Pahalgam Terror Attack – ಮೃತ ಭರತ್ ಭೂಷಣ್ ಪತ್ನಿ ಹೇಳಿಕೆ ದಾಖಲಿಸಿಕೊಂಡ ಎನ್‌ಐಎ

By
1 Min Read

ಬೆಂಗಳೂರು: ಪೆಹಲ್ಗಾಮ್‌ನಲ್ಲಿ ಉಗ್ರರ ದಾಳಿಯ (Pahalgam Terrorist Attack) ತನಿಖೆಯನ್ನ ಎನ್‌ಐಎ (National Investigation Agency) ವಹಿಸಿಕೊಂಡಿದೆ. ಅಧಿಕೃತ ತನಿಖೆಯ ಆದೇಶಕ್ಕೂ ಮೊದಲು ಎನ್‌ಐಎ ಫೀಲ್ಡ್‌ಗಡ ಇಳಿದು ತನಿಖೆ ಆರಂಭಿಸಿದೆ. ಕಳೆದ ಶುಕ್ರವಾರ ಮೃತ ಭರತ್ ಭೂಷಣ್‌ರ (Bharath Bhushan) ಮನೆಗೆ ತೆರಳಿದ್ದ ಎನ್‌ಐಎ, ಸುಧೀರ್ಘ 8 ಗಂಟೆಗಳ ಕಾಲ ಪತ್ನಿ ಡಾ.ಸುಜಾತಾರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದೆ.

ನೀವೂ ಕಾಶ್ಮೀರಕ್ಕೆ (Kashimir) ಯಾವಾಗ ಹೋಗಿದ್ರಿ, ಎಷ್ಟೋತ್ತಿಗೆ ತಲುಪಿದ್ರಿ? ಉಗ್ರರು ಬಂದಾಗ ನೀವು ಎಲ್ಲಿ ಇದ್ರಿ, ಭರತ್ ಭೂಷಣ್ ಎಲ್ಲಿದ್ರು? ಉಗ್ರರು ಬಂದಾಗ ಯಾವ ಭಾಷೆ ಮಾತಾಡಿದ್ರು. ಅವರ ಮುಖದ ಮೇಲೆ ಏನಾದ್ರು ಮಾರ್ಕ್ ಇತ್ತಾ. ಅವರ ಮುಖ ಚಹರೆ, ವೇಷ ಭೂಷಣ ಇವೆಲ್ಲದರ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಪಾಕ್‌ ಮೇಲೆ ಡಿಜಿಟಲ್‌ ಸ್ಟ್ರೈಕ್‌ – ಬಿಬಿಸಿಗೂ ಬಿಸಿ ಮುಟ್ಟಿಸಿದ ಸರ್ಕಾರ

ಅಲ್ಲದೇ ಉಗ್ರರ ಸ್ಕೆಚ್ ತೋರಿಸಿ ಕೂಡ ಮಾಹಿತಿ ಪಡೆದಿರುವ ಎನ್‌ಐಎ, ಅವರ ಬಳಿಯಿದ್ದ ಗನ್ ನೋಡಿದ್ರಾ? ಅದು ಯಾವ ರೀತಿ ಇತ್ತು. ಅವರು ನಿಮ್ಮ ಬಳಿ ಏನಾದ್ರು ಮಾತಾಡಿದ್ರಾ? ನೀವು ಅವರಿಗೆ ಏನಾದ್ರು ಉತ್ತರ ಕೊಟ್ರಾ ಹೀಗೆ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿರುವ ಎನ್‌ಐಎ ಭರತ್ ಭೂಷಣ್ ಅವರ ಪತ್ನಿ ಹೇಳಿಕೆಯನ್ನು ದಾಖಲು ಮಾಡಿಕೊಂಡು ಹೋಗಿದೆ.

Share This Article