1st Test: ಮಿಂಚಿದ ಡಕೆಟ್- ಭಾರತದ ವಿರುದ್ಧ ಇಂಗ್ಲೆಂಡ್‌ಗೆ 5 ವಿಕೆಟ್‌ಗಳ ಜಯ

Public TV
0 Min Read

ಲೀಡ್ಸ್‌: ಇಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್‌ 5 ವಿಕೆಟ್‌ಗಳ ಜಯ ಗಳಿಸಿತು. ಆ ಮೂಲಕ 1-0 ಸರಣಿ ಮುನ್ನಡೆ ಸಾಧಿಸಿದೆ.

ಗೆಲುವಿಗೆ 371 ರನ್‌ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ 5 ವಿಕೆಟ್‌ಗಳ ಗೆಲುವು ಸಾಧಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ 170 ಬಾಲ್‌ಗೆ 149 ರನ್‌ ಗಳಿಸಿದ ಬೆನ್‌ ಡಕೆಟ್‌ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕಳಪೆ ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಕಾರಣಕ್ಕೆ ಟೀಂ ಇಂಡಿಯಾ ಬೆಲೆ ತೆತ್ತಿತು.

ಎರಡನೇ ಇನ್ನಿಂಗ್ಸ್‌ನಲ್ಲಿ ಕೆ.ಎಲ್‌.ರಾಹುಲ್‌ 137, ರಿಷಭ್‌ ಪಂತ್‌ 118 ರನ್‌ಗಳ ಶತಕದ ಆಟದ ನೆರವಿನಿಂದ ಟೀಂ ಇಂಡಿಯಾ ಅಂತಿಮವಾಗಿ ಇಂಗ್ಲೆಂಡ್‌ಗೆ 371 ರನ್‌ಗಳ ಗುರಿ ನೀಡಿತ್ತು.

ಟೆಸ್ಟ್‌ 5ನೇ ದಿನದಂದು ಇಂಗ್ಲೆಂಡ್‌ ಗೆಲುವಿಗೆ 350 ರನ್‌ಗಳು ಬೇಕಾಗಿತ್ತು. ಡಕೆಟ್‌ ಮತ್ತು ಜ್ಯಾಕ್‌ ಕ್ರೌಲಿ 188 ರನ್‌ಗಳ ಜೊತೆಯಾಟವು ತಂಡಕ್ಕೆ ಗೆಲುವನ್ನು ಖಚಿತಪಡಿಸಿತು. ಕ್ರೌಲಿ 65, ಡಕೆಟ್‌ 149, ಜೋ ರೂಟ್‌ 53, ಬೆನ್‌ ಸ್ಟೋಕ್ಸ್‌ 33, ಜೇಮೀ ಸ್ಮಿತ್ (ಔಟಾಗದೇ) 44 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಲು ಕೊಡುಗೆ ನೀಡಿದರು. ಟೀಂ ಇಂಡಿಯಾ ಪರ ಪ್ರಸಿದ್ಧ ಕೃಷ್ಣ, ಶಾರ್ದೂಲ್‌ ಠಾಕೂರ್‌ ತಲಾ 2 ಹಾಗೂ ರವೀಂದ್ರ ಜಡೇಜಾ 1 ವಿಕೆಟ್‌ ಪಡೆದರು.

ಮೊದಲ ಇನ್ನಿಂಗ್ಸ್
ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ್ದ ಭಾರತದ ಪರ ಯಶಸ್ವಿ ಜೈಸ್ವಾಲ್‌ (101), ಶುಭಮನ್‌ ಗಿಲ್‌ (147), ರಿಷಭ್‌ ಪಂತ್‌ (134) ಶತಕದಾಟದ ಮೂಲಕ ಮಿಂಚಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಕೆ.ಎಲ್.ರಾಹುಲ್‌ 42 ರನ್‌ ಗಳಿಸಿದ್ದರು. ಅಂತಿಮವಾಗಿ ಭಾರತವು 471 ರನ್‌ ಗಳಿಸಿತು.

ನಂತರ ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ಪರ ಓಲಿ ಪೋಪ್ 106 ರನ್‌ ಗಳಿಸಿ ಗಮನ ಸೆಳೆದರು. ತಂಡದ ಪರ ಬೆನ್‌ ಡಕೆಟ್‌ 62, ಹ್ಯಾರಿ ಬ್ರೂಕ್‌ 99, ಜೆಮಿ ಸ್ಮಿತ್‌ 44 ರನ್‌ಗಳ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿತು. ಆದರೂ 465 ರನ್‌ಗಳಿಗೆ ಇಂಗ್ಲೆಂಡ್‌ ಆಲೌಟ್‌ ಆಯಿತು. ಭಾರತವು 6 ರನ್‌ಗಳ ಮುನ್ನಡೆ ಸಾಧಿಸಿತ್ತು.

Share This Article