RCB vs PBKS: ಅಹಮದಾಬಾದ್‌ ಸ್ಟೇಡಿಯಂ ತುಂಬಾ ಆರ್‌ಸಿಬಿ ಫ್ಯಾನ್ಸ್‌

Public TV
1 Min Read

– ಸ್ಟೇಡಿಯಂನಿಂದ ವೀಡಿಯೋ ಹಂಚಿಕೊಂಡ ನಟ ಸಾಯಿಕುಮಾರ್‌

ಅಹಮದಾಬಾದ್: ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಜೂ.3 ಪ್ರಮುಖವಾದ ದಿನ. ಎಲ್ಲರ ಚಿತ್ತ ಐಪಿಎಲ್‌ 2025ರ ಫೈನಲ್‌ ಪಂದ್ಯದ ಕಡೆಗೆ ನೆಟ್ಟಿದೆ. ಆರ್‌ಸಿಬಿ ಗೆಲುವಿಗಾಗಿ ಕೋಟ್ಯಂತರ ಅಭಿಮಾನಿಗಳು ಆಶಿಸುತ್ತಿದ್ದಾರೆ. ಪಂಜಾಬ್‌ ವಿರುದ್ಧ ಫೈನಲ್‌ ಪಂದ್ಯ ನಡೆಯುತ್ತಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಫ್ಯಾನ್ಸ್‌ ಹವಾ ಜೋರಾಗಿದೆ.

ಗುಜರಾತ್‌ನ ಅಹಮದಾಬಾದ್‌ನ ಮೈದಾನದಲ್ಲಿರುವ ಆರ್‌ಸಿಬಿ ಅಭಿಮಾನಿಗಳು ವೀಡಿಯೋ ಮಾಡಿ ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿ ಆರ್‌ಸಿಬಿ ಅಭಿಮಾನಿಗಳೇ ಹೆಚ್ಚಿದ್ದಾರೆ. ಪಂಜಾಬ್‌ ಫ್ಯಾನ್ಸ್‌ ತುಂಬಾ ಕಡಿಮೆ ಇದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಕನ್ನಡದ ಹಿರಿಯ ನಟ ಸಾಯಿಕುಮಾರ್‌ ಕೂಡ ಮೈದಾನದಲ್ಲಿ ವೀಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಅಲ್ಲಿನ ಆರ್‌ಸಿಬಿ ಕ್ರೇಜ್‌ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ. ಸ್ಟೇಡಿಯಂ ತುಂಬಾ ಜನ ಆರ್‌ಸಿಬಿ.. ಆರ್‌ಸಿಬಿ ಎಂದು ಘೋಷಣೆ ಕೂಗುತ್ತಿದ್ದಾರೆ. ಬಹುಪಾಲು ಬೆಂಗಳೂರು ಫ್ಯಾನ್ಸ್‌ ಇಲ್ಲಿದ್ದಾರೆಂದು ತಿಳಿಸಿದ್ದಾರೆ.

ಸ್ಟೇಡಿಯಂನ ಒಳಗೂ ಮತ್ತು ಹೊರಗೂ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್‌ ಅಭಿಮಾನಿಗಳು ತುಂಬಿ ತುಳುಕುತ್ತಿದ್ದಾರೆ. ಕರ್ನಾಟಕದಲ್ಲಂತೂ ಐಪಿಎಲ್‌ ಫೀವರ್‌ ಜೋರಾಗಿದೆ. ಆರ್‌ಸಿಬಿ ಗೆಲುವಿಗಾಗಿ ಜನರು ಪ್ರಾರ್ಥಿಸುತ್ತಿದ್ದಾರೆ.

Share This Article