ದೇಶ ತೊರೆಯಿರಿ ಇಲ್ವೋ ಇಂದು ಸಾಯಲು ಸಿದ್ಧವಾಗಿರಿ – ಕರೆ ಮಾಡಿ ಇರಾನ್‌ ಕಮಾಂಡರ್‌ಗಳಿಗೆ ಮೊಸಾದ್‌ ಎಚ್ಚರಿಕೆ

By
1 Min Read

ಟೆಹ್ರಾನ್‌: 12 ಗಂಟೆಯ ಒಳಗಡೆ ಇರಾನ್‌ (Iran) ತೊರೆಯಿರಿ. ಇಲ್ಲದೇ ಇದ್ದರೆ ನಿಮ್ಮನ್ನು ಹತ್ಯೆ ಮಾಡಲಾಗುವುದು ಎಂದು ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) 20 ಕಮಾಂಡರ್‌ಗಳಿಗೆ ಇಸ್ರೇಲ್‌ (Israel) ಗುಪ್ತಚರ ಸಂಸ್ಥೆ ಮೊಸಾದ್‌ (Mossad) ಕರೆ ಮಾಡಿ ನೇರವಾಗಿ ಬೆದರಿಕೆ ಹಾಕಿದೆ.

ಐಆರ್‌ಜಿಸಿಯ ಕಮಾಂಡರ್‌ಗೆ ಮೊಸಾದ್‌ ಅಧಿಕಾರಿ ಕರೆ ಮಾಡಿ ಬೆದರಿಕೆ ಹಾಕುತ್ತಿರುವ ಆಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದನ್ನೂ ಓದಿ: ಕಿಲ್ಲರ್‌ ಲೇಡಿಯಿಂದ ಇರಾನ್‌ ನಾಶ – ಇಸ್ರೇಲ್‌ ನಿಖರ ದಾಳಿ ಹಿಂದಿದ್ದಾಳೆ ಸುಂದರಿ!

ಆಡಿಯೋದಲ್ಲಿ ಏನಿದೆ?
ನಿಮ್ಮ ಪತ್ನಿ ಮತ್ತು ಮಗುವಿನೊಂದಿಗೆ ತಪ್ಪಿಸಿಕೊಳ್ಳಲು ನಿಮಗೆ 12 ಗಂಟೆಗಳ ಸಮಯವಿದೆ ಎಂದು ನಾನು ಈಗ ನಿಮಗೆ ಸಲಹೆ ನೀಡಬಲ್ಲೆ. ನೀವು ಈಗ ನಮ್ಮ ಪಟ್ಟಿಯಲ್ಲಿದ್ದೀರಿ. ನಿಮ್ಮ ಕುಟುಂಬದ ಮೇಲೆ ನಾವು ಯಾವುದೇ ಕ್ಷಣದಲ್ಲಿ ದಾಳಿ ಮಾಡಬಹುದು. ನಿಮ್ಮ ಸಂಬಂಧಿಕರಿಗಿಂತ ನಾವು ನಿಮಗೆ ಬಹಳ ಹತ್ತಿರದಲ್ಲಿದ್ದೇವೆ.  ಇದನ್ನೂ ಓದಿ: 1 ಸಾವಿರ ಕಿ.ಮೀ. ದೂರದಿಂದ ದಾಳಿ – ಕಾರಿನಲ್ಲಿ ಹೋಗುತ್ತಿದ್ದಾಗಲೇ ಇರಾನ್‌ ಟಾಪ್‌ ಸೇನಾ ನಾಯಕ ಹತ್ಯೆ

ಈಗಾಗಲೇ ಹಲವು ಕಮಾಂಡರ್‌, ವಿಜ್ಞಾನಿಗಳನ್ನು ನಾವು ಹತ್ಯೆ ಮಾಡಿರುವುದು ನಿಮಗೆ ಗೊತ್ತಿರಬಹುದು. ನಿಮ್ಮನ್ನು ಹತ್ಯೆ ಮಾಡುವುದು ನಮಗೆ ಕಷ್ಟದ ಕೆಲಸವಲ್ಲ. ನಿಮ್ಮ ಪತ್ನಿ ಮತ್ತು ಮಗುವಿನೊಂದಿಗೆ ಜೀವ ಉಳಿಸಿಕೊಳ್ಳಲು ನಿಮಗೆ ಕೊನೆಯ ಆಯ್ಕೆ ನೀಡುತ್ತಿದ್ದೇವೆ ಎಂದು ಆಡಿಯೋದಲ್ಲಿ ಎಚ್ಚರಿಕೆ ನೀಡಲಾಗಿದೆ.

Share This Article