ಮಾಜಿ ಸಚಿವ ವೀರಕುಮಾರ ಪಾಟೀಲ ಪುತ್ರ ಪ್ರೀತಮ್ ಅರೆಸ್ಟ್

By
1 Min Read

ಚಿಕ್ಕೋಡಿ: ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವೀರಕುಮಾರ ಪಾಟೀಲ (Veerkumar Patil) ಪುತ್ರ ಪ್ರೀತಮ್‌ನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.

- Advertisement -

ಸಚಿವ ಸತೀಶ ಜಾರಕಿಹೊಳಿ (Satish Jarkiholi) ಆಪ್ತ ಹಾಗೂ ಮಾಜಿ ಸಚಿವ ವೀರಕುಮಾರ ಪಾಟೀಲ ಅವರ ಪುತ್ರ ಪ್ರೀತಮ್ ಬಂಧಿತ ಆರೋಪಿ.ಇದನ್ನೂ ಓದಿ:ಕೊಪ್ಪಳದ ಅಂಜನಾದ್ರಿ ದೇವಸ್ಥಾನ ಮುಜರಾಯಿ ಇಲಾಖೆ ವ್ಯಾಪ್ತಿಗೆ – ರಾಜ್ಯ ಸರ್ಕಾರಕ್ಕೆ ಸುಪ್ರೀಂ ನೋಟಿಸ್

ವೈಷ್ಣವಿ ಹಗವಣೆ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ವೈಷ್ಣವಿ ಮಾವ ರಾಜೇಂದ್ರ, ಮೈದುನ ಸುಶೀಲ್‌ಗೆ ಆಶ್ರಯ ಹಾಗೂ ಆರ್ಥಿಕ ಸಹಾಯ ಆರೋಪದಡಿ ಪ್ರೀತಮ್‌ನನ್ನು ಬಂಧಿಸಲಾಗಿದೆ.

- Advertisement -

ಕೊಲೆ ಆರೋಪಿಗಳು ಅಜೀತ ಪವಾರ ಬಣದ ಎನ್‌ಸಿಪಿ ಪಕ್ಷದ ಮುಖಂಡರಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ವೈಷ್ಣವಿ ಕೊಲೆ ಪ್ರಕರಣ ಸಂಚಲನ ಮೂಡಿಸಿದೆ.ಇದನ್ನೂ ಓದಿ: ಕೊಪ್ಪಳದ ಅಂಜನಾದ್ರಿ ದೇವಸ್ಥಾನ ಮುಜರಾಯಿ ಇಲಾಖೆ ವ್ಯಾಪ್ತಿಗೆ – ರಾಜ್ಯ ಸರ್ಕಾರಕ್ಕೆ ಸುಪ್ರೀಂ ನೋಟಿಸ್

- Advertisement -

- Advertisement -

Share This Article