ಶಾಲಾ ವಾಹನಗಳಲ್ಲಿ ನಿಮ್ಮ ಮಕ್ಕಳನ್ನು ಕಳಿಸೋ ಮುನ್ನ ಎಚ್ಚರ!

By
1 Min Read

ಬೆಂಗಳೂರು: ಶಾಲಾ ವಾಹನಗಳಲ್ಲಿ ನಿಮ್ಮ ಮಕ್ಕಳನ್ನು ಕಳಿಸುವ ಮುನ್ನ ಎಚ್ಚರವಿರಲಿ. ಯಾಕಂದ್ರೆ ಬೆಳ್ಳಂಬೆಳಿಗ್ಗೆ ಕಂಠಪೂರ್ತಿ ಕುಡಿದು ಸ್ಕೂಲ್ ವ್ಯಾನ್‌ಗಳನ್ನು ಓಡಿಸುತ್ತಿದ್ದಾರೆ. ಇಂತಹ ಘಟನೆಯೊಂದು ಆರ್‌ಆರ್ ನಗರ (RR Nagar) ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.ಇದನ್ನೂ ಓದಿ: ಲುಫ್ತಾನ್ಸಾ ಏರ್‌ಲೈನ್ಸ್‌ನ ಡ್ರೀಮ್‌ಲೈನರ್‌ ವಿಮಾನಕ್ಕೆ ಬಾಂಬ್‌ ಬೆದರಿಕೆ – ಅರ್ಧದಲ್ಲೇ ಫ್ರಾಂಕ್‌ಫರ್ಟ್‌ಗೆ ವಾಪಸ್‌

ಹೌದು, ಶಾಲೆಗಳು ಶುರುವಾದ ಹಿನ್ನೆಲೆ ಸಂಚಾರಿ ಪೊಲೀಸರು ಶಾಲಾ ವಾಹನಗಳ ಮೇಲೆ ಕಣ್ಣಿಟ್ಟಿದ್ದು, ‌ಡ್ರೈವರ್‌ಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಬೆಳ್ಳಂಬೆಳಿಗ್ಗೆ ಸಂಚಾರಿ ಪೊಲೀಸರು ಶಾಲಾ ವಾಹನ ಚಾಲಕನೊಬ್ಬನ ಡಿಡಿ ಚೆಕ್ ಮಾಡಿದ್ದು, ರೀಡಿಂಗ್ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ.

ಕಂಠಪೂರ್ತಿ ಕುಡಿದು ವಾಹನ ಚಲಾಯಿಸುತ್ತಿರುವುದು ತಿಳಿದುಬಂದಿದ್ದು, ಇದೇ ಅವಸ್ಥೆಯಲ್ಲಿಯೇ ಹಲವು ಕಡೆ ವಾಹನ ಚಾಲನೆ ಮಾಡಿಕೊಂಡು ಬಂದಿರುವುದಾಗಿ ಪತ್ತೆಯಾಗಿದೆ. ಒಟ್ಟು 4,559 ಶಾಲಾ ವಾಹನಗಳ ಪರಿಶೀಲನೆ ಮಾಡಲಾಗಿದ್ದು, 59 ಚಾಲಕರು ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿರುವುದು ಬೆಳಕಿಗೆ ಬಂದಿದೆ. ಸದ್ಯ 59 ವಾಹನ ಚಾಲಕರ ಲೈಸೆನ್ಸ್ ಅಮಾನತು ಮಾಡಲಾಗಿದ್ದು, ಪೊಲೀಸರು ಬೇಜವಾಬ್ದಾರಿಯಿಂದಿದ್ದ ಶಾಲೆಗಳಿಗೂ ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: ನಿಮ್ಮಪ್ಪನಿಗೆ ಸಿಎಂ ಕುರ್ಚಿ ಬಿಟ್ಟುಕೊಡಲು ಹೇಳಿ: ಯತೀಂದ್ರ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ

Share This Article