ಧಾರಾಕಾರ ಮಳೆಗೆ ಜಮೀನುಗಳು ಜಲಾವೃತ – ಲಕ್ಷಾಂತರ ಮೌಲ್ಯದ ಬೆಳೆ ನಾಶ, ರೈತರು ಕಂಗಾಲು

Public TV
1 Min Read

ಬೀದರ್: ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜಮೀನುಗಳು ಜಲಾವೃತಗೊಂಡು ಲಕ್ಷಾಂತರ ಮೌಲ್ಯದ ಬೆಳೆ ನಾಶವಾಗಿರುವ ಘಟನೆ ಕಮಲನಗರ ತಾಲೂಕಿನ ಬಾಲೂರು (Baluru) ಗ್ರಾಮದಲ್ಲಿ ನಡೆದಿದೆ.

ಬಾಲಾಜಿ ಪಾಟೀಲ್, ನೇತಾಜಿ ನಾಗೂರಾವ್ ಸೇರಿದಂತೆ ಹಲವು ರೈತರ ಲಕ್ಷಾಂತರ ರೂ. ಮೌಲ್ಯದ ವಿವಿಧ ಬೆಳೆಗಳು ನಾಶವಾಗಿವೆ. ಶೇಂಗಾ, ಬೆಂಡೆಕಾಯಿ, ಬದನೆಕಾಯ, ಕಬ್ಬು ಸೇರಿದಂತೆ ಹಲವು ಬೆಳೆಗಳು ನಾಶವಾಗಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ಬೆಳೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. 2 ರಿಂದ 3 ಅಡಿ ನೀರು ನಿಂತಿದ್ದು, ಶೇಂಗಾ ಬಹುತೇಕ ಕೊಳೆತು ಹೋಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಪರಿಹಾರವಾದರೂ ನೀಡಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.ಇದನ್ನೂ ಓದಿ: ಲೋಕಸಭಾ ಚುನಾವಣೆ ವೇಳೆ ಹಣ ದುರ್ಬಳಕೆ – ಹರಿಹರ ನಗರಸಭೆ ವ್ಯವಸ್ಥಾಪಕಿ ಸಸ್ಪೆಂಡ್

ಅದೇ ಪಟ್ಟಣದ ಇಂದ್ರಾನಗರ ಕಾಲೋನಿಯ ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಪರಿಣಾಮ ಮನೆಯಲ್ಲಿದ್ದ ಅಕ್ಕಿ, ಈರುಳ್ಳಿ ಸೇರಿದಂತೆ ಧವಸ ದಾನ್ಯಗಳು ನೀರು ಪಾಲಾಗಿದ್ದು, ಜನರು ಪರದಾಡುತ್ತಿದ್ದಾರೆ. ಮನೆಯ ಮುಂದೆ ನೀರು ನಿಂತು ಕೆರೆ ಸೃಷ್ಟಿಯಾಗಿದ್ದು, ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಚರಂಡಿ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ಒಂದೇ ಮಳೆಗೆ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಗೃಹ ಬಳಕೆ ವಸ್ತುಗಳು ಕೂಡ ಹಾಳಾಗಿದ್ದು, ಜನರು ಅಧಿಕಾರಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ.ಇದನ್ನೂ ಓದಿ: ಸೂಪರ್ ಯೋಧನಾಗಿ ತೇಜ್ ಸಜ್ಜಾ ಎಂಟ್ರಿ- ಆ್ಯಕ್ಷನ್ ಪ್ಯಾಕ್ಡ್ ‘ಮಿರಾಯ್’‌ ಚಿತ್ರದ ಟೀಸರ್ ಔಟ್

Share This Article