ಕೈ ಕೊಟ್ಟ ಪ್ರೀತಿಸಿದ ಹುಡುಗಿ – ಮನನೊಂದು ಯುವಕ ನೇಣಿಗೆ ಶರಣು

Public TV
1 Min Read

ಚಾಮರಾಜನಗರ: ಪ್ರೀತಿಸಿದ ಹುಡುಗಿ ಕೈ ಕೊಟ್ಟಿದ್ದರಿಂದ ಮನನೊಂದು ನನ್ನ ಸಾವಿಗೆ ಆಕೆಯೇ ಕಾರಣ ಎಂದು ವೀಡಿಯೋ ಹರಿಬಿಟ್ಟು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ (Gundlupete) ತಾಲೂಕಿನ ಬನ್ನಿತಾಳಪುರದಲ್ಲಿ ನಡೆದಿದೆ.

ಸಂತೋಷ್ (24) ಆತ್ಮಹತ್ಯೆ ಮಾಡಿಕೊಂಡ ಯುವಕ. ಸಂತೋಷ್ ಹಾಗೂ ಸಾಗಡೆ ಗ್ರಾಮದ ಯುವತಿಯು ಪರಸ್ಪರ ಪ್ರೀತಿಸುತ್ತಿದ್ದರು. ಆಕೆಯು ಬೇರೊಬ್ಬ ಯುವಕನಿಗೆ ಮೆಸೇಜ್ ಮಾಡಿದ್ದನ್ನು ಸಂತೋಷ್ ಪ್ರಶ್ನಿಸಿದ್ದ. ಈ ಕಾರಣಕ್ಕೆ ಯುವತಿಯು ಸಂತೋಷ್‌ನಿಂದ ಅಂತರ ಕಾಯ್ದುಕೊಂಡಿದ್ದಳು ಎನ್ನಲಾಗಿದೆ. ಇದನ್ನೂ ಓದಿ: 6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತೆ ರೈಲ್ವೆ ಟ್ರ‍್ಯಾಕ್‌ನಲ್ಲಿ ಶವವಾಗಿ ಪತ್ತೆ

ಇದರಿಂದ ಮನನೊಂದ ಸಂತೋಷ್, ನನ್ನ ಸಾವಿಗೆ ಆಕೆಯೇ ಕಾರಣ. ಅವಳನ್ನು ಬಿಟ್ಟು ಇನ್ಯಾರು ಕಾರಣರಲ್ಲ ಎಂದು ಆತ್ಮಹತ್ಯೆಗೂ ಮುನ್ನ ವೀಡಿಯೋ ಮಾಡಿ ವಾಟ್ಸಪ್ ಸ್ಟೇಟಸ್‌ಗೆ ತಮ್ಮಿಬ್ಬರ ಫೋಟೋ ಹಾಕಿದ್ದ. ಬಳಿಕ ಸಂತೋಷ್, ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಘಟನಾ ಸಂಬಂಧ ತೆರಕಣಾಂಬಿ ಪೋಲಿಸ್ ಠಾಣೆಯಲ್ಲಿ (Terakanambi Police Station) ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಯಸ್ಕರಲ್ಲಿ ದಿಢೀರ್ ಹೃದಯಾಘಾತಕ್ಕೆ ಕೋವಿಡ್ ವ್ಯಾಕ್ಸಿನ್ ಕಾರಣವಲ್ಲ; ಐಸಿಎಂಆರ್-ಏಮ್ಸ್ ವರದಿಯಲ್ಲಿ ಸ್ಪಷ್ಟನೆ

Share This Article