ಮೆಗಾಸ್ಟಾರ್ ಕುಟುಂಬದಲ್ಲಿ ಸಂಭ್ರಮ- ಮೊದಲ ಮಗುವಿನ ನಿರೀಕ್ಷೆಯಲ್ಲಿ ವರುಣ್ ತೇಜ್ ದಂಪತಿ

Public TV
1 Min Read

ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಕುಟುಂಬದಲ್ಲಿ ಮತ್ತೆ ಸಡಗರ ಮನೆ ಮಾಡಿದೆ. ಮೆಗಾ ಕುಟುಂಬದ ಮನೆ ಮಗ ವರುಣ್ ತೇಜ್ ತಂದೆಯಾಗುತ್ತಿರುವ ಖುಷಿಯಲ್ಲಿದ್ದಾರೆ. ಈ ಸುದ್ದಿಯನ್ನು ವರುಣ್ ತೇಜ್ (Varun Tej) ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ರಮೇಶ್ ಅರವಿಂದ್ ನಟನೆಯ ‘ದೈಜಿ’ ಚಿತ್ರದಲ್ಲಿ ದಿಗಂತ್

ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ (Lavanya Tripathi) ಪುಟ್ಟ ಮಗುವಿನ ಶೂ ಹಿಡಿದಿರುವ ಫೋಟೋ ಹಂಚಿಕೊಂಡು ಪೋಷಕರಾಗುತ್ತಿರುವ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ‘ಜೀವನದ ಅತೀ ಮುಖ್ಯವಾದ ರೋಲ್ ಶೀಘ್ರದಲ್ಲಿಯೇ ಬರಲಿದೆ’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.

 

View this post on Instagram

 

A post shared by Varun Tej Konidela (@varunkonidela7)

ಮೊದಲ ಮಗುವಿನ ನಿರೀಕ್ಷೆಯಲ್ಲಿ ವರುಣ್ ತೇಜ್ ಮತ್ತು ಲಾವಣ್ಯಗೆ ಕನ್ನಡದ ‘ಮಾಸ್ಟರ್ ಪೀಸ್’ ನಟಿ ಶಾನ್ವಿ, ಸಮಂತಾ, ಉಪಾಸನಾ, ಕಾಜಲ್, ರೀತು ವರ್ಮಾ ಸೇರಿದಂತೆ ಅನೇಕರು ಶುಭಹಾರೈಸಿದ್ದಾರೆ. ಇದನ್ನೂ ಓದಿ:ವೇದಿಕೆಯಲ್ಲಿ ಸಮಂತಾ ಕಣ್ಣೀರಿಟ್ಟಿದ್ಯಾಕೆ?- ಪ್ರಚಾರದ ಗಿಮಿಕ್ ಎಂದವರಿಗೆ ನಟಿ ಸ್ಪಷ್ಟನೆ

2016ರಲ್ಲಿ ತೆರೆಕಂಡ ‘ಮಿಸ್ಟರ್’ ಚಿತ್ರದಲ್ಲಿ ವರುಣ್ ಮತ್ತು ಲಾವಣ್ಯ ಜೊತೆಯಾಗಿ ನಟಿಸಿದ್ದರು. ಅಲ್ಲಿಂದ ಶುರುವಾದ ಸ್ನೇಹ ಪ್ರೀತಿಗೆ ತಿರುಗಿತ್ತು. ಬಳಿಕ ಗುರುಹಿರಿಯರ ಸಮ್ಮತಿ ಪಡೆದು 2023ರಲ್ಲಿ ವರುಣ್ ತೇಜ್ ಮತ್ತು ಲಾವಣ್ಯ ಇಟಲಿಯಲ್ಲಿ ಅದ್ಧೂರಿಯಾಗಿ ಮದುವೆಯಾದರು.

Share This Article