Video Viral | ಬೈಕ್‌ನಲ್ಲಿ ಹೋಗ್ತಿದ್ದ ಹಿಂದೂ ಯುವಕ, ಅನ್ಯಕೋಮಿನ ಯುವತಿ ಅಡ್ಡಗಟ್ಟಿ ನೈತಿಕ ಪೊಲೀಸ್ ಗಿರಿ

Public TV
1 Min Read

ರಾಮನಗರ: ಬೈಕ್‌ನಲ್ಲಿ ಹೋಗ್ತಿದ್ದ ಯುವಕ, ಯುವತಿ ಅಡ್ಡಗಟ್ಟಿ ನೈತಿಕ ಪೊಲೀಸ್ ಗಿರಿ ಮೆರೆದಿರೋ ಘಟನೆ ರಾಮನಗರ ಹೊರವಲಯದ ಬೆಂಗಳೂರು-ಮೈಸೂರು ಹಳೇ ಹೆದ್ದಾರಿಯಲ್ಲಿ ನಡೆದಿದೆ.

ಹಿಂದೂ ಯುವಕನ ಜೊತೆ ಮುಸ್ಲಿಂ ಯುವತಿ ಬೈಕ್‌ನಲ್ಲಿ ಹೋಗ್ತಿದ್ದ ಹಿನ್ನೆಲೆ ಮತ್ತೊಂದು ಬೈಕ್‌ನಲ್ಲಿ ಬಂದ ಇಬ್ಬರು ಮುಸ್ಲಿಂ ಯುವಕರು ಬೈಕ್ ಅಡ್ಡಗಟ್ಟಿ ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: ದೈವ ನುಡಿದಂತೆ 3 ದಿನದಲ್ಲಿ ಸಿಕ್ಕಿಬಿದ್ದ ಕಳ್ಳ – ಉಡುಪಿಯಲ್ಲಿ ಕೊರಗಜ್ಜನ ಪವಾಡ

ಮುಸ್ಲಿಂ ಯುವತಿಯನ್ನ ಯಾಕೆ ಬೈಕ್ ನಲ್ಲಿ ಕರೆದುಕೊಂಡು ಹೋಗ್ತಿದಿಯಾ ಎಂದು ಯುವಕನಿಗೆ ಅವಾಜ್ ಹಾಕಿ, ಹಿಂದೂ ಯುವಕನ ಜೊತೆ ಸುತ್ತಾಡ್ತಿದ್ದೀಯಾ, ನಿಮ್ಮ ತಂದೆಗೆ ಪೋನ್ ಮಾಡು ಎಂದು ಯುವತಿಗೂ ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: Exclusive | ಮತ್ತೊಂದು ಭಂಡಾಟ ಬಯಲು – ಸಿಬ್ಬಂದಿ, ಸಮಯಾವಕಾಶದ ಕೊರತೆ ಅಂದ್ರೂ ಡೋಂಟ್ ಕೇರ್ ಅಂದಿದ್ದ ಸರ್ಕಾರ

ಮೊಬೈಲ್‌ನಲ್ಲಿ ವೀಡಿಯೋ ಮಾಡಿ ನೈತಿಕ ಪೊಲೀಸ್ ಗಿರಿ ಮೆರೆದಿರೋ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಾಮನಗರ ಗ್ರಾಮಾಂತರ ಪೊಲೀಸರು ವೀಡಿಯೋ ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: 55ರ ಆಂಟಿ ಜೊತೆಗೆ ಯುವಕ ಲವ್ವಿಡವ್ವಿ; ಲವರ್‌ಗಾಗಿ ಆಕೆಯ ಗಂಡನನ್ನೇ ಕೊಂದು ಸುಟ್ಟುಹಾಕಿದ್ದ ಮೂವರು ಅರೆಸ್ಟ್‌

Share This Article