ಅಸಿಮ್ ಮುನೀರ್‌ನಿಂದ ದೇಶ ನಾಶ – ರೊಚ್ಚಿಗೆದ್ದ ಪಾಕ್‌ ಜನ

By
2 Min Read

ಇಸ್ಲಾಮಾಬಾದ್‌: ಸೇನಾ ಮುಖ್ಯಸ್ಥ ಅಸಿಮ್ ಮುನೀರ್ (Asim Munir) ಪಾಕಿಸ್ತಾನದಲ್ಲಿ ಆಕ್ರೋಶ ಹೆಚ್ಚಾಗುತ್ತಿದೆ. ಅಸಿಮ್‌ ಮುನೀರ್‌ನಿಂದ ಪಾಕಿಸ್ತಾನ (Pakistan) ನಾಶವಾಗುತ್ತಿದೆ ಎಂದು ಪಾಕ್‌ ಜನರು ಸಿಟ್ಟು ಹೊರಹಾಕುತ್ತಿದ್ದಾರೆ.

ಭಾರತ (India) ತನ್ನ ಮೇಲೆ ದಾಳಿ ನಡೆಸಲು ಮುನೀರ್ ನಿರ್ಧಾರವೇ ಕಾರಣ ಎಂದು ಜನ ಪೋಸ್ಟ್‌ ಮಾಡುತ್ತಿದ್ದಾರೆ. ಒಂದು ವೇಳೆ ಇಮ್ರಾನ್‌ ಖಾನ್‌ (Imran Khan) ಈ ಸಂದರ್ಭದಲ್ಲಿ ಇದ್ದಿದ್ದರೆ ಎರಡೂ ದೇಶಗಳ ಮಧ್ಯೆ ಉತ್ತಮ ಸಂಬಂಧ ಇರುತ್ತಿತ್ತು. ಮುನೀರ್‌ ತನ್ನ ವೈಯಕ್ತಿಕ ಲಾಭಕ್ಕಾಗಿ ಭಾರತದ ವಿರುದ್ಧ ದಾಳಿ ನಡೆಸುತ್ತಿದ್ದಾನೆ. ಕೂಡಲೇ ಬಂಧನದಲ್ಲಿರುವ ಇಮ್ರಾನ್‌ ಖಾನ್‌ ಅವರನ್ನು ಬಿಡುಗಡೆ ಮಾಡಿ ಎಂದು ಜನರು ಆಗ್ರಹಿಸುತ್ತಿದ್ದಾರೆ.

ಪಹಲ್ಗಾಮ್‌ ದಾಳಿಗೂ ಮೊದಲು ಮುನೀರ್‌ ಕಾಶ್ಮೀರ ಪಾಕಿಸ್ತಾನದ ಕಂಠನಾಳ. ಅದನ್ನು ನಾವು ಪಡೆಯುತ್ತೇವೆ ಎಂದು ಪ್ರಚೋದನೆ ನೀಡಿದ್ದ. ಇದನ್ನೂ ಓದಿ: ಭಾರತದ ದಾಳಿಗೆ ಬೆಚ್ಚಿದ ಪಾಕ್‌ – ಅಣ್ವಸ್ತ್ರ ನಿರ್ಧಾರ ಕೈಗೊಳ್ಳುವ ತುರ್ತು ಸಭೆ ಕರೆದ ಪ್ರಧಾನಿ

2019 ರಲ್ಲಿ ಪುಲ್ವಾಮಾ ದಾಳಿಯ ನಂತರ ಭಾರತ ಬಾಲಾಕೋಟ್‌ ಮೇಲೆ ಏರ್‌ಸ್ಟ್ರೈಕ್‌ ಮಾಡಿತ್ತು. ಈ ಏರ್‌ಸ್ಟ್ರೈಕ್‌ಗ ಪ್ರತಿಯಾಗಿ ಪಾಕ್‌ ವಾಯುಸೇನೆಯ ವಿಮಾನಗಳ ಭಾರತದ ಮೇಲೆ ದಾಳಿ ನಡೆಸಲು ಮುಂದಾಗಿದ್ದವು. ಈ ವೇಳೆ ಭಾರತ ಪ್ರತಿದಾಳಿ ನಡೆಸಿ ಪಾಕಿಸ್ತಾನದ ಎಫ್‌16 ಯುದ್ಧ ವಿಮಾನವನ್ನು ಹೊಡೆದು ಹಾಕಿತ್ತು. ಅಷ್ಟೇ ಅಲ್ಲದೇ ಪೈಲಟ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಬಿಡಿಸಿಕೊಂಡು ಬಂದಿತ್ತು. ಬಾಲಾಕೋಟ್‌ ಏರ್‌ಸ್ಟ್ರೈಕ್‌ಗೆ ಪ್ರತಿಯಾಗಿ ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡುವ ಧೈರ್ಯ ತೋರಿರಲಿಲ್ಲ. ಆದರೆ ಈ ಬಾರಿ ಹುಚ್ಚಾಟ ಮಾಡಿದ್ದು ಭಾರೀ ಪೆಟ್ಟು ತಿನ್ನುತ್ತಿದೆ.

ಅಭಿನಂದನ್‌ ವರ್ಧಮಾನ್‌ ಅವರನ್ನು ಬಿಡುಗಡೆ ಮಾಡದೇ ಇದ್ದರೆ ಯುದ್ಧಕ್ಕೆ ಸಿದ್ಧರಾಗಿರಿ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿತ್ತು. ಈ ಎಚ್ಚರಿಕೆಯ ಬೆನ್ನಲ್ಲೇ ಪಾಕ್‌ ಯಾವುದೇ ಷರತ್ತು ವಿಧಿಸದೇ ಅಭಿನಂದನ್‌ ವರ್ಧಮಾನ್‌ ಅವರನ್ನು ಬಿಡುಗಡೆ ಮಾಡಿತ್ತು. ಇದನ್ನೂ ಓದಿ: ಪಾಕ್‌ ತತ್ತರ – ಇಸ್ಲಾಮಾಬಾದ್‌ನಲ್ಲಿ 48 ಗಂಟೆಗಳವರೆಗೆ ಪೆಟ್ರೋಲ್ ಪಂಪ್‌ಗಳು ಬಂದ್‌

ಕಳೆದ ಪಾಕ್‌ ಚುನಾವಣೆಯಲ್ಲಿ ಪಾಕ್‌ ಸೇನೆಯ ವಿರುದ್ಧವೇ ಇಮ್ರಾನ್‌ ಖಾನ್‌ ಧ್ವನಿ ಎತ್ತಿದ್ದರು. ತನ್ನ ವಿರುದ್ಧ ಮಾತನಾಡಿದ್ದಕ್ಕೆ ಸಿಟ್ಟಾದ ಸೇನೆ ಹಲವು ಆರೋಪ ಹೊರಿಸಿ ಇಮ್ರಾನ್‌ ಖಾನ್‌ ಅವರನ್ನು ಜೈಲಿಗೆ ಅಟ್ಟಿದೆ.

Share This Article