ತಂಗಿಯ ಶವಸಂಸ್ಕಾರಕ್ಕೆ ಬರುತ್ತಿದ್ದ ಅಕ್ಕನ ದುರಂತ ಅಂತ್ಯ

Public TV
1 Min Read

ದಾವಣಗೆರೆ: ತಂಗಿಯ ಶವಸಂಸ್ಕಾರಕ್ಕೆ ಬರುತ್ತಿದ್ದ ಅಕ್ಕ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ಹರಿಹರ (Harihara) ತಾಲೂಕಿನ ಜಿಗಳಿ ಗ್ರಾಮದಲ್ಲಿ ನಡೆದಿದೆ.

ಮೃತ ವೃದ್ಧೆಯನ್ನು ಹರಳಹಳ್ಳಿ (Harahalli) ನೀಲಮ್ಮ (70) ಎಂದು ಗುರುತಿಸಲಾಗಿದೆ. ಜಿಗಳಿ ಗ್ರಾಮದ ಕಂಬಳಿಯಲ್ಲಿ ನೀಲಮ್ಮ ಅವರ ತಂಗಿ ಚನ್ನಬಸಮ್ಮ (68) ನಿಧನರಾಗಿದ್ದರು. ಹೀಗಾಗಿ ನೀಲಮ್ಮ ತಂಗಿಯ ಅಂತ್ಯಸಂಸ್ಕಾರಕ್ಕೆ ಸಂಬಂಧಿಯೊಬ್ಬರ ಬೈಕ್‌ನಲ್ಲಿ ಜಿಗಳಿಗೆ ಬರುತ್ತಿದ್ದರು. ಜಿಗಳಿ ಗ್ರಾಮ ಪ್ರವೇಶ ಮಾಡುತ್ತಿದ್ದಂತೆ ಎದುರಿನಿಂದ ಅತಿ ವೇಗವಾಗಿ ಬಂದ ಕಾರ್ ಬೈಕ್‌ಗೆ ಡಿಕ್ಕಿಯಾಗಿದೆ. ಇದನ್ನೂ ಓದಿ: ಭಟ್ಕಳದ ಇಸ್ಪೀಟ್‌ ಕ್ಲಬ್ ಮೇಲೆ ದಾಳಿ – 2,000 ರೂ. ವಶಕ್ಕೆ, 25 ಜನರ ಮೇಲೆ ಕೇಸ್‌

ಡಿಕ್ಕಿಯ ರಭಸಕ್ಕೆ ಬೈಕ್ ಹಿಂಬದಿ ಕುಳಿತಿದ್ದ ನೀಲಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಭದ್ರಾವತಿ ಮೂಲದ ಅರುಣ್‌ಕುಮಾರ್ ಎಂಬಾತ ಅಜಾಗರೂಕತೆಯಿಂದ ಕಾರು ಚಲಾಯಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಹಾಸನ | ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ; ಬೆಂಗಳೂರು – ಮುರುಡೇಶ್ವರ ರೈಲು ಸ್ಥಗಿತ

ಮಲೇಬೆನ್ನೂರ ಪೊಲೀಸ್ ಠಾಣೆಯಲ್ಲಿ (Malebennuru Police Station) ಪ್ರಕರಣ ದಾಖಲಾಗಿದೆ. ಗ್ರಾಮಸ್ಥರು ಮೊದಲು, ತಂಗಿ ಕಂಬಳಿ ಚನ್ನಬಸಮ್ಮ ಅವರ ಅಂತ್ಯಸಂಸ್ಕಾರ ಮಾಡಿ, ನಂತರ ಅಕ್ಕ ಹರಳಹಳ್ಳಿ ನೀಲಮ್ಮನ ಅಂತ್ಯಸಂಸ್ಕಾರವನ್ನು ಹರಳಹಳ್ಳಿಯಲ್ಲಿ ಮಾಡಿದ್ದಾರೆ.

Share This Article