ಬಳ್ಳಾರಿ: ಹಂಪಿಯ (Hampi) ಮಾತಂಗ ಬೆಟ್ಟ (Matanga Hill) ಹತ್ತುವಾಗ ಕಾಲು ಜಾರಿ ಬಿದ್ದ ಪ್ರವಾಸಿಗನನ್ನು ಪೊಲೀಸರು ಹಾಗೂ ಟೂರಿಸ್ಟ್ ಸಹಾಯವಾಣಿ ತಂಡದವರು ರಕ್ಷಣೆ ಮಾಡಿದ್ದಾರೆ.
ಪ್ರವಾಸಿಗನನ್ನು ಮಧ್ಯಪ್ರದೇಶದ (Madhya Pradesh) ಭೋಪಾಲ್‌ನ ಪರ್ವ ಅಸತ್ (18) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಮಗನ ಸಾವಿನ ನೋವು ನಿರಂತರವಾಗಿ ಕಾಡ್ತಿದೆ – ಮೃತ ರೇಣುಕಾಸ್ವಾಮಿ ತಂದೆ
ಹಂಪಿಗೆ ಬಂದಿದ್ದ ಪರ್ವ ಅಸತ್ ಅವರು ಮಾತಂಗ ಬೆಟ್ಟವನ್ನೇರಲು ಮುಂದಾಗಿದ್ದರು. ಈ ವೇಳೆ ಕಾಲು ಜಾರಿದ್ದು, ಗುಹೆ ಮಾದರಿಯಲ್ಲಿದ್ದ ಕೊರಕಲಿಗೆ ಬಿದ್ದಿದ್ದಾರೆ. ಇದನ್ನು ಗಮನಿಸಿದ ಬೇರೆ ಪ್ರವಾಸಿಗರು ತಕ್ಷಣ ಹಂಪಿ ಟೂರಿಸ್ಟ್ ಹೆಲ್ಪ್ಲೈನ್ ತಂಡಕ್ಕೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ದೌಡಾಯಿಸಿದ ತಂಡ ಹಗ್ಗದ ಸಹಾಯದಿಂದ ಪೊಲೀಸರ ಜೊತೆಗೂಡಿ ಪ್ರವಾಸಿಗನನ್ನು ರಕ್ಷಣೆ ಮಾಡಿದ್ದಾರೆ.ಇದನ್ನೂ ಓದಿ: ಏನು ತಪ್ಪು ಮಾಡಿದ್ದಾರೆ ಅಂತ ಕ್ರಮ ಕೈಗೊಳ್ಳಬೇಕು: ಸತ್ಯವತಿಗೆ ಕ್ಲೀನ್‌ಚಿಟ್ ಕೊಟ್ಟ ಸಿಎಂ