ಟ್ರಂಪ್‌ ವಿರುದ್ಧದ ಪೋಸ್ಟ್‌ಗಳಿಗೆ ಮಸ್ಕ್‌ ವಿಷಾದ

By
2 Min Read

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಮತ್ತು ವಿಶ್ವದ ಶ್ರೀಮಂತ ವ್ಯಕ್ತಿ, ಟೆಸ್ಲಾ ಮುಖ್ಯಸ್ಥ ಎಲೋನ್‌ ಮಸ್ಕ್‌ (Elon Musk) ಮತ್ತೆ ಒಂದಾಗುವ ಲಕ್ಷಣಗಳು ಕಾಣಿಸತೊಡಗಿವೆ.

ಟ್ರಂಪ್‌ ವಿರುದ್ಧ ಮಾಡಿದ ಪೋಸ್ಟ್‌ಗಳಿಗೆ ಮಸ್ಕ್‌ ವಿಷಾದ ವ್ಯಕ್ತಪಡಿಸಿ ಅವುಗಳನ್ನು ಡಿಲೀಟ್‌ ಮಾಡಿದ್ದಾರೆ. ಇದನ್ನೂ ಓದಿ: ಟ್ರಂಪ್‌ ಉಚ್ಚಾಟನೆಗೆ ಕರೆ ಕೊಟ್ಟ ಬೆನ್ನಲ್ಲೇ ಮಸ್ಕ್‌ ಕಂಪನಿಗಳಿಗೆ ಶಾಕ್‌!

ಜೂನ್‌ 10 ರಂದು ಟ್ರಂಪ್‌ ಬಳಿ ಎಲೋನ್‌ ಮಸ್ಕ್‌ ಜೊತೆ ಮಾತನಾಡಲು ಮುಂದಾಗುತ್ತೀರಾ ಎಂದು ವರದಿಗಾರರು ಪ್ರಶ್ನೆ ಮಾಡಿದ್ದರು. ಇದಕ್ಕೆ ಟ್ರಂಪ್‌, ನಾನು ನಿಜವಾಗಿಯೂ ಅದರ ಬಗ್ಗೆ ಯೋಚಿಸಿಲ್ಲ. ಅವರು ನನ್ನೊಂದಿಗೆ ಮಾತನಾಡಲು ಬಯಸುತ್ತಾರೆ ಎಂದು ನಾನು ಊಹಿಸುತ್ತೇನೆ. ನಾನು ಅವರ ಸ್ಥಾನದಲ್ಲಿದ್ದರೆ ನಾನು ಮಾತನಾಡಲು ಬಯಸುತ್ತಿದ್ದೆ. ನಾವು ಉತ್ತಮ ಸಂಬಂಧವನ್ನು ಹೊಂದಿದ್ದೇವೆ ಮತ್ತು ನಾನು ಅವರಿಗೆ ಶುಭ ಹಾರೈಸುತ್ತೇನೆ ಎಂದು ಹೇಳಿದ್ದರು.

ಟ್ರಂಪ್‌ vs ಮಸ್ಕ್‌
ಮಸ್ಕ್‌ ಅವರು ಟ್ರಂಪ್‌ ಅವರನ್ನು ಉಚ್ಚಾಟಿಸಿ ಉಪಾಧ್ಯಕ್ಷ ಜೆಡಿ ವಾನ್ಸ್‌ (JD Vance) ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಹೇಳಿದ ಬೆನ್ನಲ್ಲೇ ಟ್ರಂಪ್‌ ಮಸ್ಕ್‌ ಕಂಪನಿ ಜೊತೆ ಮಾಡಿಕೊಂಡಿದ್ದ ಸರ್ಕಾರಿ ಒಪ್ಪಂದಗಳನ್ನು ಕಡಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದರು.

ಟ್ರಂಪ್‌ ಅವರ ಕನಸಿನ ತೆರಿಗೆ ಬಿಲ್‌ಗೆ ಸಂಬಂಧಿಸಿದಂತೆ ಉಂಟಾದ ಭಿನ್ನಭಿಪ್ರಾಯದಿಂದ DOGE ಹುದ್ದೆಯನ್ನು ಮಸ್ಕ್‌ ತೊರೆದಿದ್ದರು. ಈಗ ಅದೇ ವಿಚಾರವನ್ನು ಇಟ್ಟುಕೊಂಡು ಟ್ರಂಪ್‌ ನೀತಿಯನ್ನು ಬಹಿರಂಗವಾಗಿಯೇ ವಿರೋಧಿಸಿ ಎಕ್ಸ್‌ನಲ್ಲಿ ಪೋಸ್ಟ್‌ ಹಾಕುತ್ತಿದ್ದರು. ಇದನ್ನೂ ಓದಿ: ಸರ್ಕಾರದಿಂದ ಹೊರ ಬಂದ ಬೆನ್ನಲ್ಲೇ ಟ್ರಂಪ್‌ ವಿರುದ್ಧ ಮಸ್ಕ್‌ ಕೆಂಡಾಮಂಡಲ

ಕ್ಷಮಿಸಿ, ಇನ್ನು ಮುಂದೆ ನಾನು ಸಹಿಸಲಾರೆ. ಈ ಅತಿರೇಕದ ಮಸೂದೆಯು ಅಸಹ್ಯಕರವಾಗಿದೆ. ಇದಕ್ಕೆ ಮತ ಹಾಕಿದವರಿಗೆ ನಾಚಿಕೆಯಾಗಬೇಕು. ನೀವು ತಪ್ಪು ಮಾಡಿದ್ದೀರಿ ಎನ್ನುವುದು ನಿಮಗೆ ತಿಳಿದಿದೆ. ಈ ಮಸೂದೆ 2.5 ಟ್ರಿಲಿಯನ್ ಡಾಲರ್‌ ಬಜೆಟ್‌ ಕೊರತೆಯನ್ನು ಹೆಚ್ಚಿಸುತ್ತದೆ ಮತ್ತು ಅಮೆರಿಕ ಜನರ ಮೇಲೆ ಭಾರೀ ಪ್ರಮಾಣದ ಸಾಲದ ಹೊರೆಯನ್ನು ಹೊರಿಸುತ್ತದೆ ಎಂದು ಎಕ್ಸ್‌ನಲ್ಲಿ ಖಾರವಾಗಿ ಮಸ್ಕ್‌ ಬರೆದಿದ್ದರು.

ಡೊನಾಲ್ಡ್‌ ಟ್ರಂಪ್‌ ಅವರು ವೆಚ್ಚ ಕಡಿತಗೊಳಿಸಲು ಬಿಗ್‌ ಬ್ಯುಟಿಫುಲ್‌ ಮಸೂದೆಯನ್ನು ಪರಿಚಯಿಸಿದ್ದರು. ಈ ಮಸೂದೆಯ ಬಗ್ಗೆ ಅಮೆರಿಕದ ಆರ್ಥಿಕ ತಜ್ಞರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಮಸ್ಕ್‌, ಈ ಮಸೂದೆ ಬಜೆಟ್‌ ಕೊರತೆಯನ್ನು ಹೆಚ್ಚಿಸುತ್ತದೆ ಎಂದು ದೂರಿದ್ದರು.

Share This Article