ನೀವು ಬರೋದು ಬೇಡ – ತನ್ನ ಪ್ರಜೆಗಳನ್ನೇ ದೇಶಕ್ಕೆ ಸೇರಿಸದ ಪಾಕ್‌

By
2 Min Read

ನವದೆಹಲಿ: ಭಾರತದಿಂದ ತೆರಳಿದ ತನ್ನ ಪ್ರಜೆಗಳನ್ನು ತಾನು ಸ್ವೀಕರಿಸುವುದಿಲ್ಲ ಎಂದು ಪಾಕಿಸ್ತಾನ (Pakistan) ಹೇಳಿದೆ.

ಹೌದು. ಪಹಲ್ಗಾಮ್‌ ದಾಳಿಯ (Pahalgam Terror Attack) ಬಳಿಕ ಭಾರತದ ಗೃಹ ಸಚಿವಾಲಯ ಭಾರತದಲ್ಲಿರುವ ಪಾಕ್‌ ಪ್ರಜೆಗಳು ಭಾರತ ತೊರೆಯಬೇಕು. ಪಾಕ್‌ನಲ್ಲಿರುವ ಭಾರತೀಯರು ಕೂಡಲೇ ದೇಶಕ್ಕೆ ಮರಳಬೇಕು ಎಂದು ಸೂಚಿಸಿತ್ತು.


ಈ ಸೂಚನೆಯ ಬೆನ್ನಲ್ಲೇ ಭಾರತದಲ್ಲಿರುವ ಪಾಕ್‌ ಪ್ರಜೆಗಳು ದೇಶಕ್ಕೆ ಮರಳುತ್ತಿದ್ದರು. ಆದರೆ ಈಗ ಗಡಿಯಲ್ಲೇ ಪಾಕ್‌ ತನ್ನ ದೇಶದ ಪ್ರಜೆಗಳನ್ನು ತಡೆ ಹಿಡಿದಿದೆ. ವಾಘಾದಲ್ಲಿ ತನ್ನ ಗಡಿಯನ್ನು (Wagah Attari Border) ಸಂಪೂರ್ಣವಾಗಿ ಮುಚ್ಚಿರುವುದರಿಂದ ಪಾಕ್‌ ಪ್ರಜೆಗಳು ಅಟ್ಟಾರಿ-ವಾಘಾ ಕ್ರಾಸಿಂಗ್‌ನಲ್ಲಿ ಸಿಲುಕಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್‌ ದಾಳಿಗೆ ಮುನೀರ್‌, ಪಾಕ್‌ ಸೇನೆ, ಇಸ್ಲಾಮಿಕ್ ಉಗ್ರರು ಕಾರಣ – ಪಾಕ್‌ ನಟಿ ಕೆಂಡಾಮಂಡಲ

ಗಡಿ ಮುಚ್ಚಲ್ಪಟ್ಟ ನಂತರ, ಗುರುವಾರ ಎರಡೂ ದೇಶಗಳಿಂದ ಯಾರೂ ಇನ್ನೊಂದು ಬದಿಗೆ ದಾಟಲಿಲ್ಲ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪಹಲ್ಗಾಮ್ ದಾಳಿಯ ಪ್ರತೀಕಾರಕ್ಕೆ ಪಣ – ಸೈಲೆಂಟ್ ಪ್ಲ್ಯಾನಿಂಗ್, ಮೋದಿ ನಿಗೂಢ ನಡೆ

ನಾನು ಬೆಳಿಗ್ಗೆ 6 ಗಂಟೆಗೆ ನನ್ನ ಸಹೋದರಿಯರೊಂದಿಗೆ ಇಲ್ಲಿಗೆ ಬಂದೆ. ಬೆಳಿಗ್ಗೆ 10 ಗಂಟೆಗೆ ಗಡಿ ತೆರೆಯುತ್ತದೆ ಎಂದು ಅಧಿಕಾರಿಗಳು ಹೇಳಿದರು. ಆದರೆ 11 ಗಂಟೆಯಾದರೂ ಗಡಿಯನ್ನು ತೆರೆಯಲಿಲ್ಲ. ಯಾಕೆ ಗೇಟ್‌ ತೆಗೆಯುತ್ತಿಲ್ಲ ಎಂದು ಕೇಳಿದ್ದಕ್ಕೆ ಪಾಕ್‌ ಅಧಿಕಾರಿ, ಭಾರತದಿಂದ ಪಾಕಿಸ್ತಾನಕ್ಕೆ ಮರಳದಂತೆ ಸರ್ಕಾರ ಆದೇಶ ನೀಡಿದೆ ಎಂದು ಹೇಳಿದರು ಎಂಬುದಾಗಿ ವ್ಯಕ್ತಿಯೊಬ್ಬರು ತಿಳಿಸಿದರು.

ಬುಧವಾರ 125 ಪಾಕಿಸ್ತಾನಿ ಪ್ರಜೆಗಳು ಅಟ್ಟಾರಿ-ವಾಘಾ ಗಡಿಯ ಮೂಲಕ ಭಾರತವನ್ನು ತೊರೆದಿದ್ದರು. ಈ ಮೂಲಕ ಒಂದು ವಾರದಲ್ಲಿ ಒಟ್ಟು 911 ಮಂದಿ ಪಾಕ್‌ಗೆ ಮರಳಿದ್ದರು.

ಒಂದು ವಾರದಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಒಟ್ಟು 1,1617 ಭಾರತೀಯರು ಮತ್ತು ದೀರ್ಘಾವಧಿಯ ಭಾರತೀಯ ವೀಸಾ ಹೊಂದಿರುವ 224 ಮಂದಿ ಭಾರತಕ್ಕೆ ಮರಳಿದ್ದಾರೆ.

Share This Article