2019ರ ಸರ್ಜಿಕಲ್ ಸ್ಟ್ರೈಕ್‌ಗೆ ಪ್ರೂಫ್ ಸಿಕ್ಕಿಲ್ಲ – ʻಕೈʼ ಸಂಸದನ ಹೇಳಿಕೆಗೆ ಬಿಜೆಪಿ ತಿರುಗೇಟು

Public TV
1 Min Read

– 56 ಇಂಚಿನ ಎದೆಗಾರಿಕೆ ಅದೇನ್ ಕ್ರಮ ತೆಗೆದುಕೊಳ್ಳುತ್ತದೆ? ಅಂತ ಲೇವಡಿ

ನವದೆಹಲಿ: ಪಹಲ್ಗಾಮ್‌ನಲ್ಲಿ (Pahalgam) ಉಗ್ರರು 26 ಜನರ ಕೊಂದು ಹಾಕಿದ್ದಾರೆ. ಆದರೆ, ಕಾಂಗ್ರೆಸ್ ಸಂಸದ, ಪಂಜಾಬ್ ಮಾಜಿ ಸಿಎಂ ಚರಣ್‌ಜಿತ್ ಚನ್ನಿ (Charanjit Singh Channi) 2019ರ ಬಾಲಾಕೋರ್ಟ್ ಸರ್ಜಿಕಲ್ ಸ್ಟ್ರೈಕ್‌ (Surgical Strikes) ಬಗ್ಗೆ ಸಾಕ್ಷ್ಯ ಕೇಳಿದ್ದಾರೆ.

56 ಇಂಚಿನ ಎದೆಗಾರಿಕೆ (56-inch chest) ಅದೇನ್ ಕ್ರಮ ತೆಗೆದುಕೊಳ್ಳುತ್ತದೆ ಅಂತ ಇಡೀ ದೇಶವೇ ಎದುರು ನೋಡ್ತಿದೆ. ಪಾಕಿಸ್ತಾನದ ವಿರುದ್ಧ ನಾವು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲೇಬೇಕು. ಒಂದು ದೇಶದಲ್ಲಿ ಬಾಂಬ್ ಹಾಕಿದರೆ ಅದು ಅಲ್ಲಿನ ಜನರಿಗೆ ಗೊತ್ತಾಗೋದಿಲ್ವೇ…? ಸರ್ಜಿಕಲ್ ಸ್ಟ್ರೈಕ್‌ಗೆ ಯಾವುದೇ ದಾಖಲೆ ಇಲ್ಲದಂತಾಗಿದೆ. ನಾನು ನನ್ನ ದೇಶವನ್ನು ನಂಬುತ್ತೇನೆ ಅಂದರೆ ಸುಮ್ಮನೆ ಕುರುಡನಂತೆ ನಂಬಬಾರದು ಅಲ್ವಾ..? ಬಾಲಾಕೋಟ್ ದಾಳಿ ಬಗ್ಗೆ ಅಂತಾರಾಷ್ಟ್ರೀಯವಾಗಿಯೂ ಏರ್‌ಸ್ಟ್ರೈಕ್‌ನಿಂದ ಸಾಧಿಸಿದ್ದೇನು ಅಂತ ಯಾರಿಗೂ ಏನೂ ಗೊತ್ತಾಗಿಲ್ಲ ಅಂತ ಹೇಳಿದ್ದಾರೆ.

ಇದಕ್ಕೆ ಬಿಜೆಪಿ ತೀಕ್ಷ್ಣವಾಗಿ ಟಕ್ಕರ್ ಕೊಟ್ಟಿದೆ. ಚನ್ನಿ ಆರೋಪಕ್ಕೆ ದೆಹಲಿ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಪ್ರತಿಕ್ರಿಯಿಸಿದ್ದು, ನೀವು ರಾಹುಲ್ ಗಾಂಧಿ ಜೊತೆಗೆ ಪಾಕಿಸ್ತಾನಕ್ಕೆ ಹೋಗಿ ಪ್ರೂಫ್ ನೋಡ್ಕೊಂಡು ಬನ್ನಿ ಅಂತ ಕುಟುಕಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್‌ ದಾಳಿಯ ಬಳಿಕ ಫಸ್ಟ್‌ ಟೈಂ ಮೋದಿ ಭೇಟಿಯಾದ ಜಮ್ಮು-ಕಾಶ್ಮೀರ ಸಿಎಂ

ನೀವು ಸೈನಿಕರ ನೈತಿಕತೆಗೆ ಆಘಾತ ತರುತ್ತಿದ್ದೀರಿ. ಕಾಂಗ್ರೆಸ್‌ನದ್ದು ಪಾಕಿಸ್ತಾನ ವರ್ಕಿಂಗ್ ಕಮಿಟಿ ಆಗಿದ್ದು, ಪಾಕಿಸ್ಥಾನಕ್ಕೆ ಆಕ್ಸಿಜನ್ ಸರಬರಾಜು ಮಾಡ್ತಿದ್ದೀರಾ? ಅಂತ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಕೃಷ್ಣಾ ನದಿ ನೀರು ಹಂಚಿಕೆ ವಿವಾದ – ಮೇ 7ರಂದು ಕೇಂದ್ರ ಜಲಶಕ್ತಿ ಸಚಿವಾಲಯದಿಂದ ಸಭೆ

Share This Article