ಜು.1 ರಿಂದ ಹೊಸೂರು ರಸ್ತೆಯ ಟೋಲ್ ದರ ಏರಿಕೆ – ಯಾವ ವಾಹನಕ್ಕೆ ಎಷ್ಟು ಹೆಚ್ಚಳ?

Public TV
2 Min Read

ಬೆಂಗಳೂರು: ಮಂಗಳವಾರದಿಂದ (ಜು.1) ಬೆಂಗಳೂರಿನ (Bengaluru) ಪ್ರಮುಖ ರಸ್ತೆಯ ಎರಡು ಟೋಲ್ ದರ (Toll Hike) ಏರಿಕೆಯಾಗಲಿದ್ದು, ಸೋಮವಾರ ಮಧ್ಯರಾತ್ರಿಯಿಂದಲೇ ದರ ಏರಿಕೆಯಾಗಲಿದೆ.

ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಟೋಲ್‍ವೇ ಶುಲ್ಕ ಹೆಚ್ಚಾಗಲಿದೆ. ಪರಿಣಾಮ ಸೆಂಟ್ರಲ್ ಸಿಲ್ಕ್ ಬೋರ್ಡ್‍ನಿಂದ ಎಲೆಕ್ಟ್ರಾನಿಕ್ಸ್ ಸಿಟಿಗೆ ಮತ್ತು ಕರ್ನಾಟಕ, ತಮಿಳುನಾಡು ಗಡಿಯ ಬಳಿಯ ಅತ್ತಿಬೆಲೆ ಕಡೆಯ ಮಾರ್ಗದಲ್ಲಿ ಚಲಿಸುವ ಪ್ರಯಾಣಿಕರು ಎಲಿವೇಟೆಡ್ ಹೆಚ್ಚಿನ ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಕುರಿತ ಪರಿಷ್ಕೃತ ದರಗಳು ಮಾರ್ಚ್ 31 ರ ಸಗಟು ಬೆಲೆ ಸೂಚ್ಯಂಕ ಆಧರಿಸಿ ದರ ಏರಿಕೆ ಮಾಡಲಾಗಿದೆ. ಇದನ್ನೂ ಓದಿ: ಜನರಿಗೆ ಗುಡ್ ನ್ಯೂಸ್ – 3 ಸಾವಿರಕ್ಕೆ ವಾರ್ಷಿಕ ಟೋಲ್‌ ಪಾಸ್‌!

ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ ಹೊಸ ಟೋಲ್ ರಚನೆಯಡಿಯಲ್ಲಿ, ಕಾರುಗಳು, ಜೀಪ್‍ಗಳು ಮತ್ತು ವ್ಯಾನ್‍ಗಳಿಗೆ ಏಕಮುಖ ಪ್ರಯಾಣಕ್ಕೆ 65 ರೂ. ಇದೆ. ವಾಪಸ್ ಹಿಂತಿರುಗಿ ಬರಲು ಅದೇ ದಿನಕ್ಕೆ 95 ರೂ. ಮತ್ತು ಮಾಸಿಕ ಪಾಸ್‍ಗೆ 1885 ರೂ. ಪಾವತಿಸಬೇಕಾಗುತ್ತದೆ ಬಸ್‍ಗಳು ಮತ್ತು ಟ್ರಕ್‍ಗಳಿಗೆ ಶುಲ್ಕ ಭಾರೀ ಹೆಚ್ಚಳವಾಗಿದೆ. ಒಂದೇ ಪ್ರಯಾಣಕ್ಕೆ 175 ರೂ. ಮತ್ತು ಮಾಸಿಕ ಪಾಸ್‍ಗೆ 5275 ರೂ.ಗೆ ಶುಲ್ಕ ಏರಿಕೆಯಾಗಲಿದೆ. ಮಲ್ಟಿ-ಆಕ್ಸಲ್ ವಾಹನಗಳಿಗೆ ಪ್ರತಿ ಟ್ರಿಪ್‍ಗೆ 350 ರೂ. ಮತ್ತು ತಿಂಗಳಿಗೆ 10,550 ರೂ.ಗಳನ್ನು ಪಾವತಿಸಬೇಕಾಗುತ್ತದೆ.

ಇನ್ನೂ ಅತ್ತಿಬೆಲೆ ಟೋಲ್‍ನಲ್ಲೂ (Attibele Toll Plaza) ದರ ಏರಿಕೆಯಾಗಲಿದೆ. ಹಳೆಯ ದರಕ್ಕಿಂತ 5 ರೂ ಹೆಚ್ಚಾಗಲಿದ್ದು, ಈ ಭಾಗದ ಸವಾರರಿಗೂ ಮಂಗಳವಾರದಿಂದಲೇ ದರ ಏರಿಕೆ ಬಿಸಿ ತಟ್ಟಲಿದೆ

ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ದರ ಎಷ್ಟಾಗಲಿದೆ?
– ಕಾರು, ಜೀಪ್, ನಾಲ್ಕು ಚಕ್ರದ ಲಘು ವಾಹನಗಳಿಗೆ ಒಂದು ಪ್ರಯಾಣಕ್ಕೆ 65ರೂ (ಹಳೆ ದರ 60 ರೂ.)
– ಎರಡು ಕಡೆಗಿನ ಪ್ರಯಾಣಕ್ಕೆ ರೂಪಾಯಿ 90 ರೂ. (ಹಳೆಯ ದರ 85 ರೂ.)
– ದ್ವಿಚಕ್ರ ವಾಹನಗಳಿಗೆ ಒಂದು ಮಾರ್ಗದ ಪ್ರಯಾಣಕ್ಕೆ 25 ರೂ. ಪಾವತಿಸಬೇಕಾಗಿದೆ (ಬದಲಾವಣೆ ಇಲ್ಲ)
– ಲಾರಿ (ಟ್ರಕ್) ಹಾಗೂ ಬಸ್‍ಗಳಿಗೆ ಒಂದು ಬದಿ ಪ್ರಯಾಣಕ್ಕೆ 175 ರೂ. (ಹಳೆ ಬೆಲೆ 170 ರೂ.)
– ಮಲ್ಟಿ-ಆಕ್ಸಲ್ ವಾಹನಗಳಿಗೆ ಒಂದು ಬದಿಗೆ 350 ರೂ. ಕಟ್ಟಬೇಕಿದೆ (ಹಳೆ ಬೆಲೆ 345 ರೂ.)

ಅತ್ತಿಬೆಲೆ ಟೋಲ್ ದರವೂ ಹೆಚ್ಚಳ
– ಕಾರುಗಳು ಏಕ ಬದಿ ಪ್ರಯಾಣಕ್ಕೆ 40 ರೂ. (ಹಳೆ ಬೆಲೆ 35 ರೂ.)
– ಲಘು ವಾಹನಗಳು, ಮಿನಿ ಬಸ್ 65 ರೂ. (ಹಳೆ ಬೆಲೆ 60 ರೂ.)
– ಟ್ರಕ್, ಬಸ್ 125 ರೂ. (ಹಳೆ ಬೆಲೆ 120 ರೂ.)
– ದೊಡ್ಡ ಮಲ್ಟಿ ಎಕ್ಸೆಲ್ ವಾಹನಗಳಿಗೆ ಒಂದು ಟ್ರಿಪ್‍ಗೆ 265 ರೂ. ಇದೆ (ಹಳೆ ಬೆಲೆ 260 ರೂ.) ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ 3 ಸಾವಿರಕ್ಕೆ ವಾರ್ಷಿಕ, 30 ಸಾವಿರಕ್ಕೆ ಜೀವಿತಾವಧಿ ಟೋಲ್‌ ಪಾಸ್‌

Share This Article