ಮಳೆಯಲಿ ʻಮಸಾಲಾ ಟೀʼ ಜೊತೆಯಲಿ…

By
1 Min Read

ಕೆಲವರಿಗೆ ಎಲ್ಲ ಸಮಸ್ಯೆಗಳಿಗೆ ಮದ್ದು ಟೀ, ಇನ್ನೂ ಕೆಲವರಿಗೆ ಕಾಫಿ. ಹೌದು, ಕೆಲವು ಸಾರಿ ಟೀ ಒಂದಿದ್ದರೆ ಸಾಕು ಎಂದೇನಿಸುತ್ತದೆ. ಮನಸ್ಸಿಗೆ ಶಾಂತಿ, ಗೊಂದಲಕ್ಕೆ ಪರಿಹಾರ ಎಲ್ಲವನ್ನೂ ಕೊಡುವ ಶಕ್ತಿಯಿರುವುದು ಟೀಗೆ ಮಾತ್ರ. ಅದರಲ್ಲೂ ಮಸಾಲಾ ಚಹಾ ಅಂತೂ ಇನ್ನೊಂದು ಕೈ ಮೇಲೆಯೇ.. ಒಂದು ಗುಟುಕು ಹೀರಿದರೂ ಅಬ್ಬಾ! ಎಲ್ಲಿಲ್ಲದ ಸ್ವರ್ಗ. ಅದರಲ್ಲಿಯೂ ಈ ತಣ್ಣನೆಯ ವಾತಾವರಣಕ್ಕೆ ಬಿಸಿ ಬಿಸಿ ಮಸಾಲಾ ಚಹಾ ಜೊತೆಗಿರದ್ದರೆ ಅದರ ಅನುಭವ ಬೇರೆಯೇ..

ಬೇಕಾಗುವ ಸಾಮಗ್ರಿಗಳು:
ಹಾಲು – 1 ಕಪ್‌
ನೀರು – 1 ಕಪ್
ಚಹಾ ಪುಡಿ
ಸಕ್ಕರೆ
ಏಲಕ್ಕಿ
ಶುಂಠಿ
ದಾಲ್ಚಿನ್ನಿ
ಲವಂಗ
ಮೆಣಸು

ತಯಾರಿಸುವ ವಿಧಾನ:
ಮೊದಲಿಗೆ ಒಂದು ಲೋಟಕ್ಕೆ ನೀವು ಮಾಡುವ ಚಹಾದ ಅಳತೆಯ ಆಧಾರದ ಮೇಲೆ ಟೀ ಪುಡಿ ಹಾಗೂ ಮಸಾಲೆಗಳನ್ನು ಹಾಕಬೇಕು. 2 ಕಪ್‌ ಟೀ ಮಾಡುವುದಾದರೆ 2 ಏಲಕ್ಕಿ, ½ ಚಮಚ ಶುಂಠಿ, ಚಿಕ್ಕ ದಾಲ್ಚಿನ್ನಿ, 2 ಲವಂಗ, 2 ಮೆಣಸು ಹಾಗೂ ಟೀ ಪುಡಿ ಹಾಕಿಕೊಳ್ಳಬೇಕು. ಒಂದು ಕುಕ್ಕರ್‌ನಲ್ಲಿ ನೀವು ಮಸಾಲೆ ಹಾಕಿದ ಲೋಟವನ್ನು, ಅದರ ಬಾಯಿಗೆ ಬಟ್ಟೆಯನ್ನು ಕಟ್ಟಿ ಇಡಬೇಕು. ಬಳಿಕ ಕುಕ್ಕರ್‌ ಒಳಗೆ, ಲೋಟದ ಹೊರಗೆ ಕಾಲು ಭಾಗ ಬರುವಷ್ಟು ನೀರು ಹಾಕಿಕೊಳ್ಳಬೇಕು. ಬಳಿಕ ಚೆನ್ನಾಗಿ ಒಂದು ವಿಸಿಲ್‌ ಕೂಗಿಸಿ ಬಿಡಬೇಕು.

ಬಳಿಕ ಕುಕ್ಕರ್‌ನಿಂದ ಲೋಟ ಹೊರತೆಗೆದಾಗ ಮಸಾಲೆಗಳು ನೀರು ಬಿಟ್ಟಿಕೊಂಡಿರುತ್ತವೆ. ಇನ್ನೊಂದು ಪಾತ್ರೆಗೆ ಹಾಲು ಹಾಕಿ, ನಂತರ ಅದು ಕುದಿಯಲು ಆರಂಭಿಸಿದಾಗ ಅದಕ್ಕೆ ಮಸಾಲೆಯ ನೀರನ್ನು ಹಾಕಿ ಅದಕ್ಕೆ ಸಕ್ಕರೆ ಹಾಕಿದರೆ ಸಾಕು… ಸ್ವಲ್ಪ ಹೊತ್ತಿನ ನಂತರ ಬಿಸಿಬಿಸಿಯಾದ ಮಸಾಲೆ ಟೀ ತಯಾರಾಗುತ್ತದೆ.

ಈ ಮಳೆಗೆ ಒಂದು ಕಪ್‌ ಬಿಸಿಯಾದ ಮಸಾಲಾ ಟೀ ಮಾಡಿ ಕುಡಿಯಿರಿ…

Share This Article