ಜೈಲಿನಲ್ಲಿ ನಿತ್ಯ ಒಂದೊಂದು ಸೌಲಭ್ಯ ನೀಡುವಂತೆ ಹರ್ಷ ಕೊಲೆ ಆರೋಪಿಗಳು ಕಿರಿಕ್‌

Public TV
1 Min Read

– ಬಳ್ಳಾರಿ ಜೈಲಿನಲ್ಲಿರುವ ಜಿಲಾನ್, ಸೈಯ್ಯದ್ ನಿಹಾಲ್

ಬಳ್ಳಾರಿ: ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ (Harsha Muder Case)  ಆರೋಪಿಗಳು ಬಳ್ಳಾರಿ ಜೈಲಿನಲ್ಲಿ (Ballari Jail) ರಂಪಾಟ ಮಾಡುತ್ತಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಹರ್ಷ ಕೊಲೆ ಪ್ರಕರಣದ ಹತ್ತು ಜನ ಆರೋಪಿಗಳ ಪೈಕಿ ಜಿಲಾನ್ ಹಾಗೂ ಸೈಯ್ಯದ್ ನಿಹಾಲ್ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಈ ಇಬ್ಬರೂ ಜೈಲಿನ ಸಿಬ್ಬಂದಿ, ಅಧಿಕಾರಿಗಳ ಜೊತೆ ನಿತ್ಯ ಜಗಳ ಮಾಡಿ ಅವಾಜ್ ಹಾಕಿ, ಕಿರಿಕ್ ಮಾಡುತ್ತಿದ್ದಾರೆ. ಕಿರಿಕ್‌ ಮಾಡುತ್ತಿರುವ ವಿಡಿಯೋ ಈಗ ಲಭ್ಯವಾಗಿದೆ.

ನಿತ್ಯ ಒಂದೊಂದು ಸೌಲಭ್ಯ ಕೇಳಿ ಜೈಲು ಸಿಬ್ಬಂದಿಗೆ ಧಮ್ಕಿ ಹಾಕುತ್ತಿದ್ದಾರೆ. ಜೈಲಿನಲ್ಲಿ ನಡೆದ ಹಳೆ ಘಟನೆಗಳ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೇಳುತ್ತಿದ್ದಾರೆ. ನಮ್ಮನ್ನು ಸಾಮಾನ್ಯ ಕೈದಿಗಳಂತೆ ಟ್ರೀಟ್ ಮಾಡಿ ಪ್ರತ್ಯೇಕ ಕೊಠಡಿ ಕೊಡಿ, ವಿಶೇಷ ಸೌಲಭ್ಯ ನೀಡಿ ಎಂದು ಇಬ್ಬರು ಗಲಾಟೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಯೋಧರಿಂದಲೇ `ಆಪರೇಷನ್ ಸಿಂಧೂರ’ ಲೋಗೋ ವಿನ್ಯಾಸ

ಶಿವಮೊಗ್ಗದಲ್ಲಿ ಕೊಲೆಯಾದ ಹಿಂದೂ ಕಾರ್ಯಕರ್ತ ಹರ್ಷ

ಜೈಲಿನಲ್ಲಿ ಬೇರೇ ಬೇರೆ ಕೋಣೆಗೆ ಅಥವಾ ಜೈಲರ್ ಕೊಠಡಿಗೆ ಹೋಗುವಾಗ ಕಡ್ಡಾಯವಾಗಿ ಚೆಕಪ್ ಮಾಡಲಾಗುತ್ತದೆ. ಆದರೆ ನಮ್ಮನ್ನು ನೀವು ಪರಿಶೀಲನೆ ಮಾಡಬೇಡಿ ಎಂದು ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೇ ಸಣ್ಣ ಪುಟ್ಟ ವಿಚಾರಕ್ಕೂ ಜೈಲು ಸಿಬ್ಬಂದಿಯನ್ನು ಆರೋಪಿಗಳು ನಿಂದಿಸುತ್ತಿದ್ದಾರೆ. ಇದನ್ನೂ ಓದಿ: ಮಹಿಂದ್ರಾ ಥಾರ್‌, ರಾಯಲ್‌ ಎನ್‌ಫೀಲ್ಡ್‌, ರೋಲೆಕ್ಸ್ ವಾಚ್‌, 1 ಕೋಟಿ ಮೌಲ್ಯದ ಫ್ಲಾಟ್‌ ಹೊಂದಿದ್ದ ಲೇಡಿ ಕಾನ್‌ಸ್ಟೇಬಲ್‌ ಅರೆಸ್ಟ್‌!

ಆರೋಪಿಗಳು ಇದೇ ರೀತಿ ಕಿರಿಕ್ ಮಾಡಿ ಬೆಂಗಳೂರು, ಗುಲ್ಬರ್ಗ, ಧಾರವಾಡ ಜೈಲಿಗೆ ಹೋಗಿದ್ದರು. ಈಗ ಅದೇ ಚಾಳಿಯನ್ನು ಬಳ್ಳಾರಿ ಜೈಲಿನಲ್ಲೂ ಮುಂದುವರಿಸುತ್ತಿದ್ದಾರೆ.

Share This Article