ಜೈಸ್ವಾಲ್‌ ಅರ್ಧಶತಕ – ಶತಕ ಸಿಡಿಸಿ ಕೊಹ್ಲಿ ಸಾಧನೆ ಸರಿಗಟ್ಟಿದ ಗಿಲ್‌

Public TV
2 Min Read

– ಮೊದಲ ದಿನ 310 ರನ್‌ ಹೊಡೆದ ಭಾರತ

ಬರ್ಮಿಂಗ್‌ಹ್ಯಾಮ್‌: ನಾಯಕ ಶುಭಮನ್‌ ಗಿಲ್‌ (Shubman Gill) ಅವರ ಅಜೇಯ ಶತಕದ ನೆರವಿನಿಂದ ಇಂಗ್ಲೆಂಡ್‌ (Englad) ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದ ಮೊದಲ ದಿನ ಭಾರತ ಉತ್ತಮ ಮೊತ್ತ ಪೇರಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ 85 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 310 ರನ್‌ ಗಳಿಸಿದೆ.

ಆರಂಭಿಕ ಆಟಗಾರ ರಾಹುಲ್‌ 2 ರನ್‌ ಗಳಿಸಿ ಔಟಾದರು. ಆದರೆ ಎರಡನೇ ವಿಕೆಟಿಗೆ ಏಕದಿನ ಶೈಲಿಯಲ್ಲಿ ಯಶಸ್ವಿ ಜೈಸ್ವಾಲ್‌ ಮತ್ತು ಕರುಣ್‌ ನಾಯರ್‌ ಬ್ಯಾಟ್‌ ಬೀಸಿ 90 ಎಸೆತಗಳಲ್ಲಿ 80 ರನ್‌ ಜೊತೆಯಾಟವಾಡಿ ಚೇತರಿಕೆ ನೀಡಿದರು. ಇದನ್ನೂ ಓದಿ: ಏಷ್ಯಾ ಕಪ್ಟೂರ್ನಿಗೆ ಮುಹೂರ್ತ ಫಿಕ್ಸ್‌; ಸೆ.7ಕ್ಕೆ ಭಾರತ-ಪಾಕ್‌ ಮುಖಾಮುಖಿ

ಕರುಣ್‌ ನಾಯರ್‌ 31 ರನ್‌ ಗಳಿಸಿ ಔಟಾದರೆ ಯಶಸ್ವಿ ಜೈಸ್ವಾಲ್‌ 87 ರನ್‌(107 ಎಸೆತ, 13 ಬೌಂಡರಿ) ಹೊಡೆದು ಔಟಾದರು.ರಿಷಭ್‌ ಪಂತ್‌ 25 ರನ್‌ ಗಳಿಸಿದರೆ ನಿತೀಶ್‌ ಕುಮಾರ್‌ ರೆಡ್ಡಿ ಕೇವಲ 1 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.

ಒಂದು ಕಡೆ ವಿಕೆಟ್‌ ಉರುಳುತ್ತಿದ್ದ ಗಿಲ್‌ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತುಕೊಂಡರು. ಗಿಲ್‌ಗೆ ರವೀಂದ್ರ ಜಡೇಜಾ (Ravindra Jadeja) ಉತ್ತಮ ಸಾಥ್‌ ನೀಡಿದ್ದು ಮುರಿಯದ 6ನೇ ವಿಕೆಟಿಗೆ 124 ಎಸೆತಗಳಲ್ಲಿ 99 ರನ್‌ ಜೊತೆಯಾಟವಾಡಿದ್ದಾರೆ. ಇದನ್ನೂ ಓದಿ: ಪತ್ನಿಗೆ ತಿಂಗಳಿಗೆ 4 ಲಕ್ಷ ಕೊಡಿ: ಮೊಹಮ್ಮದ್‌ ಶಮಿಗೆ ಹೈಕೋರ್ಟ್‌ ಸೂಚನೆ

ಗಿಲ್‌ ಅಜೇಯ 114 ರನ್‌(216 ಎಸೆತ, 12 ಬೌಂಡರಿ), ಜಡೇಜಾ ಅಜೇಯ 41 ರನ್‌(67 ಎಸೆತ, 5 ಬೌಂಡರಿ ಹೊಡೆದು ತಂಡದ ಮೊತ್ತವನ್ನು 300 ರನ್‌ಗಳ ಗಡಿ ದಾಟಿಸಿದರು.

ನಾಯಕನಾಗಿ ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಸತತ ಶತಕ ಸಿಡಿಸುವ ಮೂಲಕ ಭಾರತದ ವಿಜಯ್‌ ಹಜಾರೆ, ಸುನಿಲ್‌ ಗವಾಸ್ಕರ್‌, ವಿರಾಟ್‌ ಕೊಹ್ಲಿ ಸಾಧನೆಯನ್ನು ಗಿಲ್‌ ಸರಿಗಟ್ಟಿದ್ದಾರೆ.

 

Share This Article