ಸಿನಿಮಾ ಗೆದ್ದ ಬೆನ್ನಲ್ಲೇ ದೇವಿ ಮೊರೆ ಹೋದ ಶ್ರೀನಿಧಿ ಶೆಟ್ಟಿ

Public TV
1 Min Read

ನ್ನಡತಿ ಶ್ರೀನಿಧಿ ಶೆಟ್ಟಿ (Srinidhi Shetty) ಅವರು ನಾನಿ ಜೊತೆ ನಟಿಸಿದ ‘ಹಿಟ್ 3’ (HIT 3) ಸಿನಿಮಾ ಸಕ್ಸಸ್ ಕಂಡಿದೆ. ಈ ಬೆನ್ನಲ್ಲೇ ಅವರು ಸದ್ಗುರು ಆಶ್ರಮಕ್ಕೆ ಭೇಟಿ ನೀಡಿ ಲಿಂಗ ಭೈರವಿ ಮೊರೆ ಹೋಗಿದ್ದಾರೆ. ಇದನ್ನೂ ಓದಿ:ರಶ್ಮಿಕಾರಲ್ಲಿ ದೇವರಕೊಂಡಗೆ ಪತ್ನಿಯಾಗುವ ಗುಣವಿದ್ಯಾ?- ನಟ ಹೇಳೋದೇನು?

‘ಹಿಟ್ 3’ ಚಿತ್ರ ಗೆದ್ದ ಬೆನ್ನಲ್ಲೇ ಸದ್ಗುರು ಆಶ್ರಮಕ್ಕೆ ಭೇಟಿ ನೀಡಿ ಕಾಲ ಕಳೆದಿದ್ದಾರೆ. ಅಲ್ಲಿ ಲಿಂಗ ಭೈರವಿ ದೇವಿಯ ಪೂಜೆ ಪುರಸ್ಕಾರಗಳನ್ನು ಮಾಡಿದ್ದಾರೆ. ಪೂಜೆಯ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

ಯಶ್ (Yash) ನಟನೆಯ ‘ಕೆಜಿಎಫ್ 2’ (KGF 2) ಚಿತ್ರದ ಸಕ್ಸಸ್ ಬಳಿಕ ಒಂದೊಳ್ಳೆಯ ಸಿನಿಮಾಗಾಗಿ ನಟಿ ಕಾಯುತ್ತಿದ್ದರು. ಈಗ ಹಿಟ್ 3ಯಿಂದ ಸಿನಿಮಾ ಕೆರಿಯರ್‌ಗೆ ಬ್ರೇಕ್ ಸಿಕ್ಕಿದೆ. ಇದನ್ನೂ ಓದಿ:ತ್ರಿಷಾ ಜೊತೆ ರೊಮ್ಯಾನ್ಸ್.. ಅಭಿರಾಮಿಗೆ ಲಿಪ್‌ಲಾಕ್ – ಕಮಲ್ ಹಾಸನ್ ʻಥಗ್ ಲೈಫ್‌ʼ!

ತೆಲುಸು ಕದಾ ಚಿತ್ರದಲ್ಲಿ ನಟಸಿದ್ದು ಮತ್ತು ರಾಶಿ ಖನ್ನಾ ಜೊತೆ ಶ್ರೀನಿಧಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ರಿಲೀಸ್ ಬಗ್ಗೆ ಇನ್ನೂ ಅಪ್‌ಡೇಟ್ ಸಿಗಬೇಕಿದೆ. ಕನ್ನಡದ ನಟ ಸುದೀಪ್ ಮುಂದಿನ ಸಿನಿಮಾಗೆ ಶ್ರೀನಿಧಿ ನಾಯಕಿ ಎಂದು ಚಿತ್ರತಂಡ ಘೋಷಿಸಿತ್ತು. ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬೇಕಿದೆ.

Share This Article