ಬೆಂಗಳೂರು | ಆಟೋ ಚಾಲಕನಿಗೆ ಹಿಂದಿಯಲ್ಲಿ ಯುವತಿಯ ಆವಾಜ್ – ಚಪ್ಪಲಿಯಲ್ಲಿ ಹಲ್ಲೆ ನಡೆಸಿ ಕ್ರೌರ್ಯ

By
1 Min Read

ಬೆಂಗಳೂರು: ಆಟೋ ಚಾಲಕರೊಬ್ಬರಿಗೆ (Auto Driver) ಯುವತಿ ಸಾರ್ವಜನಿಕವಾಗಿ ಚಪ್ಪಲಿಯಲ್ಲಿ ಹಲ್ಲೆ ನಡೆಸಿದ ಅಮಾನುಷ ಘಟನೆ ನಗರದ (Bengaluru) ಬೆಳ್ಳಂದೂರಿನಲ್ಲಿ (Bellandur) ನಡೆದಿದೆ.

ಆಟೋ ಚಾಲಕ ಬೆಳ್ಳಂದೂರಿಗೆ ಬಾಡಿಗೆಗೆ ಬಂದಿದ್ದರು. ಈ ವೇಳೆ ಸೆಂಟ್ರಲ್ ಮಾಲ್ ಬಳಿ ಬೈಕ್‍ನಲ್ಲಿ ಬಂದ ಯುವತಿ, ನೀನು ನಮ್ಮ ವಾಹನಕ್ಕೆ ಟಚ್ ಮಾಡಿದ್ದೀಯಾ ಎಂದು ಆಟೋ ಚಾಲಕನ ಬಳಿ ಹಿಂದಿಯಲ್ಲಿ ಗಲಾಟೆ ಆರಂಭಿಸಿದ್ದಾಳೆ. ಅಲ್ಲದೇ ಅವರ ಮೇಲೆ ಚಪ್ಪಲಿಯಲ್ಲಿ ಹಲ್ಲೆ ನಡೆಸಿದ್ದಾಳೆ.

ಯುವತಿ ಹಲ್ಲೆ ನಡೆಸಿರುವ ವೀಡಿಯೋ ಮೊಬೈಲ್‍ನಲ್ಲಿ ಸೆರೆಯಾಗಿದೆ. ಹಲ್ಲೆ ನಡೆಸುವ ವೇಳೆ, ಸಾರ್ವಜನಿಕರು ಆಟೋ ಚಾಲಕನ ನೆರವಿಗೆ ಬಂದಿದ್ದು, ಯುವತಿಯನ್ನು ಪ್ರಶ್ನಿಸಿದ್ದಾರೆ.

ಪೊಲೀಸ್ ಠಾಣೆಗೆ ಬರುವುದಾಗಿ ಹೇಳಿ ಯುವತಿ ಹಾಗೂ ಆಕೆಯ ಜೊತೆಗಿದ್ದ ಯುವಕ ಇಬ್ಬರೂ ಪರಾರಿಯಾಗಿದ್ದಾರೆ. ಈ ವಿಚಾರವಾಗಿ ಯುವತಿಯನ್ನು ಠಾಣೆಗೆ ಕರೆಸಿ ಕಾನೂನಾತ್ಕವಾಗಿ ಕ್ರಮ ಜರುಗಿಸಬೇಕು ಎಂದು ಆಟೋ ಚಾಲಕ ಬೆಳ್ಳಂದೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಯುವತಿಯ ವಿರುದ್ಧ ಕ್ರಮಕ್ಕೆ ಆಟೋ ಚಾಲಕರು ಒತ್ತಾಯಿಸಿದ್ದಾರೆ.

Share This Article