ಸಿಂಗಾಪುರದಲ್ಲಿ ಮೇಘಾ ಶೆಟ್ಟಿ- ಸ್ಟೈಲಿಶ್ ಲುಕ್‌ನಲ್ಲಿ ನಟಿ

Public TV
1 Min Read

‘ಜೊತೆ ಜೊತೆಯಲಿ’ (Jothe Jotheyali) ನಟಿ ಮೇಘಾ ಶೆಟ್ಟಿ (Megha Shetty) ಅವರು ಸಿಂಗಾಪುರ ಪ್ರವಾಸದಲ್ಲಿದ್ದಾರೆ. ಸಿನಿಮಾ ಕೆಲಸಕ್ಕೆ ಬ್ರೇಕ್ ಸಿಕ್ಕ ಬೆನ್ನಲ್ಲೇ ವಿದೇಶಕ್ಕೆ ಹಾರಿದ್ದಾರೆ. ಪ್ರವಾಸದಲ್ಲಿನ ಸ್ಟೈಲಿಶ್ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಯುದ್ಧ ಬೇಡ, ಯಾರೂ ಉದ್ಧಾರ ಆಗಲ್ಲ: ರಮ್ಯಾ

ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಸ್ಟೈಲಿಶ್ ಆಗಿ ಡ್ರೆಸ್ ಧರಿಸಿ ಸಿಂಗಾಪುರದಲ್ಲಿ ಮೇಘಾ ಎಂಜಾಯ್ ಮಾಡ್ತಿದ್ದಾರೆ. ವಿವಿಧ ಭಂಗಿಗಳಲ್ಲಿ ನಟಿ ಮಸ್ತ್ ಆಗಿ ಪೋಸ್ ನೀಡಿದ್ದಾರೆ. ನಟಿಯ ಸುಂದರ ಫೋಟೋಗಳನ್ನು ನೋಡಿ ಹಾಟ್, ಬೋಲ್ಡ್, ಬ್ಯೂಟಿ ಎಂದೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ಜ್ಯೋತಿ ರೈ ನಟನೆಯ ‘ಕಿಲ್ಲರ್’ ಚಿತ್ರದ ಟೀಸರ್ ರಿಲೀಸ್

‘ಜೊತೆ ಜೊತೆಯಲಿ’ ಸೀರಿಯಲ್ ಹಿಟ್ ಆದ್ಮೇಲೆ ಕೈವ, ತ್ರಿಬಲ್ ರೈಡಿಂಗ್, ದಿಲ್ ಪಸಂದ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ರು. ಆದರೆ ಅವರಿಗೆ ಸ್ಯಾಂಡಲ್‌ವುಡ್‌ನಲ್ಲಿ ಗೆಲುವು ದಕ್ಕಲಿಲ್ಲ. ಹಾಗಂತ ಅವರಿಗೆ ಅವಕಾಶಗಳ ಕೊರತೆಯೂ ಇಲ್ಲ.

ಸದ್ಯ ಕಾಲಿವುಡ್‌ನತ್ತ ಮುಖ ಮಾಡಿದ್ದಾರೆ. ತಮಿಳಿನ ಸಿನಿಮಾವೊಂದರಲ್ಲಿ ಒಂದೊಳ್ಳೆಯ ಪಾತ್ರ ಸಿಕ್ಕಿದೆ. ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ನಟಿ ಮುನ್ನಡೆಯುತ್ತಿದ್ದಾರೆ.

ಅದಷ್ಟೇ ಅಲ್ಲ, ‘ಬಿಗ್ ಬಾಸ್’ ಖ್ಯಾತಿ ತ್ರಿವಿಕ್ರಮ್ ನಟನೆಯ ‘ಮುದ್ದು ಸೊಸೆ’ ಸೀರಿಯಲ್ ಅನ್ನು ಸಹೋದರಿ ಜೊತೆ ಸೇರಿ ಮೇಘಾ ಶೆಟ್ಟಿ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಸೀರಿಯಲ್ ಶುರುವಿನಲ್ಲಿ ಪಾತ್ರಗಳ ನಿರೂಪಣೆಯನ್ನು ಮೇಘಾ ಶೆಟ್ಟಿ ಮಾಡಿದ್ದರು. ಇದೀಗ ಈ ಸೀರಿಯಲ್ ಉತ್ತಮ ಟಿಆರ್‌ಪಿ ಪಡೆಯುತ್ತಿದೆ. ಪ್ರೇಕ್ಷಕರು ಇದನ್ನು ಮೆಚ್ಚಿಕೊಂಡಿದ್ದಾರೆ.

ಚೀತಾ, ಗ್ರಾಮಾಯಣ, ಆಪ್ಟರ್ ಆಪರೇಷನ್ ಲಂಡನ್ ಕೆಫೆ ಸೇರಿದಂತೆ ಹಲವು ಚಿತ್ರಗಳು ಮೇಘಾ ಕೈಯಲ್ಲಿವೆ.

Share This Article