮುಂದಿನ ಬಸ್ಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಶಾಲಿನಿ ರಜನೀಶ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ರೆ ನೇಣು ಹಾಕಿಕೊಳ್ಳುತ್ತೇನೆ: ರವಿಕುಮಾರ್
ಅಪಘಾತದಲ್ಲಿ ಎರಡು ಬಸ್ಗಳ ಗಾಜುಗಳು ಪುಡಿಪುಡಿಯಾಗಿದ್ದವು. ಚಾಲಕರಿಗೆ ಬುದ್ಧಿವಾದ ಹೇಳುವ ನೆಪದಲ್ಲಿ ಎರಡು ಬಸ್ಗಳ ಚಾಲಕರನ್ನು ಡಿಪೋಗೆ ಕರೆಸಿದ ಅಧಿಕಾರಿಗಳು ಸನ್ಮಾನ ಮಾಡಿ ಅಪಮಾನ ಮಾಡಿದ್ದಾರೆ. ಬಸ್ಗಳ ಮುಂದೆ ಚಾಲಕರನ್ನು ನಿಲ್ಲಿಸಿ, ಮಾಲೆ ಹಾಕಿ ಸನ್ಮಾನ ಮಾಡಿದ ಫೋಟೋವನ್ನು ಶೇರ್ ಮಾಡಿ, ಅಪಹಾಸ್ಯ ಮಾಡಿದ್ದಾರೆ. ಇದನ್ನೂ ಓದಿ: ಶಾಲಿನಿ ರಜನೀಶ್ ವಿರುದ್ಧ ಅಸಭ್ಯ ಹೇಳಿಕೆ – ರವಿಕುಮಾರ್ ವಿರುದ್ಧ ಕೇಸ್ ದಾಖಲು
ಅಧಿಕಾರಿಗಳ ನಡೆಗೆ ಇತರೇ ಚಾಲಕರು ಅಸಮಾಧಾನ ಹೊರಹಾಕಿದ್ದು, ಈ ಬಗ್ಗೆ ಎನ್ಡಬ್ಲ್ಯೂಕೆಆರ್ಟಿಸಿ ಎಂಡಿ ದೂರು ನೀಡಿದ್ದಾರೆ. ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಎಂಡಿ ಪ್ರಿಯಾಂಗ್ ಅವರು ಡಿಪೋ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.