ಮನೆ ಹತ್ತಿರ ಬರಬೇಡಿ ಎಂದಿದ್ಯಾಕೆ ಗಣೇಶ ?

Public TV
1 Min Read

ಸಾಮಾನ್ಯವಾಗಿ ಸಿನಿಮಾ ತಾರೆಯರ ಹುಟ್ಟುಹಬ್ಬಕ್ಕೆ (Birthday) ಅವರವರ ಅಭಿಮಾನಿಗಳು ಮನೆ ಹತ್ತಿರ ಬಂದು ತಮ್ಮ ನೆಚ್ಚಿನ ನಟರಿಗೆ ಶುಭಾಶಯ ಕೋರುವುದು, ಕೇಕ್ ತಂದು ಕಟ್ ಮಾಡಿಸುವುದು ವಾಡಿಕೆ. ಆದರೆ ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಸ್ಟಾರ್‌ಗಳು ಅಭಿಮಾನಿಗಳ ಕೈಗೆ ಸುಲಭವಾಗಿ ಸಿಗುತ್ತಿಲ್ಲ. ಹೀಗಾಗಿ ಅಭಿಮಾನಿಗಳು ವರ್ಷಪೂರ್ತಿ ಕಾದಿದ್ದು ಕೊನೆ ಪಕ್ಷ ಹುಟ್ಟುಹಬ್ಬದ ದಿನವಾದ್ರೂ ಸಿಗಬೇಕು ಎಂದುಕೊಂಡಿದ್ದ ಫ್ಯಾನ್ಸ್‌ಗೆ ಇತ್ತೀಚೆಗೆ ಸ್ಟಾರ್‌ಗಳು ಸಬೂಬು ನೀಡುವಂತೆ ಕಾರಣ ಹೇಳಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್.

ಜುಲೈ 2 ರಂದು ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಹುಟ್ಟುಹಬ್ಬ, ಹೀಗಾಗಿ ಎರಡು ದಿನ ಮುನ್ನವೇ ಗಣೇಶ್ ಇನ್ಸ್ಟಾಗ್ರಾಂನಲ್ಲಿ ಹುಟ್ಟುಹಬ್ಬದ ಕುರಿತಾಗಿ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಇರೋದಿಲ್ಲ. ಯಾರೂ ಮನೆ ಹತ್ತಿರ ಬರಬೇಡಿ ಎಂದಿದ್ದಾರೆ. ಬದಲಾಗಿ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿ, ಅದೇ ನನಗೆ ಕೊಡುವ ಉಡುಗೊರೆ ಎಂದಿದ್ದಾರೆ. ಹೀಗಾಗಿ ಈ ಬಾರಿ ಗಣೇಶ್ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ.

ಪಿನಾಕ ಹಾಗೂ ಯುವರ್ ಸಿನ್ಸಿಯರ್ಲಿ ರಾಮ್ ಸಿನಿಮಾದ ಚಿತ್ರೀಕರಣಕ್ಕಾಗಿ ಬೇರೆ ಊರಿನಲ್ಲಿರುವ ಕಾರಣಕ್ಕೆ ಗಣೇಶ್ ಅಭಿಮಾನಿಗಳಿಗೆ ಮನೆ ಹತ್ರ ಬರಬೇಡಿ ಎಂದಿದ್ದಾರೆ. `ಕೃಷ್ಣಂ ಪ್ರಣಯ ಸಖಿ’ ಚಿತ್ರದ ಯಶಸ್ಸಿನ ಬಳಿಕ ಗಣೇಶ್ ಚಿತ್ರಗಳಿಗೆ ಮತ್ತೆ ಪುಷ್ಠಿ ಸಿಕ್ಕಿದ್ದು ಬಲು ಬೇಡಿಕೆ ಹೊಂದಿದ್ದಾರೆ. ಹೀಗಾಗಿ ಈ ವರ್ಷದಲ್ಲಿ ಪಿನಾಕ ಹಾಗೂ ಯುವರ್ ಸಿನ್ಸಿಯರ್ಲಿ ರಾಮ್ ಚಿತ್ರವನ್ನ ತೆರೆಗೆ ತರಲು ಪ್ರಯತ್ನಸುತ್ತಿರುವ ಗಣೇಶ್ ನಿರಂತರ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರಂತೆ.

Share This Article