ಭಾರತ-ಪಾಕ್‌ ನಡುವೆ ಉದ್ವಿಗ್ನತೆ – ʻಆಕ್ರಮಣ್‌ʼ ಹೆಸರಲ್ಲಿ ಭಾರತ ಸಮರಾಭ್ಯಾಸ

By
1 Min Read

ನವದೆಹಲಿ: ಪಹಲ್ಗಾಮ್‌ ಪೈಶಾಚಿಕ ಕೃತ್ಯಕ್ಕೆ ಭಾರತ ಪ್ರತೀಕಾರದ ಪಣ ತೊಟ್ಟಿದೆ. ಕಾಶ್ಮೀರದಲ್ಲಿ ರಕ್ತಪಾತ ಹರಿಸಿದ ಉಗ್ರರನ್ನು ಹುಡುಕಿ ಹುಡುಕಿ ಯಾವ ಬಿಲದಲ್ಲಿ ಅಡಗಿದ್ದರೂ ಹೊರಗೆಳೆದು ಹೊಡೆಯುತ್ತೇವೆ. ಉಗ್ರರು ಊಹೆಯೂ ಮಾಡದಂತ ಶಿಕ್ಷೆ ಅನುಭವಿಸ್ತಾರೆ ಅಂತ ಪ್ರಧಾನಿ ಮೋದಿ ಕಟು ಎಚ್ಚರಿಕೆ ನೀಡಿದ್ದಾರೆ.

ಬಿಹಾರದ ಮಣ್ಣಿನಲ್ಲಿ ನಿಂತು ಇಡೀ ಪ್ರಪಂಚಕ್ಕೆ ಸಾರಿ ಹೇಳ್ತಿದ್ದೇನೆ. ಪ್ರತಿಯೊಬ್ಬ ಭಯೋತ್ಪಾದಕ, ಸಂಚುಕೋರರನ್ನು ಪತ್ತೆಹಚ್ಚಿ, ಗುರುತಿಸಿ ಶಿಕ್ಷಿಸ್ತೇವೆ ಅಂದಿದ್ದಾರೆ. ಅಲ್ಲದೆ, ಸಾರ್ವಜನಿಕ ರ‍್ಯಾಲಿ ಆರಂಭಕ್ಕೆ ಮುನ್ನ 2 ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ಇನ್ನು, ಮೋದಿ ಮಾತಿಗೆ ಬೆಂಬಲ ವ್ಯಕ್ತಪಡಿಸಿರುವ ಎಂಐಎಂ ಮುಖ್ಯಸ್ಥ ಓವೈಸಿ, ಭಯೋತ್ಪಾದಕರನ್ನು ನಿರ್ಮೂಲನೆ ಮಾಡ್ಬೇಕು ಅಂದಿದ್ದಾರೆ. ಈ ಮಧ್ಯೆ, ಉಗ್ರರ ಪಾಲಿನ ಸ್ವರ್ಗ ಪಾಕಿಸ್ತಾನಕ್ಕೆಕ್ಕೆ ಭಾರತ ರಾಕೆಟ್ ವಾರ್ನಿಂಗ್ ಕೂಡ ರವಾನಿಸಿದೆ.

ಅರಬ್ಬೀ ಸಮುದ್ರದಲ್ಲಿ ಐಎನ್‌ಎಸ್ ಸೂರತ್ ನೌಕೆಯಿಂದ ಸಮರಾಭ್ಯಾಸ ಆರಂಭಿಸಿದೆ. ಜೊತೆಗೆ `ಆಕ್ರಮಣ್’ ಹೆಸರಿನಲ್ಲಿ ಸುಖೋಯ್, ರಫೇಲ್ ಜೆಟ್‌ಗಳ ಸಮೇತ ಡ್ರಿಲ್ ಮಾಡಿವೆ. ಪಾಕಿಸ್ತಾನ ಬೆಳಗ್ಗೆ ಕ್ಷಿಪಣಿ ಪ್ರಯೋಗ ಮಾಡಿದ್ದ ಒಂದೇ ಗಂಟೆಯಲ್ಲಿ ಭಾರತ ಕೂಡ ಯುದ್ಧಭ್ಯಾಸ ಮಾಡಿ ಮುಯ್ಯಿಗೆ ಮುಯ್ಯಿ ಕೊಡಲು ನಾವೂ ಸನ್ನದ್ಧರಿದ್ದೇವೆ ಅಂತ ಸಂದೇಶ ರವಾನಿಸಿದೆ.

ದೇಶಿಯವಾಗಿ ನಿರ್ಮಿಸಲಾದ, ನೆಲದಿಂದ ಆಗಸಕ್ಕೆ ಚಿಮ್ಮಬಲ್ಲ ಮಧ್ಯಮ ವ್ಯಾಪ್ತಿಯ ಕ್ಷಿಪಣಿ ಪರೀಕ್ಷೆಯನ್ನು ಯುದ್ಧನೌಕೆ ʻಐಎನ್‌ಎಸ್‌ ಸೂರತ್‌ʼನಿಂದ ಅರಬ್ಭಿ ಸಮುದ್ರದಲ್ಲಿ ಪರೀಕ್ಷೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.

Share This Article