ರೈಲ್ವೆ ಹಳಿಯ ಮೇಲೆ ಕಾರು ಚಲಾಯಿಸಿ ಶಾಕ್‌ ಕೊಟ್ಟ ಯುವತಿ; ಬೆಂಗಳೂರು-ಹೈದರಾಬಾದ್‌ ರೈಲು ಸೇವೆ ಸ್ಥಗಿತ

Public TV
1 Min Read

ಹೈದರಾಬಾದ್:‌ ತೆಲಂಗಾಣದ (Telangana) ರಂಗಾರೆಡ್ಡಿ ಜಿಲ್ಲೆಯಲ್ಲಿ ಯುವತಿಯೊಬ್ಬಳು ರೈಲ್ವೆ ಹಳಿಯ ಮೇಲೆ ಕಾರನ್ನು ಚಲಾಯಿಸಿ ಸಿಬ್ಬಂದಿಗೆ ಆತಂಕ ಮೂಡಿಸಿರುವ ಘಟನೆ ನಡೆದಿದೆ.

ರಂಗಾರೆಡ್ಡಿ ಜಿಲ್ಲೆಯ ನಾಗುಲಾಪಲ್ಲಿ-ಶಂಕರ್‌ಪಲ್ಲಿ ಮಾರ್ಗದಲ್ಲಿ ರೈಲ್ವೆ ಟ್ರ್ಯಾಕ್ ಮೇಲೆ ಯುವತಿ ಕಾರು ಚಲಾಯಿಸಿದ್ದಾಳೆ. ಪರಿಣಾಮವಾಗಿ ಕೆಲಕಾಲ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: ಆಪರೇಷನ್‌ ಸಿಂಧೂರ| ಪಾಕ್‌ ಬೆಡಗಿಗೆ ಮಾಹಿತಿ ರವಾನೆ – ನೌಕಾ ಸೇನೆಯ ಪ್ರಧಾನ ಕಚೇರಿಯ ಉದ್ಯೋಗಿ ಅರೆಸ್ಟ್‌

ಶಂಕರಪಲ್ಲಿ ಬಳಿ ಇದನ್ನು ಗಮನಿಸಿದ ಸ್ಥಳೀಯರು, ರೈಲ್ವೆ ಸಿಬ್ಬಂದಿ ಕೆಲಕಾಲ ಪೇಚಿಗೆ ಸಿಲುಕಿದ್ದರು. ಕೆಲಕಾಲ ಆತಂಕ ಸೃಷ್ಟಿಯಾಯ್ತು. ಅದೇ ಸಮಯಕ್ಕೆ ಆ ನಿಲ್ದಾಣದ ಮೂಲಕ ಚಲಿಸಬೇಕಿದ್ದ ರೈಲು ಅಲ್ಲಿಗೆ ಬಂದು ಸೇರುವಲ್ಲಿತ್ತು. ರೈಲ್ವೆ ಸಿಬ್ಬಂದಿ ಮಾಹಿತಿ ಮೇರೆಗೆ ಬೆಂಗಳೂರು-ಹೈದರಾಬಾದ್ ರೈಲಿನ ಲೋಕೋ ಪೈಲಟ್‌ಗೆ ಮಾಹಿತಿ ರವಾನಿಸಲಾಯ್ತು. ಆ ಬಳಿಕ ಕೆಲಕಾಲ ಮಧ್ಯದಲ್ಲೇ ರೈಲು ನಿಲ್ಲಿಸಲಾಯ್ತು.

ರೈಲ್ವೆ ಸಿಬ್ಬಂದಿ ಹಾಗೂ ಬೆಂಗಳೂರು-ಹೈದರಾಬಾದ್ ಲೋಕೋಪೈಲಟ್ ಯುವತಿಯನ್ನು ಕಾರಿನಿಂದ ಕೆಳಗಿಸಲು ಹರಸಾಹಸವನ್ನೇ ಪಟ್ಟಿದ್ದಾರೆ. ಕಾರಿನಿಂದ ಇಳಿಯಲು ಒಪ್ಪದಿದ್ದಾಗ ಕೊನೆಗೆ ಯುವತಿಯನ್ನು ಬಲವಂತವಾಗಿ ಕೆಳಗಿಳಿಸಿ, ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಇದನ್ನೂ ಓದಿ: ಎಫ್‌ 35ಗೆ ಪಾರ್ಕಿಂಗ್‌ ಶುಲ್ಕ ವಿಧಿಸಲು ಮುಂದಾದ ತಿರುವನಂತಪುರ ಏರ್‌ಪೋರ್ಟ್‌

ಯುವತಿಯನ್ನು ವಶಕ್ಕೆ ಪಡೆದ ಪೊಲೀಸರು ಹುಚ್ಚಾಟಕ್ಕೆ ಕಾರಣ ಏನೆಂದು ವಿಚಾರಣೆ ನಡೆಸಿದ್ದಾರೆ. ಇದರಿಂದಾಗಿ ಬೆಂಗಳೂರು-ಹೈದರಾಬಾದ್ ರೈಲು ಸೇವೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ವ್ಯತ್ಯಯವಾಗಿದೆ.

Share This Article