ಮಂತ್ರವಾದಿ ಗೆಟಪ್‌ನಲ್ಲಿ ಬಂದ ಸಮಂತಾ- ಏನಿದು ಹೊಸ ಅವತಾರ?

Public TV
1 Min Read

ಟಾಲಿವುಡ್ ನಟಿ ಸಮಂತಾಗೆ (Samantha) ಇಂದು (ಏ.28) ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ಹೊಸ ಸಿನಿಮಾದ ಅಪ್‌ಡೇಟ್‌ವೊಂದು ಸಿಕ್ಕಿದೆ. ಮಂತ್ರವಾದಿ ಗೆಟಪ್‌ನಲ್ಲಿ ನಟಿ ಎಂಟ್ರಿ ಕೊಟ್ಟಿದ್ದಾರೆ. ‘ಶುಭಂ’ (Shubham) ಸಿನಿಮಾದ ಟ್ರೈಲರ್‌ನಲ್ಲಿ ಸಮಂತಾ ನಯಾ ಅವತಾರ ಕಂಡು ಫ್ಯಾನ್ಸ್ ಹುಬ್ಬೇರಿಸಿದ್ದಾರೆ. ಇದನ್ನೂ ಓದಿ:ನಾನು ಗುರುನಾನಕ್ ಸಿನಿಮಾ ಮಾಡಲ್ಲ- ವಿವಾದಕ್ಕೆ ಆಮೀರ್ ಖಾನ್ ಸ್ಪಷ್ಟನೆ

ಸಮಂತಾ ಅವರು ನಟಿ ಕಮ್ ನಿರ್ಮಾಪಕಿಯಾಗಿ ತೊಡಗಿಸಿಕೊಂಡಿದ್ದಾರೆ. ತಮ್ಮದೇ ನಿರ್ಮಾಣದ ‘ಶುಭಂ’ ಸಿನಿಮಾದಲ್ಲಿ ಅವರು ಮಂತ್ರವಾದಿಯಾಗಿ ನಟಿಸಿದ್ದಾರೆ. ಇದರ ಟ್ರೈಲರ್‌ ರಿಲೀಸ್‌ ಆಗಿದೆ. ‘ಶುಭಂ’ ಚಿತ್ರ ಹಾರರ್ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದೆ. ಹೊಸದಾಗಿ ಮದುವೆಯಾದ ಗಂಡಸರು, ತಮ್ಮ ಹೆಂಡ್ತಿಯನ್ನು ಕಂಟ್ರೋಲ್‌ನಲ್ಲಿ ಇಡಬೇಕು ಎಂದು ಬಯಸುತ್ತಾರೆ. ಆದರೆ ಅದು ನಡೆಯೋದು ರಾತ್ರಿ 9 ಗಂಟೆವರೆಗೂ ಮಾತ್ರವೇ ಆಗಿರುತ್ತದೆ. ಏಕೆಂದರೆ 9 ಗಂಟೆಗೆ ಶುರುವಾಗುವ ಸೀರಿಯಲ್ ನೋಡೋದ್ರಿಂದ ಪತ್ನಿಯರೆಲ್ಲ ದೆವ್ವ ಆಗುತ್ತಾರೆ. ಇದೇ ಈ ಸಿನಿಮಾ ಇಂಟೆಸ್ಟ್ರಿಂಗ್ ಕಥೆಯಾಗಿದೆ. ಇದನ್ನೂ ಓದಿ:ಪುರಿ ಜಗನ್ನಾಥ್, ವಿಜಯ್‌ ಸೇತುಪತಿ ಸಿನಿಮಾಗೆ ದುನಿಯಾ ವಿಜಯ್‌ ಎಂಟ್ರಿ

 

View this post on Instagram

 

A post shared by Samantha (@samantharuthprabhuoffl)

ಆ ಧಾರಾವಾಹಿಗೂ, ದೆವ್ವದ ಕಾಟಕ್ಕೂ ಏನು ಸಂಬಂಧ ಎಂಬುದನ್ನು ತಿಳಿಯುವ ಕೌತುಕ ಪ್ರೇಕ್ಷಕರಲ್ಲಿ ಮೂಡಿದೆ. ಮೇ 9ರಂದು ಸಮಂತಾ ನಿರ್ಮಾಣದ ‘ಶುಭಂ’ ಸಿನಿಮಾ ಬಿಡುಗಡೆ ಆಗಲಿದೆ. ಅದರಲ್ಲಿ ನಟಿ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರವನ್ನು ಪ್ರವೀಣ್‌ ಕಂಡ್ರೆಗುಲಾ ನಿರ್ದೇಶನ ಮಾಡಿದ್ದಾರೆ.

Share This Article