ರೇಸ್ ವೇಳೆ ನಟ ಅಜಿತ್ ಕಾರ್ ಟಯರ್ ಸ್ಫೋಟ!

Public TV
1 Min Read

ಕಾರ್ ರೇಸ್‌ ವೇಳೆ ನಟ ಅಜಿತ್ ಕುಮಾರ್‌ (Actro Ajith Kumar) ಕಾರ್ ಟಯರ್ ಸ್ಫೋಟಗೊಂಡು, ಅಪಘಾತಕ್ಕೀಡಾಗಿದೆ. ನೆದರ್ಲ್ಯಾಂಡ್‌ನಲ್ಲಿ ನಡೆಯುತ್ತಿರುವ ಯುರೋಪಿಯನ್ ಜಿಟಿ 4 ರೇಸ್‌ನಲ್ಲಿ ಈ ಅವಘಡ ಸಂಭವಿಸಿದೆ.

ಅಜಿತ್ ಕಾರಿನ ಟೈರ್ ಸಿಡಿದಾಗ, ಅವರು ತಕ್ಷಣ ಟ್ರ್ಯಾಕ್ ನಿಂದ ಹೊರಬಂದು ಕಾರನ್ನು ನಿಧಾನವಾಗಿ ತೆಗೆದುಕೊಂಡು ಹೋಗಿದ್ದಾರೆ. ಟೈರ್‌ ಸ್ಫೋಟದಿಂದ ಕಾರಿನ ಮುಂಭಾಗವೂ ಹಾನಿಗೊಳಗಾಗಿದೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ಇನ್ನೂ ಇದೇ ವರ್ಷ ಫೆಬ್ರವರಿಯಲ್ಲಿ ಸ್ಪೇನ್‌ನಲ್ಲಿ (Spain) ನಡೆದ ರೇಸ್‌ನಲ್ಲಿ (Car Race) ನಟ ಅಜಿತ್ ಕುಮಾರ್ (Ajith Kumar) ಅವರ ಕಾರು (Accident) ಅಪಘಾತಕ್ಕೀಡಾಗಿತ್ತು. ಸ್ಪೇನ್‌ನ ವೇಲೆನ್ಸಿಯಾದಲ್ಲಿ ನಡೆದ ರೇಸ್‌ನಲ್ಲಿ ಅಜಿತ್ ಭಾಗವಹಿಸಿದ್ದರು. ಈ ವೇಳೆ ಅವರ ಕಾರು ಇನ್ನೊಂದು ಕಾರಿಗೆ ಹಿಂಭಾಗದಿಂದ ಡಿಕ್ಕಿಯಾಗಿ, ಹಲವಾರು ಬಾರಿ ಪಲ್ಟಿಯಾಗಿ ನಿಂತಿತ್ತು. ಈ ಅಪಘಾತದ ವೀಡಿಯೊವನ್ನು ಅಜಿತ್ ಅವರ ವ್ಯವಸ್ಥಾಪಕ ಸುರೇಶ್ ಚಂದ್ರ ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು.

ಅಜಿತ್ ಪ್ರಸ್ತುತ ಕಾರ್ ರೇಸಿಂಗ್ ಮೇಲೆ ಗಮನ ಹರಿಸುತ್ತಿದ್ದಾರೆ. ಅದಕ್ಕಾಗಿ 8 ತಿಂಗಳಲ್ಲಿ 42 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

Share This Article