ಪರಮೇಶ್ವರ್‌ ಬೆನ್ನಿಗೆ ನಿಂತ ಸಿಎಂ, ಸಚಿವರು – ನಾವಿದ್ದೇವೆ ಎಂದ ಹೈಕಮಾಂಡ್

Public TV
1 Min Read

ಬೆಂಗಳೂರು: ಇ.ಡಿ ದಾಳಿ ಬೆನ್ನಲ್ಲೇ ಇಂದು ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿ ಮಾಡಿ ಗೃಹ ಸಚಿವ ಜಿ.ಪರಮೇಶ್ವರ್‌ (G Parameshwar) ವಿವರಣೆ ನೀಡಿದ್ದಾರೆ. ಸಿಎಂ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯ ಭೇಟಿ ಮಾಡಿದ ಪರಮೇಶ್ವರ್, ಇಡಿ ದಾಳಿ ಬಗ್ಗೆ ಮೌಖಿಕ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.

ರನ್ಯಾ ರಾವ್ (Ranya Rao) ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ವಿಚಾರವಾಗಿ ಇ.ಡಿ ಮಾಹಿತಿ ಹೊರಬಿಟ್ಟ ಬಗ್ಗೆಯೂ ಚರ್ಚೆ ನಡೆದಿದ್ದು, ಸಿಎಂ, ಸಚಿವರು ಪರಂ ಬೆನ್ನಿಗೆ ನಿಂತಿದ್ದಾರೆ. ಸಿಎಂ ಭೇಟಿ ವೇಳೆ ಪರಮೇಶ್ವರ್ ಜೊತೆ ಸತೀಶ್ ಜಾರಕಿಹೊಳಿ, ಹೆಚ್‌.ಸಿ.ಮಹದೇವಪ್ಪ, ಜಮೀರ್ ಅಹಮದ್ ಉಪಸ್ಥಿತರಿದ್ದರು. ಇದನ್ನೂ ಓದಿ: ಪರಂಗೆ ಇಡಿ ಈಟಿ – 140 ಕೋಟಿ ವ್ಯವಹಾರ ನಡೆದ್ರೂ 95 ಕೋಟಿಗೆ ಖರೀದಿ?

ಹೈಕಮಾಂಡ್ ಕೂಡ ನಿಮ್ ಜೊತೆ ಇದೆ. ನಾವು ನಿಮ್ ಜೊತೆ ಇರ್ತೀವಿ. ಕಾನೂನು ಹೋರಾಟ, ರಾಜಕೀಯ ಹೋರಾಟ ಒಟ್ಟಿಗೆ ಮಾಡೋಣ ಎಂದು ಸಿಎಂ ಬಲ ತುಂಬಿದರು ಎಂಬುದು‌ ಮೂಲಗಳ ಮಾಹಿತಿ.

ಬುಧವಾರ ಬೆಳ್ಳಂಬೆಳಗ್ಗೆ ಸಚಿವ ಜಿ.ಪರಮೇಶ್ವರ್ ಶಿಕ್ಷಣ ಸಂಸ್ಥೆ ಮೇಲೆ ಇಡಿ (ED)ದಾಳಿ ನಡೆಸಿತ್ತು. ಈ ನಡುವೆ ಪರಮೇಶ್ವರ್ ಕ್ರಯ ಮಾಡಿದ್ದ ಎಚ್.ಎಮ್.ಎಸ್ ಕಾಲೇಜಿನ ಕ್ರಯಪತ್ರವನ್ನು ವಶಕ್ಕೆ ಪಡಿಸಿಕೊಂಡಿರುವ ಇಡಿ ಅಧಿಕಾರಿಗಳು, ಶೋಧಕಾರ್ಯವನ್ನು ಮುಂದುವರಿಸಿದ್ದಾರೆ. ಇದನ್ನೂ ಓದಿ: ಗೃಹ ಸಚಿವ ಪರಂ ಕೇಸ್‌ಗೆ ರನ್ಯಾರಾವ್ ಲಿಂಕ್?

ಪರಮೇಶ್ವರ್ ಒಡೆತನದ ತುಮಕೂರಿನ ಹೆಗ್ಗೆರೆಯಲ್ಲಿರುವ ಸಿದ್ದಾರ್ಥ ಮೆಡಿಕಲ್ ಕಾಲೇಜು, ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜು ಮತ್ತು ನೆಲಮಂಗಲದ ಟಿ. ಬೇಗೂರು ಬಳಿ ಇರುವ ಮೆಡಿಕಲ್ ಕಾಲೇಜುಗಳ ಮೇಲೆ ಇಡಿ ದಾಳಿ ನಡೆಸಿದೆ. ಈ ವೇಳೆ ಕಾಲೇಜಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದೆ.

Share This Article