ಡಿಕೆಶಿ ಪಾದಕ್ಕೆ ಕೋಟಿ ನಮಸ್ಕಾರ ಮಾಡ್ತೀನಿ, ಹೇಮಾವತಿ ಕೈ ಬಿಡಿ: ವಿ.ಸೋಮಣ್ಣ

Public TV
2 Min Read

ಬೀದರ್: ಡಿ.ಕೆ ಶಿವಕುಮಾರ್ (DK Shivakumar) ಪಾದಕ್ಕೆ ಕೋಟಿ ನಮಸ್ಕಾರ ಮಾಡ್ತೀನಿ, ಹೇಮಾವತಿ ಕೈ ಬಿಡಿ ಎಂದು ಕೇಂದ್ರ ಸಚಿವ ವಿ.ಸೋಮಣ್ಣ (V Somanna) ಹೇಳಿದರು.

ಬೀದರ್‌ನಲ್ಲಿ (Bidar) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೇಮಾವತಿ ನೀರು (Hemavati) ಹಂಚಿಕೆ ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಯಾಕೆ ಹೀಗಾದರೋ ಗೊತ್ತಿಲ್ಲ. ರಾಜಕೀಯನೇ ಬೇರೆ, ವಿಶ್ವಾಸನೇ ಬೇರೆ. ಯಾಕೆ ಹೇಮಾವತಿ ಹಿಂದೆ ಬಿದ್ದಿದ್ದಾರೆ ಗೊತ್ತಿಲ್ಲ. ತುಮಕೂರಿನ ಜನ ಬಹಳ ಮುಗ್ಧರಿದ್ದಾರೆ. ನಾನು ಯಾವುದೋ ಊರಿನಿಂದ ಬಂದವನಿಗೆ ವೋಟ್ ಹಾಕಿದ್ದಾರೆ. ನನಗೋಸ್ಕರನಾದರೂ ಆ ಯೋಜನೆ ಕೈ ಬಿಡಿ ಎಂದು ಡಿಕೆಶಿಗೆ ಮನವಿ ಮಾಡುತ್ತೇನೆ ಎಂದರು.ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಅವ್ಯವಸ್ಥೆ, ಚಿಕಿತ್ಸೆ ಕೊರತೆ ಇದ್ರೆ ದೂರು ಕೊಡಿ – ಆರೋಗ್ಯ ಇಲಾಖೆಯಿಂದ ವಾಟ್ಸಪ್‌ ನಂಬರ್‌ ರಿಲೀಸ್‌

ಇಪ್ಪತ್ತು ವರ್ಷದ ಹಿಂದೆ ಮಾಡಿದ ಈ ಯೋಜನೆಯಿಂದ ಜನ ನೆಮ್ಮದಿಯಾಗಿದ್ದಾರೆ. ಜನರನ್ನ ನೆಮ್ಮದಿಯಿಂದ ಇರಲು ಬಿಡಿ. 5 ತಾಲೂಕಿನವರು ಒಳ್ಳೆಯ ಜೀವನ ಮಾಡುತ್ತಿದ್ದಾರೆ. ನೀವ್ಯಾಕೆ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದೀರಿ. ತಿಪ್ಪಗೊಂಡನಹಳ್ಳಿ, ಮಂಚನಬೇಲೆ ಸೇರಿದಂತೆ ಬೇರೆ ಯೋಜನೆಗಳು ನೀವೇ ಮಾಡಿ. ನೀವೇ ಮಹಾರಾಜ, ನೀವೇ ಉಪಮುಖ್ಯಮಂತ್ರಿ ಎಂದು ಹೇಳಿದರು.

ಇದೇ ವೇಳೆ ಬೆಳಗಾವಿ (Belagavi) ಸಾಮೂಹಿಕ ಅತ್ಯಾಚಾರ, ಕರಾವಳಿಯಲ್ಲಿ ಹತ್ಯೆಗಳು ಸೇರಿದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟ ವಿಚಾರದ ಕುರಿತು ಮಾತನಾಡಿ, ಈಗಾಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲವಾದರೆ ಪೂರ್ಣ ದುಷ್ಪರಿಣಾಮವನ್ನು ಸರ್ಕಾರ ಎದುರಿಸಬೇಕಾಗುತ್ತದೆ. ಗೂಬೆ ಕೂರಿಸುವುದನ್ನು ಬಿಟ್ಟು ವಾಸ್ತವದ ಕಡೆ ಗಮನಹರಿಸಬೇಕು. ಕಳ್ಳರನ್ನು ಬಗ್ಗು ಬಡಿಯುವ ಕೆಲಸ ಪೊಲೀಸರು ಮಾಡಬೇಕು. ಪೊಲೀಸರನ್ನು ಫ್ರೀಯಾಗಿ ಬಿಡಬೇಕು, ಫ್ರೀಯಾಗಿ ಬಿಟ್ರೆ ಎಲ್ಲವೂ ಸರಿಹೋಗುತ್ತದೆ. ಈ ಕುರಿತು ಗೃಹ ಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.

ಇದೇ ವೇಳೆ ಹೆಚ್‌ಎಎಲ್ (HAL Airport) ವಿಮಾನ ನಿಲ್ದಾಣ ಆಂಧ್ರಪ್ರದೇಶಕ್ಕೆ ಶಿಫ್ಟ್ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಘಟಕವನ್ನು ನಾವು ಕಬಳಿಸಲ್ಲ. ಇದರ ಅವಶ್ಯಕತೆ ನಮಗಿಲ್ಲ ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಸುಳ್ಳು ಯಾವತ್ತೂ ನಿಜಾ ಆಗೋಕೆ ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು.ಇದನ್ನೂ ಓದಿ: ವಿಜಯಪುರದ ರಸ್ತೆ, ರೈಲು, ವಾಯುಮಾರ್ಗ ಎಲ್ಲವೂ ಅಭಿವೃದ್ಧಿಯಾಗಲಿದೆ: ಎಂ.ಬಿ ಪಾಟೀಲ್

Share This Article