ಆರ್ಮಿಗೆ ಸಂಬಂಧಿಸಿದ ವಿಡಿಯೋಗಳನ್ನು ಶೇರ್ ಮಾಡಬೇಡಿ: ರಾಜಮೌಳಿ ಮನವಿ

Public TV
2 Min Read

ಭಾರತ ಮತ್ತು ಪಾಕಿಸ್ತಾನದ ಉದ್ವಿಗ್ನತೆಯ ನಡುವೆ ಫ್ಯಾನ್ಸ್‌ಗೆ ಸಂದೇಶವೊಂದನ್ನು ರಾಜಮೌಳಿ (Rajamouli) ಹಂಚಿಕೊಂಡಿದ್ದಾರೆ. ಭಾರತೀಯ ಸೇನೆಗೆ ಸಂಬಂಧಿಸಿದ ಯಾವುದೇ ಫೋಟೋ, ವಿಡಿಯೋಗಳನ್ನು ಶೇರ್ ಮಾಡಬೇಡಿ. ಇದರಿಂದ ಶತ್ರುಗಳಿಗೆ ಸಹಾಯವಾಗಬಹುದು ಎಂದು ರಾಜಮೌಳಿ ಎಚ್ಚರಿಸಿದ್ದಾರೆ. ಇದನ್ನೂ ಓದಿ:ಭಾರತ-ಪಾಕ್ ನಡುವೆ ಉದ್ವಿಗ್ನ ಹೊತ್ತಲ್ಲೇ ದಿಟ್ಟ ನಿರ್ಧಾರ ಕೈಗೊಂಡ ಕಮಲ್ ಹಾಸನ್

ಭಾರತೀಯ ಸೇನೆಗೆ ಸಂಬಂಧಪಟ್ಟ ಯಾವುದೇ ಫೋಟೋಗಳು ಮತ್ತು ವಿಡಿಯೋಗಳನ್ನು ತೆಗೆದುಕೊಳ್ಳಬೇಡಿ. ಅವುಗಳನ್ನು ಹಂಚಿಕೊಳ್ಳಬೇಡಿ. ಇದರಿಂದ ಶತ್ರುಗಳಿಗೆ ಸಹಾಯವಾಗಬಹುದು. ಪರಿಶೀಲಸದೇ ಯಾವುದೇ ಸುದ್ದಿಗಳನ್ನು ಶೇರ್ ಮಾಡೋದನ್ನು ನಿಲ್ಲಿಸಿ. ನಾವೆಲ್ಲರೂ ಜವಾಬ್ದಾರಿಯಿಂದ ವರ್ತಿಸೋಣ. ಶಾಂತವಾಗಿ, ಜಾಗೃತೆಯಾಗಿ, ಸಕರಾತ್ಮಕವಾಗಿರೋಣ. ಗೆಲುವು ನಮ್ಮದೇ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಚಂದನ್ ಶೆಟ್ಟಿ ಜೊತೆ ಹಸೆಮಣೆ ಏರಿದ ‘ಸೀತಾ ವಲ್ಲಭ’ ನಟಿ ಸುಪ್ರೀತಾ

ನಮ್ಮ ದೇಶವನ್ನು ಭಯೋತ್ಪಾದನೆಯಿಂದ ರಕ್ಷಿಸುವಲ್ಲಿ ಅಚಲ ಧೈರ್ಯ ತೋರಿದ ನಮ್ಮ ಭಾರತೀಯ ಸಶಸ್ತ್ರ ಪಡೆಗಳಿಗೆ ನಮನಗಳು. ಶಾಂತಿ ಮತ್ತು ಏಕತೆಗಾಗಿ ಒಂದು ರಾಷ್ಟ್ರವಾಗಿ ಒಟ್ಟಾಗಿ ನಿಲ್ಲೋಣ ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಏ.22ರಂದು ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಹಿನ್ನೆಲೆ ಭಾರತ ಈಗ ಪಾಕ್‌ಗೆ ತಕ್ಕ ಪಾಠ ಕಲಿಸುತ್ತಿದೆ.

Share This Article