ಭಟ್ಕಳದ ಇಸ್ಪೀಟ್‌ ಕ್ಲಬ್ ಮೇಲೆ ದಾಳಿ – 2,000 ರೂ. ವಶಕ್ಕೆ, 25 ಜನರ ಮೇಲೆ ಕೇಸ್‌

By
1 Min Read

ಕಾರವಾರ: ಭಟ್ಕಳದ ಇಸ್ಪೀಟ್‌ ಕ್ಲಬ್‌ ಮೇಲೆ ದಾಳಿ ನಡೆಸಿದ ಪೊಲೀಸರು (Police Raid) 25 ಮಂದಿ ವಿರುದ್ಧ ಪ್ರಕರಣ ದಾಖಲಿಸಿರುವ ಘಟನೆ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳ್ಳೆ ಗ್ರಾಮದ ಕಲ್ಬಂಡಿ ಭೂಮಿಕಾ ಫ್ರೆಂಡ್ಸ್ ರೀಕ್ರಿಯೆಶನ್ ಕ್ಲಬ್ಬಿನಲ್ಲಿ ಅಕ್ರಮವಾಗಿ ಇಸ್ಪೀಟ್‌ ಆಡಿಸುತ್ತಿದ್ದ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು (Bhatkal Rural Police) ಖಚಿತ ಮಾಹಿತಿ ಪಡೆದುಕೊಂಡಿದ್ದರು. ಬಳಿಕ ದಾಳಿ ನಡೆಸಿ ಆರೋಪಿ ಕ್ಲಬ್ ಮಾಲೀಕ ಮಾದೇವ ನಾಯ್ಕ ಸಹಿತ 25 ಆರೊಪಿಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಭಾರತೀಯರ ರಕ್ಷಣೆಗಾಗಿ ತನ್ನ ವಾಯುನೆಲೆ ತೆರೆದ ಇರಾನ್‌

ಈ ಸಂದರ್ಭದಲ್ಲಿ 2,000 ರೂ. ನಗದು, ಆಟದ ಕಾರ್ಡುಗಳು, ಟೋಕನ್, ಕ್ಲಬ್ ಮೆಂಬರ್ಸ್ ಲೆಟ‌ರ್ ವಿವಿಧ ತರದ ಕಾರು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಒಂದು ಕಾಲದಲ್ಲಿ ಕುಚಿಕು ದೋಸ್ತಿಗಳಾಗಿದ್ದ ಇರಾನ್-ಇಸ್ರೇಲ್ ಈಗ ಬದ್ಧವೈರಿಗಳಂತೆ ಕಚ್ಚಾಡುತ್ತಿರೋದ್ಯಾಕೆ?

Share This Article