ಆಸೀಸ್‌ ಲಕ್ಕಿ ಚಾರ್ಮ್‌ಗಳಿಗೆ ಸೋಲಿನ ರುಚಿ ತೋರಿಸಿದ ಹರಿಣರು – ಹೇಜಲ್ವುಡ್‌ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌

By
2 Min Read

ಲಂಡನ್‌: ಐತಿಹಾಸಿಕ ಲಾರ್ಡ್ಸ್‌ ಕ್ರಿಕೆಟ್‌ ಅಂಗಳದಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್‌ (WTC 2025) ಫೈನಲ್‌ ಪಂದ್ಯದಲ್ಲಿ ಆಸೀಸ್‌ ವಿರುದ್ಧ ಗೆದ್ದು ದಕ್ಷಿಣ ಆಫ್ರಿಕಾ (South Africa) ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಈ ಮೂಲಕ 27 ವರ್ಷಗಳ ಬಳಿಕ ಚೋಕರ್ಸ್‌ ಹಣೆಪಟ್ಟ ಕಳಚಿದ್ದು, ಐಸಿಸಿ ಟ್ರೋಫಿ ಬರ ನೀಗಿಸಿಕೊಂಡಿದೆ. ಇದರೊಂದಿಗೆ ಐಸಿಸಿ (ICC) ಟೂರ್ನಿಯ ಫೈನಲ್‌ ಪಂದ್ಯಗಳಲ್ಲಿ ಸೋಲೇ ನೋಡದ ಸರದಾರರಿಗೂ ʻಲಾರ್ಡ್ಸ್‌ ಬವುಮಾʼ ತಂಡ ಸೋಲಿನ ರುಚಿ ತೋರಿಸಿದೆ.

ಹೌದು. ಕಳೆದ ಒಂದು ದಶಕದಿಂದ ಫೈನಲ್​ನಲ್ಲಿ ಸೋಲು ಕಾಣದ ಜೋಶ್ ಹೇಜಲ್ವುಡ್‌ (Josh Hazlewood) ಹಾಗೂ ಮಿಚೆಲ್‌ ಸ್ಟಾರ್ಕ್‌ ಗೆಲುವಿನ ನಾಗಾಲೋಟಕ್ಕೆ ಕೊನೆಗೂ ಬ್ರೇಕ್‌ ಬಿದ್ದಿದೆ. ಇದನ್ನೂ ಓದಿ: ದ. ಆಫ್ರಿಕಾ ಈಗ ʻವಿಶ್ವ ಟೆಸ್ಟ್‌ ಚಾಂಪಿಯನ್‌ʼ – 27 ವರ್ಷಗಳ ಬಳಿಕ ಐಸಿಸಿ ಪ್ರಶಸ್ತಿ ಬರ ನೀಗಿಸಿಕೊಂಡ ಹರಿಣರು

ಹೇಜಲ್ವುಡ್‌ 2012ರಿಂದಲೂ ಫೈನಲ್‌ನಲ್ಲಿ ಒಂದೇ ಒಂದು ಬಾರಿಯೂ ಸೋತಿರಲಿಲ್ಲ ಅನ್ನೋದು ಗಮನಾರ್ಹ. 2012ರ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯಲ್ಲಿ ಸಿಡ್ನಿ ಸಿಕ್ಸರ್ಸ್ ಪರ ಫೈನಲ್ ಆಡಿದ್ದ ಹೇಜಲ್ವುಡ್‌ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಇದಾದ ಬಳಿಕ 2015 ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಕಣಕ್ಕಿಳಿದಿದ್ದ ಜೋಶ್‌ ಆಸ್ಟ್ರೇಲಿಯಾ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇನ್ನೂ 2020ರ ಬಿಗ್ ಬ್ಯಾಷ್ ಲೀಗ್​ನಲ್ಲಿ ಸಿಡ್ನಿ ಸಿಕ್ಸರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದಾಗಲೂ ಜೋಶ್ ತಂಡದಲ್ಲಿದ್ದರು. ಹಾಗೆಯೇ 2021 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಐಪಿಎಲ್​ ಟ್ರೋಫಿ ಮುಡಿಗೇರಿಸಿದಾಗಲೂ ಹೇಝಲ್​ವುಡ್ ಪ್ಲೇಯಿಂಗ್‌-11ನಲ್ಲಿದ್ದರು. ಅದಾದ ಬಳಿಕ ಅದೇ ವರ್ಷ ಟಿ20 ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಜೋಶ್ ಹೇಝಲ್​ವುಡ್ ಪ್ರಮುಖ ಪಾತ್ರವಹಿಸಿದ್ದರು. ಇದನ್ನೂ ಓದಿ: `ಬನ್ನಿ ಹಾಪ್ ಕ್ಯಾಚ್’ ರೂಲ್ಸ್‌ಗೆ ಐಸಿಸಿ ಬ್ರೇಕ್ – ಶೀಘ್ರವೇ ಹೊಸ ರೂಲ್ಸ್

ಇನ್ನೂ 2023 ರಲ್ಲಿ ಆಸ್ಟ್ರೇಲಿಯಾ ತಂಡದ ಏಕದಿನ ವಿಶ್ವಕಪ್ ಗೆಲ್ಲುವಲ್ಲಿಯೂ ಹೇಜಲ್ವುಡ್‌ ಪಾತ್ರ ಅಪಾರವಾಗಿತ್ತು. ಅಷ್ಟೇ ಅಲ್ಲ 18 ವರ್ಷಗಳ ಬಳಿಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸುವಲ್ಲಿ ಜೋಶ್‌ ನಿರ್ಣಾಯಕ ಪಾತ್ರ ವಹಿಸಿದ್ದರು. ಆರ್‌ಸಿಬಿ ಪರ ಅತಿಹೆಚ್ಚು ಹಾಗೂ ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ 2ನೇ ಆಟಗಾರನಾಗಿದ್ದರು.

ಹೀಗೆ ಕಳೆದ 1 ದಶಕದಿಂದ ಜೋಶ್ ಹೇಜಲ್ವುಡ್‌ ಫೈನಲ್‌ ಪಂದ್ಯಗಳಲ್ಲಿ ಸೋಲಿನ ರುಚಿ ನೋಡಿಯೇ ಇರಲಿಲ್ಲ. ಹೀಗಾಗಿಯೇ ಹೇಝಲ್​ವುಡ್ ಅವರನ್ನು ಅಂತಿಮ ಪಂದ್ಯದ ಲಕ್ಕಿ ಚಾರ್ಮ್​ ಎಂದು ಪರಿಗಣಿಸಲಾಗಿತ್ತು. ಅಲ್ಲದೇ ಮಿಚೆಲ್‌ ಸ್ಟಾರ್ಕ್‌ ಕೂಡ ಫೈನಲ್‌ ಪಂದ್ಯದಲ್ಲಿ ಸೋಲೇ ನೋಡದಿರುವುದು ಮತ್ತೊಂದು ವಿಶೇಷ ಎನಿಸಿತ್ತು. ಆದ್ರೆ ಈ ಬಾರಿ ಫೈನಲ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ. ಟೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫಿಕ್ರಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​ ಕಿರೀಟಕ್ಕೆ ಮುತ್ತಿಟ್ಟಿದೆ.

ಫೈನಲ್‌ ಪಂದ್ಯದಲ್ಲಿ ಗೆಲವಿಗೆ 282 ರನ್‌ ಗುರಿ ಪಡೆದ ಆಫ್ರಿಕಾ 5 ವಿಕೆಟ್‌ಗಳ ಗೆಲುವು ಸಾಧಿಸಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ – ಆರ್‌ಸಿಬಿ ಮಾರ್ಕೆಟಿಂಗ್‌ ಹೆಡ್‌ ಸೇರಿ ನಾಲ್ವರಿಗೆ ಷರತ್ತುಬದ್ಧ ಜಾಮೀನು

Share This Article