ಅಹಮದಾಬಾದ್ ವಿಮಾನ ದುರಂತ – ಮಗಳ ಸೇರುವ ತವಕದಲ್ಲಿದ್ದ ತಾಯಿ ಸಾವಿನ ಮನೆಗೆ!

Public TV
1 Min Read

ಅಹಮದಾಬಾದ್: ಲಂಡನ್‌ನಲ್ಲಿರುವ (London) ಮಗಳನ್ನು ಸೇರುವ ತವಕದಲ್ಲಿದ್ದ ತಾಯಿ ಸಾವಿನ ಮನೆಗೆ ಸೇರಿರುವ ದುರಂತ ಕಥೆ ಅಹಮದಾಬಾದ್ ವಿಮಾನ ಅಪಘಾತದಲ್ಲಿ (Ahmedabad Plane Crash) ನಡೆದಿದೆ.

ಗುಜರಾತ್‌ನ (Gujarat) ವಡೋದರಾದ ಅಂಜು ಶರ್ಮಾ (55) ಅಹಮದಾಬಾದ್ ವಿಮಾನ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ. 5 ವರ್ಷದ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ಅಂಜು ಶರ್ಮಾ, ವಡೋದರಾದಲ್ಲಿರುವ ಮಗ ಮಿಲನ್ ಶರ್ಮಾ ಜೊತೆ ವಾಸವಿದ್ದರು. ಜೂ.12ರಂದು ಅಂಜು ಶರ್ಮಾ ಲಂಡನ್‌ನಲ್ಲಿ ನೆಲೆಸಿದ್ದ ಹಿರಿಯ ಪುತ್ರಿ ನಿಮ್ಮಿ ಶರ್ಮಾಳ ಭೇಟಿ ಹೊರಟ್ಟಿದ್ದರು. 6 ತಿಂಗಳು ಮಗಳೊಂದಿಗೆ ಕಾಲ ಕಳೆಯಲು ಅಂಜು ಶರ್ಮಾ ತುದಿಗಾಲಿನಲ್ಲಿ ನಿಂತಿದ್ದರು. ಇದನ್ನೂ ಓದಿ: ಅಹಮದಾಬಾದ್ ವಿಮಾನ ದುರಂತ – ದಂತವೈದ್ಯೆಯಾಗಿದ್ದ ಭಾರತೀಯ ಮೂಲದ ಕೆನಡಾ ಪ್ರಜೆ ಸಾವು

ಮಗಳ ಸೇರುವ ತವಕದಲ್ಲಿದ್ದ ತಾಯಿ ಅಂಜು ಶರ್ಮಾ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಅಮ್ಮನ ಮುಖ ನೋಡುವ ತವಕದಲ್ಲಿದ್ದ ಮಗಳಿಗೆ ತಾಯಿಯ ಸಾವಿನ ಸುದ್ದಿ ಬರಸಿಡಿಲು ಬಡಿದಂತಾಗಿದೆ. ತಾಯಿಯ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಲಾಗದೇ ಮಗಳು ನಿಮ್ಮಿ ಶರ್ಮಾ ಶಾಕ್‌ಗೆ ಒಳಗಾಗಿದ್ದಾರೆ. ಮಗಳ ಸಾವಿನ ವಿಚಾರ ತಿಳಿಯದ ವೃದ್ಧ ದಂಪತಿಯು ಅಂಜು ಶರ್ಮಾ ಅವರ ಬರುವಿಕೆಗೆ ಎದುರು ನೋಡುತ್ತಿದ್ದಾರೆ. ಇದನ್ನೂ ಓದಿ: Plane Crash – ಪತ್ನಿಯ ಕೊನೆಯ ಆಸೆಯನ್ನು ಈಡೇರಿಸಿ ಹಿಂತಿರುಗುವಾಗ ಪತಿ ಸಾವು!

ಏನಿದು ಘಟನೆ?
ಅಹಮದಾಬಾದ್ ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟ ಏರ್‌ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು. ಪರಿಣಾಮ ಅಹಮದಾಬಾದ್ ಸಮೀಪದ ಮೇಘನಿ ನಗರದ ಬಿಜೆ ಎಂಬಿಬಿಎಸ್ ಕಾಲೇಜು ಸಂಕೀರ್ಣಕ್ಕೆ ಡಿಕ್ಕಿ ಹೊಡೆದಿತ್ತು. ವಿಮಾನದಲ್ಲಿ ಪೈಲಟ್, ಸಿಬ್ಬಂದಿ ಸೇರಿ ಒಟ್ಟು 242 ಪ್ರಯಾಣಿಕರಿದ್ದರು. ಈ ಪೈಕಿ 241 ಜನ ಸಾವನ್ನಪ್ಪಿದ್ದು, ಓರ್ವ ಪ್ರಯಾಣಿಕ ಪವಾಡ ಸದೃಶವಾಗಿ ಪಾರಾಗಿದ್ದಾರೆ.

Share This Article