ನಮ್ಮ ಪಕ್ಷದಲ್ಲಿ ಕೆಲವರಿಗೆ ಅತೃಪ್ತಿ ಇರೋದು ಸತ್ಯ – ಬಿವೈವಿ

By
1 Min Read

ಬೆಂಗಳೂರು: ನಮ್ಮ ಪಕ್ಷದಲ್ಲಿ ಕೆಲವರಿಗೆ ಅತೃಪ್ತಿ ಇರೋದು ಸತ್ಯ. ಅದನ್ನ ಶಮನ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ತಿಳಿಸಿದರು.ಇದನ್ನೂ ಓದಿ: ಕರ್ನಾಟಕ, ಬೆಂಗ್ಳೂರು ಪಬ್ಲಿಕ್ ಶಾಲೆ & ಪಿ.ಎಂ.ಶ್ರೀ ಶಾಲೆಗಳಲ್ಲಿ ದ್ವಿ-ಭಾಷಾ ತರಗತಿಗಳ ದಾಖಲಾತಿ ಮಿತಿ ಹೆಚ್ಚಳ – ಸರ್ಕಾರ ಆದೇಶ

ಬೆಂಗಳೂರಿನಲ್ಲಿ ರೆಬಲ್ಸ್‌ಗಳ ಸಭೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮಲ್ಲಿ ಕೆಲವರಿಗೆ ಅತೃಪ್ತಿ ಇರೋದು ಸತ್ಯ. ಅದು ಸ್ಥಳೀಯ ಸಮಸ್ಯೆ. ನಾನು, ಜೋಶಿ, ಸಿ.ಟಿ ರವಿ ಸೇರಿ ಹಿರಿಯರು ಚರ್ಚೆ ಮಾಡಿದ್ದೇವೆ. ಪ್ರಮುಖರು ಕೂತು ಎಲ್ಲವನ್ನು ಸರಿ ಮಾಡುವ ಕೆಲಸ ಮಾಡ್ತಿದ್ದೇವೆ ಎಂದರು.

ಯಾವುದೇ ಸಮಯದಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆಗಳು ಬರಬಹುದು. ಬಿಜೆಪಿ ಜವಾಬ್ದಾರಿ ಜಾಸ್ತಿ ಇದೆ. ಒಳಜಗಳ ಬಿಟ್ಟು ನಾವು ಒಟ್ಟಾಗಿ ಭ್ರಷ್ಟ ಸರ್ಕಾರದ ವಿರುದ್ಧ ಹೋರಾಡಬೇಕಿದೆ. ಇದಕ್ಕೆ ಎಲ್ಲರೂ ಒಟ್ಟಾಗಿ ಹೋಗಬೇಕಿದೆ. ಈ ನಿಟ್ಟಿನಲ್ಲಿ ನಾವು ಎಲ್ಲರ ಮನವೊಲಿಕೆ ಮಾಡುತ್ತೇವೆ. ಒಟ್ಟಾಗಿ ಹೋಗುತ್ತೇವೆ ಎಂದು ತಿಳಿಸಿದರು.ಇದನ್ನೂ ಓದಿ: ಪಾಕಿಸ್ತಾನಕ್ಕೆ 5ನೇ ತಲೆಮಾರಿನ 40 ಸ್ಟೆಲ್ತ್ ಫೈಟರ್ ಜೆಟ್‌ ಪೂರೈಸಲು ಚೀನಾ ಮೆಗಾ ಡೀಲ್‌

Share This Article