ಬೈಕ್‌ ಅಪಘಾತ – ವಚನಾನಂದ ಶ್ರೀ ಸಹೋದರ ಸಾವು

Public TV
1 Min Read

ಚಿಕ್ಕೋಡಿ: ಅಥಣಿ ಸಮೀಪದ ಭರಮೋಕೋಡಿ ಬಳಿ ನಡೆದ ಬೈಕ್‌ ಅಪಘಾತದಲ್ಲಿ ಯೋಗ ಗುರು ಹಾಗೂ ಹರಿಹರ ಪೀಠದ ಶ್ರೀ ವಚನಾನಂದ ಸ್ವಾಮೀಜಿಯವರ (Vachanananda Swamiji )ಸಹೋದರ ಅಶೋಕ್ ಗೌರಗೊಂಡ ಸಾವನ್ನಪ್ಪಿದ್ದಾರೆ. ‌

ಬೆಳಗಾವಿ (Belagavi) ಜಿಲ್ಲೆ ಅಥಣಿ ತಾಲೂಕಿನ ತಾಂವಸಿ ಮೂಲದ ಅಶೋಕ್ ತಾಂವಶಿ ಗ್ರಾಮದಿಂದ ಅಥಣಿ ಕಡೆಗೆ ಸಾಗುವಾಗ ‌ಭರಮೋಕೋಡಿ ಹತ್ತಿರ ಈ ಅಪಘಾತ ಸಂಭವಿಸಿದೆ. ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ನಾಯಿ ಅಡ್ಡ ಬಂದಿದ್ದರಿಂದ ಈ ಅಪಘಾತ ಸಂಭವಿಸಿದೆ. ಪರಿಣಾಮ ಅಶೋಕ್ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಈಡೇರದ ಸರ್ಕಾರದ ಭರವಸೆ | ಮತ್ತೆ ಸಾರಿಗೆ ನೌಕರರಿಂದ ಮುಷ್ಕರಕ್ಕೆ ಪ್ಲ್ಯಾನ್‌ – ಇಂದು ಮಹತ್ವದ ಸಭೆ

ಅಶೋಕ್‌ ಅವರು ತಾಯಿ ಹೆಂಡತಿ ಹಾಗೂ ಮೂರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಅವರು ಸಾಮಾಜಿಕ ಕಳಕಳಿಯ ಮೂಲಕ ಎಲ್ಲರ ಮನ ಗೆದ್ದು, ಲಕ್ಷಾಂತರ ಸಂಖ್ಯೆಯ ಅಭಿಮಾನಿ ಬಳಗ ಹೋದಿದ್ದರು. ಅವರ ಅಂತ್ಯಕ್ರಿಯ ಸ್ವಗ್ರಾಮ ತಾವಂಶಿಯಲ್ಲಿ ನೆರವೇರಲಿದೆ. ಇದನ್ನೂ ಓದಿ: ನಿವೃತ್ತ ಡಿಜಿ ಓಂಪ್ರಕಾಶ್ ಪುತ್ರಿಯಿಂದ ದಾಂಧಲೆ – ನಂದಿನಿ ಪಾರ್ಲರ್‌ಗೆ ನುಗ್ಗಿ ವಸ್ತುಗಳು ಪೀಸ್ ಪೀಸ್

Share This Article