ಬೆಂಗ್ಳೂರಿಗೆ ವರದಾನವಾದ ನಿರಂತರ ಮಳೆ- ಜೂನ್‍ವರೆಗೆ ನೀರಿನ ಸಮಸ್ಯೆ ಇಲ್ಲ

Public TV
1 Min Read

ಬೆಂಗಳೂರು: ಕಳೆದ ಕೆಲವು ವಾರಗಳಿಂದ ನಿರಂತರವಾಗಿ ಸುರಿದ ಮಳೆ ಬೆಂಗಳೂರಿಗೆ ವರದಾನವಾಗಿದೆ. ಮಳೆಯಿಂದಾಗಿ ನಗರದ ನೀರಿನ ಸಮಸ್ಯೆ 15 ದಿನಗಳ ಕಾಲ ಮುಂದೂಡಿದೆ.

ಮಳೆಯಿಂದಾಗಿ ಜಲಾಶಯಗಳಲ್ಲಿ ಒಳಹರಿವು ಹೆಚ್ಚಿದ್ದು, ಮಳೆರಾಯ ಬೆಂಗಳೂರಿಗರ ನೀರಿನ ದಾಹ ನೀಗಿಸಿದ್ದಾನೆ.

ಕೆಆರ್‍ಎಸ್ ನಲ್ಲಿ ಶೇಖಡಾ 30 ರಷ್ಟು ಒಳಹರಿವು ಹೆಚ್ಚಳವಾಗಿದೆ. ಕಳೆದ ವರ್ಷ ಮೇ ಅಂತ್ಯದಲ್ಲೆ ಜಲಾಶಯ ಖಾಲಿಯಾಗಿತ್ತು. ಆದ್ರೆ ಈಗ ಜಲಾಶಯದಲ್ಲಿ 3.5 ಟಿಎಮ್‍ಸಿ ನೀರು ಲಭ್ಯವಿದ್ದು, ಜೂನ್ ಮೊದಲ ವಾರದವರೆಗೆ ನೀರಿನ ಸಮಸ್ಯೆಯಿಲ್ಲ ಎಂದು ಜಲಮಂಡಳಿ ಮುಖ್ಯ ಅಭಿಯಂತರರಾದ ಕೆಂಪರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಆರು ತಿಂಗಳೊಳಗಾಗಿ ಎಸ್‍ಟಿಪಿ(ತ್ಯಾಜ್ಯ ಶುದ್ದೀಕರಣ ಘಟಕ) ಆಳವಡಿಸಿಕೊಳ್ಳದಿದ್ದರೆ ದಂಡ ಬೀಳಲಿದೆ ಎಂದು ಅಪಾರ್ಟ್‍ಮೆಂಟ್ ಮಾಲೀಕರಿಕೆ ಎಚ್ಚರಿಕೆ ನೀಡಿದ್ದಾರೆ.ಡಿಸೆಂಬರ್ ಅಂತ್ಯದೊಳಗೆ ಎಸ್‍ಟಿಪಿ ಆಳವಡಿಸಿಕೊಳ್ಳದಿದ್ದರೆ ಮೊದಲು ವಾಟರ್ ಬಿಲ್‍ನ ಶೇಖಡ 50 ರಷ್ಟು ದಂಡ, ತದನಂತರ ಶೇಖಡ ನೂರರಷ್ಟು ದಂಡ ವಿಧಿಸಲು ಜಲಮಂಡಳಿ ನಿರ್ಧಾರ ಮಾಡಿದೆ.

ಬೆಳ್ಳಂದೂರು ಕೆರೆ ತ್ಯಾಜ್ಯ ಹರಿಬಿಡುವ ಕಾರ್ಖಾನೆಗಳಿಗೆ 5 ಲಕ್ಷ ರೂ. ದಂಡ ಬೀಳಲಿದೆ ಎಂದು ಕೆಂಪರಾಮಯ್ಯ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *