ತೆಲುಗಿಗೆ ‘ಕಾಂತಾರ’ ಲೀಲಾ- ‘ಮೂಡ್ ಆಫ್ ತಮ್ಮುಡು’ ಚಿತ್ರದ ಟೀಸರ್ ಔಟ್

Public TV
1 Min Read

‘ಕಾಂತಾರ’ ಬೆಡಗಿ ಸಪ್ತಮಿ ಗೌಡ (Sapthami Gowda) ಬಾಲಿವುಡ್ ಬಳಿಕ ಟಾಲಿವುಡ್‌ನತ್ತ ಮುಖ ಮಾಡಿದ್ದಾರೆ. ತೆಲುಗು ನಟ ನಿತಿನ್‌ಗೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ರತ್ನ ಪಾತ್ರದ ಮೂಲಕ ಹಳ್ಳಿ ಹುಡುಗಿ ಗೆಟಪ್‌ನಲ್ಲಿ ಬರುತ್ತಿದ್ದಾರೆ. ಅವರ ಪಾತ್ರದ ಟೀಸರ್ ರಿಲೀಸ್ ಆಗಿದೆ. ಇದನ್ನೂ ಓದಿ:ತಡವಾಗಿ ಆಮೀರ್ ಖಾನ್ ಪ್ರಶಂಸೆ- ಈಗ ಎಚ್ಚರವಾದ್ರಾ ಎಂದು ಪ್ರಶ್ನಿಸಿದ ನೆಟ್ಟಿಗರು

ನಟ ನಿತಿನ್ (Nithiin) ಜೊತೆ ಡ್ಯುಯೆಟ್ ಹಾಡಲು ಸಪ್ತಮಿ ಸಜ್ಜಾಗಿದ್ದಾರೆ. ‘ಮೂಡ್ ಆಫ್ ತಮ್ಮುಡು’ (Mood Of Thammudu) ಚಿತ್ರದ ಮೂಲಕ ತೆಲುಗಿನಲ್ಲಿ ನಟಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಸಪ್ತಮಿ ರತ್ನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಲಂಗ ದಾವಣಿ ಧರಿಸಿದ್ದಾರೆ. ಅದಷ್ಟೇ ಅಲ್ಲ, ಇಲ್ಲಿ ನಿತಿನ್ ಪಾತ್ರದ ಲುಕ್ ಕೂಡ ಅನಾವರಣ ಆಗಿದೆ. ಇದನ್ನೂ ಓದಿ:ಬಾಯ್‌ಫ್ರೆಂಡ್ ಜೊತೆಗಿನ ಹಸಿಬಿಸಿ ಪ್ರಣಯದ ಫೋಟೋ ಹಂಚಿಕೊಂಡ ‘ಬಿಗ್ ಬಾಸ್’ ನಿಕ್ಕಿ

 

View this post on Instagram

 

A post shared by Sapthami Gowda 🧿 (@sapthami_gowda)

ಬಿಲ್ಲು ಬಾಣ ಹಿಡಿದ ಗೆಟಪ್‌ನಲ್ಲಿ ನಿತಿನ್ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಕೊಡಗಿನ ನಟಿ ವರ್ಷ ಬೊಳ್ಳಮ್ಮ, ಸೌರಭ್ ಸಚ್‌ದೇವ್ ಸೇರಿದಂತೆ ಅನೇಕರು ನಟಿಸಿದ್ದಾರೆ. ದಿಲ್ ರಾಜು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಶ್ರೀರಾಮ್ ವೇಣು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಜುಲೈ 4ರಂದು ಸಿನಿಮಾ ರಿಲೀಸ್ ಆಗಲಿದೆ.

ಪಾಪ್ ಕಾರ್ನ್ ಮಂಕಿ ಟೈಗರ್, ಕಾಂತಾರ, ಯುವ, ದಿ ವ್ಯಾಕ್ಸಿನ್ ವಾರ್ ಸಿನಿಮಾಗಳಲ್ಲಿ ಸಪ್ತಮಿ ನಟಿಸಿದ್ದಾರೆ. ಸದ್ಯ ಕನ್ನಡದ ಅಶೋಕ ಬ್ಲೇಡ್‌ನಲ್ಲಿ ಸತೀಶ್ ನೀನಾಸಂಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

Share This Article