ರಾಜ್‌ಕುಮಾರ್ ರಾವ್ ಜೊತೆ ಐಟಂ ಹಾಡಿಗೆ ಸೊಂಟ ಬಳುಕಿಸಿದ ಧನಶ್ರೀ

Public TV
1 Min Read

ಕ್ರಿಕೆಟಿಗ ಯಜುವೇಂದ್ರ ಚಾಹಲ್ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಚಿತ್ರರಂಗದಲ್ಲಿ ಧನಶ್ರೀ ವರ್ಮಾ ಆ್ಯಕ್ಟೀವ್ ಆಗಿದ್ದಾರೆ. ಬಾಲಿವುಡ್ (Bollywood) ಸಿನಿಮಾದಲ್ಲಿ ರಾಜ್‌ಕುಮಾರ್ ರಾವ್ (Rajkummar Rao) ಜೊತೆ ಧನಶ್ರೀ ವರ್ಮಾ ಸೊಂಟ ಬಳುಕಿಸಿದ್ದಾರೆ. ಮಾದಕವಾಗಿ ಕಾಣಿಸಿಕೊಂಡಿರುವ ನಟಿಯ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:ಯೋಧರ ಹೋರಾಟ ಶುರುವಾಗಿದೆ: ‘ಆಪರೇಷನ್ ಸಿಂಧೂರ’ಗೆ ಜೈ ಎಂದ ತಲೈವಾ

ರಾಜ್‌ಕುಮಾರ್ ರಾವ್ ನಟನೆಯ ‘ಭೂಲ್‌ಚುಕ್ ಮಾಫ್’ ಸಿನಿಮಾದಲ್ಲಿ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಟನ ಜೊತೆ ಮೈ ಚಳಿ ಬಿಟ್ಟು ಕುಣಿದು ಕುಪ್ಪಳಿಸಿದ್ದಾರೆ. ಯೂಟ್ಯೂಬ್‌ನಲ್ಲಿ ಸಾಂಗ್ ರಿಲೀಸ್ ಆಗಿ ಭರ್ಜರಿ ವಿವ್ಸ್ ಪಡೆದುಕೊಳ್ತಿದೆ. ಹಾಡಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಮೇ 9ರಂದು ಈ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಇದನ್ನೂ ಓದಿ:ಸಾಮ ಬೇಧ ದಂಡ, ಮೋದಿ ಭಾರತದ ಪ್ರಚಂಡ: ಜಗ್ಗೇಶ್

ಈ ಸಿನಿಮಾದ ಜೊತೆ ಟಾಲಿವುಡ್‌ಗೆ ಎಂಟ್ರಿ ಕೊಡಲು ಸಿದ್ಧವಾಗಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲ. ಈ ವಿಚಾರ ಹಲವು ದಿನಗಳಿಂದ ಹರಿದಾಡುತ್ತಿದೆ. ವೈಯಕ್ತಿಕ ವಿಚಾರಗಳಿಂದ ಸುದ್ದಿಯಾಗಿದ್ದ ನಟಿಗೆ ಚಿತ್ರರಂಗದಿಂದ ಉತ್ತಮ ಅವಕಾಶ ಅರಸಿ ಬರುತ್ತಿದೆ.

 

View this post on Instagram

 

A post shared by Sony Music India (@sonymusicindia)

ಈ ವರ್ಷ ಫೆ.20ರಂದು ಯಜುವೇಂದ್ರ ಚಾಹಲ್ (Yyzvendra Chahal) ಜೊತೆಗಿನ ವೈಯಕ್ತಿಕ ಕಾರಣದಿಂದ ಧನಶ್ರೀ ವರ್ಮಾ (Dhanashree Verma) ಬೇರೆಯಾದರು. ಪ್ರೀತಿಸಿ ಮದುವೆಯಾಗಿದ್ದ ಜೋಡಿ ಇತ್ತೀಚೆಗೆ ಡಿವೋರ್ಸ್ ಪಡೆದಿದೆ.

Share This Article