ಕಾಂಗ್ರೆಸ್‌ ಸರ್ಕಾರದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ – ಸಿಎಂ, ಜಮೀರ್‌ ರಾಜೀನಾಮೆಗೆ ರವಿಕುಮಾರ್ ಆಗ್ರಹ

By
2 Min Read

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದಲ್ಲಿ (Congress Government) ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಅಂತ ಬಿಜೆಪಿ ಎಂಎಲ್‌ಸಿ ರವಿಕುಮಾರ್ (N Ravikumar) ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರಾದ ಬಿ.ಆರ್ ಪಾಟೀಲ್ (BR Patil) ಮತ್ತು ರಾಜು ಕಾಗೆ ಆರೋಪಕ್ಕೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟುತ್ತಿದೆ. ಒಬ್ಬರಾದ ಮೇಲೆ ಒಬ್ಬರು ಮಾತಾಡ್ತಿದ್ದಾರೆ. ರಾಜು ಕಾಗೆ, ಬೇಳೂರು, ಬಿ.ಆರ್. ಪಾಟೀಲ್ ಮಾತಾಡ್ತಿದ್ದಾರೆ‌. ಈ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವ ಆಡ್ತಿದೆ. ಬೇಳೂರು ಗೋಪಾಲಕೃಷ್ಣ ಅವರು ಜಮೀರ್‌ರನ್ನೇ ಭ್ರಷ್ಟಾಚಾರ ಮಂತ್ರಿ ಅಂತ ಹೇಳ್ತಿದ್ದಾರೆ. ಅನೇಕ MLA ಗಳು ಇದನ್ನ ಹೇಳ್ತಿದ್ದಾರೆ ಎಂದು ದೂರಿದರು.

ನಮ್ಮ ಮೇಲೆ 40% ಅಂದ್ರಿ, ಸಿಎಂ, ಡಿಸಿಎಂ ಅವರೇ ನಿಮ್ಮ ಸರ್ಕಾರ ಎಷ್ಟು ಪರ್ಸೆಂಟೇಜ್ ತಗೋತಾ ಇದೆ ಹೇಳಿ ಅಂತ ಆಗ್ರಹ ಮಾಡಿದ್ರು. ಇದನ್ನೂ ಓದಿ: ಸಚಿವರು, ಸರ್ಕಾರದ ಕಾರ್ಯವೈಖರಿ ಮೇಲೆ ಶಾಸಕರ ಸಿಟ್ಟು – ಖಡಕ್ ರಿಯಾಕ್ಷನ್ ಕೊಡ್ತಿದ್ದ ಡಿಸಿಎಂ ಸಾಫ್ಟ್?

ಸಿಎಂ, ಡಿಸಿಎಂ ಅವರೇ ರಾಜು ಕಾಗೆ, ಬಿ.ಆರ್. ಪಾಟೀಲ್ ಹೇಳಿಕೆಗೆ ಏನ್ ಹೇಳ್ತೀರಾ? ಸಿದ್ದರಾಮಯ್ಯ (Siddaramaiah) ಸರ್ಕಾರಕ್ಕೆ ಸಂವಿಧಾನ ಗೊತ್ತಿದ್ದರೆ ರಾಜೀನಾಮೆ ಕೊಡಬೇಕು. ಕೆಂಪಣ್ಣ ಪತ್ರ ಬರೆದ್ರು ಅಂತ ಅವತ್ತು ರಾಜೀನಾಮೆ ಕೇಳಿದ್ರಿ. ಇವತ್ತು ನಿಮ್ಮ ಶಾಸಕರೇ ಹೇಳ್ತಿದ್ದಾರೆ. ನೈತಿಕತೆ ‌ಇದ್ದರೆ ರಾಜೀನಾಮೆ ‌ಕೊಡಿ. ಘನತೆ, ಗೌರವ, ಪ್ರಜಾಪ್ರಭುತ್ವ ನಂಬಿಕೆ ಇದ್ದರೇ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಲೂಟಿಕೋರರ ಸರ್ಕಾರ, ಮಾನ ಮರ್ಯಾದೆ ಇದ್ದರೆ ಸಿಎಂ, ಡಿಕೆಶಿ ರಾಜೀನಾಮೆ ಕೊಡಲಿ: ಛಲವಾದಿ ನಾರಾಯಣಸ್ವಾಮಿ

ನಾವು ಅಧಿಕಾರದಲ್ಲಿ ಇದ್ದಿದ್ದರೇ ನಮ್ಮನ್ನ ನೀವು ಸುಮ್ಮನೆ ಬಿಡ್ತಿದ್ರಾ? ನೀವು ವಿಪಕ್ಷದಲ್ಲಿ ಇದ್ದಾಗ ಏನ್ ಮಾತಾಡಿದ್ರಿ ನೆನಪು ಮಾಡಿಕೊಳ್ಳಿ. ಶಾಸಕರ ಹೇಳಿಕೆಗಳಿಗೆ ಗೌರವ ಸಿಗಬೇಕಾದ್ರೆ ಕೂಡಲೇ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ಜಮೀರ್ ಅಹಮದ್‌ರಿಂದ (Zameer Ahmed Khan) ಕೂಡಲೇ ಸಿಎಂ ರಾಜೀನಾಮೆ ಪಡೆಯಬೇಕು. ಬಿ.ಆರ್ ಪಾಟೀಲ್, ರಾಜು ಕಾಗೆ ಸೇರಿ ಎಲ್ಲರ ಹೇಳಿಕೆ ಕುರಿತು ಹೋರಾಟ ಮಾಡ್ತೀವಿ. ಸದನದಲ್ಲಿ ಈ ಬಗ್ಗೆ ನಾವು ಚರ್ಚೆ ಮಾಡ್ತೀವಿ. ರಾಜೀನಾಮೆ ಕೊಡೋವರೆಗೂ ಬಿಡೋದಿಲ್ಲ. ಮುಂದಿನ ದಿನಗಳಲ್ಲಿ ‌ದೊಡ್ಡ ಹೋರಾಟ ಮಾಡ್ತೀವಿ ಅಂತ ಎಚ್ಚರಿಸಿದರು. ಇದನ್ನೂ ಓದಿ: ಕಾಂಗ್ರೆಸ್‌ಗೆ ಕಮಿಷನ್ ಬಿಸಿ, ಹೈಕಮಾಂಡ್‌ಗೆ ತಲೆನೋವು – ಸಿಎಂ ಮಧ್ಯಪ್ರವೇಶ?

Share This Article