‘ಆಂಧ್ರ ಕಿಂಗ್’ ಆದ ಉಪೇಂದ್ರ ಕಟೌಟ್ ಮುಂದೆ ರಾಮ್ ಪೋತಿನೇನಿ ಸಂಭ್ರಮ- ಟೀಸರ್ ಔಟ್

Public TV
2 Min Read

ನ್ನಡದ ಸ್ಟಾರ್ ನಟ ಉಪೇಂದ್ರ (Upendra) ಈಗ ಆಂಧ್ರದ ಕಿಂಗ್ ಆಗಿದ್ದಾರೆ. ‘ಆಂಧ್ರ ಕಿಂಗ್ ತಾಲೂಕಾ’ (Andhra King Taluka) ಚಿತ್ರದಲ್ಲಿ ಸೂಪರ್ ಸ್ಟಾರ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ರಾಮ್ ಪೋತಿನೇನಿ ಕೂಡ ಪವರ್‌ಫುಲ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟೀಸರ್ ರಿಲೀಸ್ ಆಗಿ ಯೂಟ್ಯೂಬ್‌ನಲ್ಲಿ ಸಖತ್ ವಿವ್ಸ್ ಪಡೆಯುತ್ತಿದೆ. ಇದನ್ನೂ ಓದಿ:ಮಲಯಾಳಂ ಚಿತ್ರರಂಗ ನನ್ನ ವೃತ್ತಿಜೀವನವನ್ನೇ ಬದಲಿಸಿದೆ: ಕಮಲ್ ಹಾಸನ್

‘ಆಂಧ್ರ ಕಿಂಗ್ ತಾಲೂಕಾ’ ಚಿತ್ರದಲ್ಲಿ ಉಪೇಂದ್ರ ಆಂಧ್ರದ ಕಿಂಗ್ ಆಗಿ ಸೂರ್ಯ ಕುಮಾರ್ ಎಂಬ ಸೂಪರ್ ಸ್ಟಾರ್ ಆಗಿ ನಟಿಸಿದ್ದಾರೆ. ಉಪೇಂದ್ರ ಅಲಿಯಾಸ್ ಸೂರ್ಯರನ್ನು ಆರಾಧಿಸುವ ಅಭಿಮಾನಿಯಾಗಿ ರಾಮ್ ನಟಿಸಿದ್ದಾರೆ. ಒಬ್ಬ ಸೂಪರ್ ಸ್ಟಾರ್ ಅಭಿಮಾನಿಯಾಗಿರುವ ನಾಯಕನ ಜೀವನ ಹೇಗಿರುತ್ತದೆ. ನೆಚ್ಚಿನ ನಟನ ಸಿನಿಮಾ ಬಿಡುಗಡೆಯಾದಾಗ ಅಭಿಮಾನಿಗಳು ಹೇಗೆಲ್ಲಾ ಸಂಭ್ರಮಿಸುತ್ತಾರೆ. ಆಗ ಥಿಯೇಟರ್ ಮುಂದೆ ಹೇಗೆಲ್ಲಾ ಗಲಾಟೆ ಇರುತ್ತದೆ ಎಂಬುದನ್ನು ಈ ಸಿನಿಮಾ ಮೂಲಕ ತೋರಿಸಲು ಹೊರಟಿದ್ದಾರೆ. ಉಪೇಂದ್ರ ಮತ್ತು ರಾಮ್ ಪೋತಿನೇನಿ ಇಬ್ಬರ ಪಾತ್ರಕ್ಕೂ ಮಹತ್ವ ಕೊಡಲಾಗಿದೆ. ಇದನ್ನೂ ಓದಿ:ಟಾಲಿವುಡ್‌ನತ್ತ ನಟ- ‘ಪುಷ್ಪ 2’ ನಿರ್ಮಿಸಿದ್ದ ಸಂಸ್ಥೆ ಜೊತೆ ಕೈಜೋಡಿಸಿದ ಉಪೇಂದ್ರ

 

View this post on Instagram

 

A post shared by Mythri Movie Makers (@mythriofficial)

ಈ ಹಿಂದೆ ಅನುಷ್ಕಾ ಶೆಟ್ಟಿ ನಟಿಸಿದ್ದ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ನಿರ್ದೇಶನ ಮಾಡಿದ್ದ ಮಹೇಶ್ ಬಾಬು ಪಿ ಅವರು ಈಗ ರಾಮ್ ಪೋತಿನೇನಿ ಚಿತ್ರಕ್ಕೂ ನಿರ್ದೇಶನ ಮಾಡ್ತಿದ್ದಾರೆ. ‘ಪುಷ್ಪ 2’ ನಿರ್ಮಿಸಿದ್ದ ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ.

ಉಪೇಂದ್ರ ಈಗಾಗಲೇ ಸೌತ್ ಸಿನಿಮಾಗಳಲ್ಲಿ ಕೆಲಸ ಮಾಡಿ ಪಳಗಿದ್ದಾರೆ. ಈ ಹಿಂದೆ ಅಲ್ಲು ಅರ್ಜುನ್ ನಟನೆಯ ‘ಸನ್ ಆಫ್ ಸತ್ಯಮೂರ್ತಿ’ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದರು. ‘ಯುಐ’ ಚಿತ್ರ ಕೂಡ ತೆಲುಗು ವರ್ಷನ್‌ನಲ್ಲಿ ರಿಲೀಸ್ ಆಗಿ ಮೆಚ್ಚುಗೆ ಗಳಿಸಿತ್ತು. ಅದಷ್ಟೇ ಅಲ್ಲ, ತಮಿಳಿನ ಸ್ಟಾರ್ ತಲೈವಾ ಜೊತೆ ‘ಕೂಲಿ’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ ಉಪೇಂದ್ರ. ಹಾಗಾಗಿ ತೆಲುಗು, ತಮಿಳು ಎರಡು ಭಾಷೆಯಲ್ಲೂ ನಟಿಸಿ ಅವರು ಸೈ ಎನಿಸಿಕೊಂಡಿದ್ದಾರೆ.

Share This Article