ಮತ್ತೆ ಬಣ್ಣಕ್ಕೆ ಮರಳುವ ಸುಳಿವು ಕೊಟ್ಟರಾ ನಟಿ ಅಮೂಲ್ಯ ?

Public TV
1 Min Read

ದುವೆಯ ಬಳಿಕ ನಟಿ ಅಮೂಲ್ಯ (Amulya) ಬಣ್ಣ ಹಚ್ಚಲಿಲ್ಲ. ಹಾಗಂತ ಬಣ್ಣಕ್ಕೆ ಅವರು ವಿದಾಯವನ್ನೂ ಹೇಳಿರಲಿಲ್ಲ. ಅನೇಕ ವರ್ಷಗಳಿಂದ ಅವರು ನಟನೆಗೆ ರೀ-ಎಂಟ್ರಿ ಕೊಡ್ತಾರೆ ಎಂಬ ವದಂತಿ ಇದೆ. ಮಕ್ಕಳಿಬ್ಬರೂ ಬೆಳೆದು ದೊಡ್ಡವರಾಗುತ್ತಿದ್ದಾರೆ. ಅಮೂಲ್ಯ ಲುಕ್ ವಿಚಾರದಲ್ಲೂ ಮತ್ತದೇ ಹಳೆಯ ಚಾರ್ಮ್‌ಗೆ ಮರಳಿದ್ದಾರೆ. ಇದೀಗ ಅವರು ಪೋಸ್ಟ್ ಮಾಡಿರುವ ಹೊಸದೊಂದು ಫೋಟೋಶೂಟ್ ಮತ್ತೆ ಮರಳುವ ತಯಾರಿಯ ಸುಳಿವನ್ನ ನೀಡುತ್ತಿದೆ.

ಸಾಮಾನ್ಯವಾಗಿ ಸಾಂಪ್ರದಾಯಿಕವಾಗೇ ಕಾಣಿಸಿಕೊಳ್ಳುವ ಅಮೂಲ್ಯ ಇದೀಗ ಜಬರ್ದಸ್ತ್ ಮಾಡರ್ನ್ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಕಪ್ಪು ಬಿಳಿ ಮಾಡರ್ನ್ ಬಟ್ಟೆ ಧರಿಸಿ ಕನ್ನಡಿಯಲ್ಲಿ ಪ್ರತಿಬಿಂಬ ಕಾಣುವಂತೆ ಪೋಸ್ ಕೊಟ್ಟಿದ್ದಾರೆ. ಇದಕ್ಕವರು ವಿಶೇಷ ಕ್ಯಾಪ್ಷನ್ ಕೊಟ್ಟಿದ್ದು “ಜೀವನವು ಅಸ್ಪಷ್ಟವಾದಾಗ ನಿಮ್ಮ ಗಮನವನ್ನು ಹೊಂದಿಸಿ” ಎಂದಿದ್ದಾರೆ. ಇದರರ್ಥ ಸಿನಿಮಾಕ್ಕೆ ಮರಳುವತ್ತ ಗಮನ ಕೊಡ್ತಿದ್ದಾರೆ ಎನ್ನಬಹುದೇ?

ಸಿನಿಮಾರಂಗದಲ್ಲಿ ಪೀಕ್‌ನಲ್ಲಿದ್ದಾಗಲೇ ಅಮೂಲ್ಯ ಮದುವೆಯಾಗಿ ನಟನೆಯಿಂದ ಬ್ರೇಕ್ ಪಡೆದುಕೊಂಡರು. ಮುಗುಳುನಗೆ ಚಿತ್ರವೇ ಕೊನೆ. ಮತ್ತೆ ಅವರು ಬಿಗ್‌ಸ್ಕ್ರೀನ್‌ನಲ್ಲಿ ಕಾಣಿಸ್ಕೊಂಡಿರಲಿಲ್ಲ. ಮದುವೆ ಮಕ್ಕಳು ಎಂದು ಬ್ಯುಸಿಯಾಗಿದ್ದ ಅಮೂಲ್ಯ ಮತ್ತೆ ಬಣ್ಣಕ್ಕೆ ಮರಳಲಿದ್ದಾರೆ ಎಂಬ ವದಂತಿಗೆ ಪುಷ್ಠಿ ನೀಡುವಂತೆ ಇದೀಗ ಅಮೂಲ್ಯ ಫೋಟೋಶೂಟ್ ನಯಾ ಚಾಪ್ಟರ್ ಶುರುಮಾಡುತ್ತಿದೆ.

Share This Article