ವೀರ ವನಿತೆಯಾದ ರಶ್ಮಿಕಾ ಮಂದಣ್ಣ- ಗೆಸ್‌ ಮಾಡಿದ್ರೆ ನಿಮಗೆ ಸಿಗುತ್ತೆ ಸರ್ಪ್ರೈಸ್

Public TV
1 Min Read

ಸಿನಿಮಾ ಲೋಕದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಹವಾ ಮುಂದುವರೆದಿದೆ. ಇದೀಗ ಅವರ ಮತ್ತೊಂದು ಚಿತ್ರ ಘೋಷಣೆಯಾಗಿದ್ದು ಶೀರ್ಷಿಕೆಯನ್ನು ಗೆಸ್ ಮಾಡುವಂತೆ ತಲೆಗೆ ಹುಳ ಬಿಟ್ಟಿದ್ದಾರೆ.

ಗ್ಲಾಮರಸ್ ಜೊತೆ ಪರ್ಫಾಮೆನ್ಸ್ ಬೇಸ್ಡ್ ಸಿನಿಮಾ ಮಾಡ್ತಾ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿರುವ ರಶ್ಮಿಕಾ ಮಂದಣ್ಣ ಸಿನಿಮಾ ಪಟ್ಟಿಗೆ ಈಗ ಮತ್ತೊಂದು ಸಿನಿಮಾ ಸೇರ್ಪಡೆಯಾಗಿದ್ದು ಎಕ್ಸ್ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದಾರೆ.

ಇದು ಯಾವ ಪ್ರಾಜೆಕ್ಟ್ ಎಂಬುದು ಊಹೆಗೂ ನಿಲುಕದಂತಾಗಿದ್ದು ರಶ್ಮಿಕಾ ಇಲ್ಲಿ ಕಚ್ಚೆ ಸೀರೆಯುಟ್ಟು ಭರ್ಜಿ ಹಿಡಿದು ಹೋರಾಟಕ್ಕೆ ಇಳಿದ ವೀರ ವನಿತೆಯಂತೆ ಕಾಣುತ್ತಾರೆ. ಬೆಂಕಿ, ಸೈನಿಕರು ಕಾಡು ರಾತ್ರಿ ಎಲ್ಲವನ್ನೂ ನೋಡುತ್ತಿದ್ದರೆ ಇದು ಐತಿಹಾಸಿಕ ಚಿತ್ರದ ಕಥೆಯಾ ಎಂಬ ಅನುಮಾನವೂ ಬರುತ್ತದೆ.  ಇದನ್ನೂ ಓದಿ: ಅಲ್ಲು ಅರ್ಜುನ್ ಜೊತೆ ಪ್ರಶಾಂತ್ ನೀಲ್ ʻರಾವಣಂʼ

ಯಾವ ಸಿನಿಮಾ ಅಂತ ಊಹಿಸಿ. ಯಾರಾದರೂ ಒಬ್ಬರು ಗೆಸ್ ಮಾಡಿದರೆ ನಾನು ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಪ್ರಮಾಣ ಮಾಡುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಟಾಲಿವುಡ್‌ನಲ್ಲಿ ಕಿಸ್ಸಿಕ್ ಬೆಡಗಿಗೆ ಕೈತಪ್ಪಿತು ಮತ್ತೊಂದು ಅವಕಾಶ

ಸಿನಿಮಾದ (Cinema) ಶೀರ್ಷಿಕೆ ಹಾಗೂ ಇನ್ನಿತರ ಮಾಹಿತಿ ಜೂನ್ 27ರ ಬೆಳಗ್ಗೆ ರಿವೀಲ್ ಆಗುತ್ತೆ. ಆದರೆ ಅದಕ್ಕೂ ಮುನ್ನ ಊಹಿಸಿದವರಿಗೆ ರಶ್ಮಿಕಾ ಭೇಟಿಮಾಡುವ ಚಾನ್ಸ್ ಕೊಟ್ಟಿದ್ದಾರೆ.

ಮೂಲಗಳ ಪ್ರಕಾರ ಇದು ರಶ್ಮಿಕಾ ಅಭಿನಯಿಸುತ್ತಿರುವ ಮಹಿಳಾ ಪ್ರಧಾನ ಕಥೆಯ ಚಿತ್ರವಾಗಿದ್ದು ಹೊಸ ತಂಡದ ಜೊತೆ ಕೈಜೋಡಿಸಿದ್ದಾರೆ ಎನ್ನಲಾಗುತ್ತಿದೆ. ಐತಿಹಾಸಿಕ ಕಥೆಯಾ ಅಥವಾ ಕಾಲ್ಪನಿಕ ಕಥೆಯ ಚಿತ್ರವಾ ಎಂಬೆಲ್ಲಾ ಕುತೂಹಲಕ್ಕೆ ಇದೇ 27 ರಂದು ಉತ್ತರ ಸಿಗಲಿದೆ.

Share This Article