ʻಆಪರೇಷನ್‌ ಸಿಂಧೂರʼದಲ್ಲಿ ಬ್ರಹ್ಮೋಸ್‌ ಕ್ಷಿಪಣಿ ಪಾತ್ರ ದೊಡ್ಡದು, ಅನುಮಾನವಿದ್ರೆ ಪಾಕ್‌ನ ಕೇಳಿ: ಯೋಗಿ ಆದಿತ್ಯನಾಥ್

Public TV
2 Min Read

– ಪಾಕಿಸ್ತಾನ ನೆಟ್ಟಗಾಗದ ನಾಯಿ ಬಾಲ ಇದ್ದಂತೆ; ತಿವಿದ ಸಿಎಂ

ಲಕ್ನೋ: ಆಪರೇಷನ್ ಸಿಂಧೂರ್ ಸಮಯದಲ್ಲಿ ಬ್ರಹ್ಮೋಸ್ ಕ್ಷಿಪಣಿಯ (BrahMos Missile) ಶಕ್ತಿ ಸಾಮರ್ಥ್ಯ ಸ್ಪಷ್ಟವಾಗಿತ್ತು. ಈ ಕಾರ್ಯಾಚರಣೆಯಲ್ಲಿ ಬ್ರಹ್ಮೋಸ್‌ ಕ್ಷಿಪಣಿಯ ಪಾತ್ರ ದೊಡ್ಡದಿದೆ. ಈ ಬಗ್ಗೆ ಯಾರಿಗಾದ್ರೂ ಅನುಮಾನ ಇದ್ದರೆ, ಪಾಕಿಸ್ತಾನವನ್ನ ಕೇಳಿ ಅಂತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಹೇಳಿದ್ದಾರೆ.

ಲಕ್ನೋದಲ್ಲಿ ರಕ್ಷಣಾ ಕೈಗಾರಿಕಾ ಕಾರಿಡಾರ್‌ನಲ್ಲಿ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಉತ್ಪಾದನಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ʻಆಪರೇಷನ್ ಸಿಂಧೂರʼ (Operation Sindoor) ಕಾರ್ಯಾಚರಣೆಯಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಪಾತ್ರವನ್ನು ಖಚಿತಪಡಿಸಿದರು. ಇದನ್ನೂ ಓದಿ: 300 ಕೋಟಿ ವೆಚ್ಚದ ʻಬ್ರಹ್ಮೋಸ್ʼ ಕ್ಷಿಪಣಿ ಉತ್ಪಾದನಾ ಘಟಕ ಉದ್ಘಾಟನೆ; ವಾರ್ಷಿಕ 100 ಮಿಸೈಲ್‌ ಉತ್ಪಾದನೆ ಗುರಿ

ಇದೇ ವೇಳೆ ಭಯೋತ್ಪಾದನೆ ಕುರಿತು ಮಾತನಾಡಿದ ಅವರು, ಪಾಕಿಸ್ತಾನ (Pakistan) ಎಂದಿಗೂ ನೆಟ್ಟಗಾಗದ ನಾಯಿಯ ಬಾಲ ಇದ್ದಂತೆ, ಅವರಿಗೆ ಅವರದ್ದೇ ಭಾಷೆಯಲ್ಲೇ ಉತ್ತರಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಅಣ್ವಸ್ತ್ರಗಳಿರೋ ಬೆಟ್ಟದ ಮೇಲೆ ದಾಳಿ – ಬೆದರಿದ ಪಾಕ್‌, ಅಮೆರಿಕಕ್ಕೂ ಶಾಕ್‌!

ಮುಂದೆ ನಡೆಯುವ ಯಾವುದೇ ಭಯೋತ್ಪಾದನಾ ಕೃತ್ಯವನ್ನು ಯುದ್ಧ ಕೃತ್ಯವೆಂದೇ ಪರಿಗಣಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಭಯೋತ್ಪಾದನೆಯನ್ನ ಸಂಪೂರ್ಣವಾಗಿ ಹತ್ತಿಕ್ಕುವವರೆಗೆ ಇಂತಹ ಸಮಸ್ಯೆಗಳನ್ನ ಪರಿಹರಿಸಲಾಗುವುದಿಲ್ಲ. ಆದ್ದರಿಂದ ಮೋದಿಯವರ ನಾಯಕತ್ವದಲ್ಲಿ ನಾವೆಲ್ಲರೂ ಒಂದೇ ಧ್ವನಿಯಲ್ಲಿ ಭಯೋತ್ಪಾದನೆ ಹತ್ತಿಕ್ಕುವ ನಿಟ್ಟಿನಲ್ಲಿ ಹೋರಾಡಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಆಪರೇಷನ್ ಸಿಂಧೂರ | ಲಷ್ಕರ್ ಮುಖ್ಯಸ್ಥ ಸೇರಿ 140 ಉಗ್ರರು ಉಡೀಸ್

ಏನಿದು ಆಪರೇಷನ್‌ ಸಿಂಧೂರ?
ಕಳೆದ ಏಪ್ರಿಲ್‌ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿರುವ ಬೈಸರನ್‌ ಕಣಿವೆಯಲ್ಲಿ ಸೈನಿಕರ ಸೋಗಿನಲ್ಲಿ ಬಂದ ನಾಲ್ವರು ಉಗ್ರರು 26 ಪ್ರವಾಸಿಗರನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲೇಬೇಕೆಂದು ಪಣ ತೊಟ್ಟಿದ್ದ ಭಾರತ ಮೇ 7ರ ರಾತ್ರಿ ಪಾಕ್‌ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರ (PoK)ದ ಮೇಲೆ ʻಆಪರೇಷನ್‌ ಸಿಂಧೂರʼ ಹೆಸರಿನಡಿ ದಾಳಿ ನಡೆಸಿತ್ತು. ಈ ವೇಳೆ ಜೈಶ್‌ ಎ ಮೊಹಮ್ಮದ್‌, ಲಷ್ಕರ್‌ ಎ ತೋಯ್ಬಾ ಉಗ್ರ ಸಂಘಟನೆಗಳ ಪ್ರಧಾನ ಕಚೇರಿ ಸೇರಿದಂತೆ 9 ಅಡಗುತಾಣಗಳ ಮೇಲೆ ದಾಳಿ ನಡೆಸಿತ್ತು.

Share This Article