ಬೆಂಗಳೂರು: ರಮೇಶ್ ಬಾಬು (Ramesh Babu) ಅವರನ್ನು ವಿಧಾನಪರಿಷತ್ ಸದಸ್ಯ ಸ್ಥಾನ ನಾಮನಿರ್ದೇಶನ ಮಾಡದಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಮತ್ತು ಜಾರಿ ನಿರ್ದೇಶನಾಲಯಕ್ಕೆ (ED) ದೂರು ನೀಡಲಾಗಿದೆ.
ಸಾಮಾಜಿಕ ಹೋರಾಟಗಾರ ತೇಜಸ್ ಗೌಡ (Tejas Gowda) ಅವರು ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಗೆ ಸದಸ್ಯ ಸ್ಥಾನ ನೀಡಬಾರದು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ಸಮುದಾಯದ ದಯಾನಂದ್ ಮೇಲೆ ಏಕೆ ಸಿಎಂಗೆ ಕೋಪ – ಪ್ರತಾಪ್ ಸಿಂಹ ಪ್ರಶ್ನೆ
ದೂರಿನಲ್ಲಿ ಏನಿದೆ?
ಭಾರತದ ಸಂವಿಧಾನದ ವಿಧಿ 171(5) ರ ಅಡಿಯಲ್ಲಿ ಕರ್ನಾಟಕ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವಾಗ ಸಾಹಿತ್ಯ, ವಿಜ್ಞಾನ, ಕಲೆ, ಸಹಕಾರಿ ಚಳುವಳಿ ಅಥವಾ ಸಾಮಾಜಿಕ ಸೇವೆಯಲ್ಲಿ ವಿಶೇಷ ಜ್ಞಾನ ಅಥವಾ ಪ್ರಾಯೋಗಿಕ ಅನುಭವ ಹೊಂದಿರುವ ಸದಸ್ಯರನ್ನು ನಾಮನಿರ್ದೇಶನ ಮಾಡಬೇಕಾಗುತ್ತದೆ.
ರಮೇಶ್ ಬಾಬು ಇದಕ್ಕೆ ಹೊರತಾಗಿ ಕ್ರಿಮಿನಲ್ ಹಿನ್ನೆಲೆ ಇರುವ ವ್ಯಕ್ತಿಯಾಗಿದ್ದಾರೆ. ಉತ್ತರಹಳ್ಳಿಯ ಉತ್ತರಿ ಎಂಬ ಗ್ರಾಮದಲ್ಲಿ ಭೂಕಬಳಿಕೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಹೀಗಿರುವ ವ್ಯಕ್ತಿಗೆ ಸದಸ್ಯ ಸ್ಥಾನ ಕೊಟ್ಟರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅಧಿಕಾರ ದುರುಪಯೋಗವಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಮೋದಿ ಸರ್ಕಾರಕ್ಕೆ ಸೊನ್ನೆ ಅಂಕ: ಸಿದ್ದರಾಮಯ್ಯ
ಯಾವುದೇ ಕಾರಣಕ್ಕೂ ಈ ನಾಮನಿರ್ದೇಶನ ಮಾನ್ಯ ಮಾಡದಂತೆ 100ಕ್ಕೂ ಹೆಚ್ಚು ಪುಟಗಳ ದಾಖಲೆಗಳೊಂದಿಗೆ ತೇಜಸ್ ಗೌಡ ರಾಜ್ಯಪಾಲರು ಹಾಗು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ.