ಆಪರೇಷನ್ ಸಿಂಧೂರ ಸಕ್ಸಸ್ – `ತಿರಂಗಾ ಯಾತ್ರೆ’ಯಲ್ಲಿ ಅಮಿತ್ ಶಾ ಭಾಗಿ

Public TV
1 Min Read

ಗಾಂಧಿನಗರ: ಆಪರೇಷನ್ ಸಿಂಧೂರ(Operation Sindoor) ಯಶಸ್ಸಿನ ಸಲುವಾಗಿ ಭಾರತೀಯ ಸಶಸ್ತ್ರ ಪಡೆಗಳನ್ನು ಗೌರವಿಸಲು ಭಾನುವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ ಹಮ್ಮಿಕೊಂಡಿದ `ತಿರಂಗಾ ಯಾತ್ರೆ’ಯನ್ನು(Tiranga Yatra) ಕೇಂದ್ರ ಗೃಹಸಚಿವ ಅಮಿತ್ ಶಾ(Amit Shah) ಮುನ್ನಡೆಸಿದರು.

ಈ ತಿರಂಗಾ ಯಾತ್ರೆಯ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ರಾಷ್ಟ್ರದ ಧೈರ್ಯಶಾಲಿ ಯೋಧರು ತಮ್ಮ ಶೌರ್ಯದಿಂದ ಆಪರೇಷನ್ ಸಿಂಧೂರವನ್ನು ಭಯೋತ್ಪಾದನೆಯ ನಿರ್ಮೂಲನೆಯ ಸಮಾನಾರ್ಥಕ ಪದವನ್ನಾಗಿಸಿದ್ದಾರೆ. ಈ ಕಾರ್ಯಾಚರಣೆಯ ಐತಿಹಾಸಿಕ ಯಶಸ್ಸಿಗಾಗಿ ಸೈನಿಕರನ್ನು ಗೌರವಿಸಲು ಗಾಂಧಿನಗರ ಲೋಕಸಭೆಯಲ್ಲಿ ಆಯೋಜಿಸಲಾದ ತಿರಂಗಾ ಯಾತ್ರೆಯಿಂದ ನೇರಪ್ರಸಾರ ಎಂದು ಬರೆದುಕೊಂಡಿದ್ದರು. ಇದನ್ನೂ ಓದಿ: ಭಾರೀ ಮಳೆಯಿಂದ ಪಂದ್ಯ ರದ್ದು – ನಿರಾಸೆಗೊಂಡಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಆರ್‌ಸಿಬಿ!

ಬಿಜೆಪಿಯು ಈ ತಿರಂಗಾ ಯಾತ್ರೆಯನ್ನು ಮೇ 13ರಂದು ಆರಂಭಿಸಿದ್ದು, ಮೇ 23ರಂದು ಇದು ಕೊನೆಗೊಳ್ಳಲಿದೆ. ಆಪರೇಷನ್ ಸಿಂಧೂರದ ಮೂಲಕ ಉಗ್ರರನ್ನು ಮಟ್ಟಹಾಕಿದ ಭಾರತೀಯ ಸೇನೆ(Indian Army) ಹಾಗೂ ಸೈನಿಕರ ಶೌರ್ಯವನ್ನು ಗೌರವಿಸುವ ಉದ್ದೇಶದಿಂದ ಈ ತಿರಂಗಾ ಯಾತ್ರೆ ಮಾಡಲಾಗುತ್ತಿದೆ.

Share This Article