ಪುತ್ರನಿಗೆ ದ್ವಿತೀಯ ಪಿಯುಸಿಯಲ್ಲಿ 97% ಅಂಕ – ಸಂಭ್ರಮಾಚರಣೆಗೆ ಕಾಶ್ಮೀರಕ್ಕೆ ತೆರಳಿದ್ದ ಮಂಜುನಾಥ್ ಕುಟುಂಬ

By
1 Min Read

ಶಿವಮೊಗ್ಗ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ (Pahalgam Terror Attack) ಶಿವಮೊಗ್ಗದ (Shivamogga) ಮಂಜುನಾಥ್ ಮೃತಪಟ್ಟಿದ್ದು, ಮನೆಯಲ್ಲಿ ನೀರವ ಮೌನ ಆವರಿಸಿದೆ. ಮಂಜುನಾಥ್ ಪುತ್ರ ದ್ವಿತೀಯ ಪಿಯುಸಿಯಲ್ಲಿ 97% ಅಂಕ ಪಡೆದಿದ್ದ ಹಿನ್ನೆಲೆ ಸಂಭ್ರಮಾಚರಣೆಗೆಂದು ಮಂಜುನಾಥ್ ತಮ್ಮ ಪತ್ನಿ, ಮಗನ ಜೊತೆ ಕಾಶ್ಮೀರಕ್ಕೆ ತೆರಳಿದ್ದ ವೇಳೆ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ.

ಮೃತ ಮಂಜುನಾಥ್ ತಾಯಿ, ಪತ್ನಿ, ಪುತ್ರನೊಂದಿಗೆ ನಗರದ ವಿಜಯನಗರ ಬಡಾವಣೆಯಲ್ಲಿ ವಾಸವಾಗಿದ್ದರು. ಕಳೆದ ಐದು ದಿನಗಳ ಹಿಂದೆ ಮಂಜುನಾಥ್ ತನ್ನ ಕುಟುಂಬದೊಂದಿಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಮೊದಲು ರಾಜಸ್ಥಾನ ಪ್ರವಾಸಕ್ಕೆ ಯೋಜಿಸಿದ್ದ ಮಂಜುನಾಥ್ ಬಳಿಕ ಪ್ಲ್ಯಾನ್ ಬದಲಾಯಿಸಿ ಕಾಶ್ಮೀರಕ್ಕೆ ತೆರಳಿದ್ದರು. ಇದನ್ನೂ ಓದಿ: ಕನ್ನಡಿಗರ ರಕ್ಷಣೆಗಾಗಿ ಜಮ್ಮುವಿನತ್ತ ಹೊರಟ ಸಚಿವ ಸಂತೋಷ ಲಾಡ್

ದೆಹಲಿಯ ಇಂಡಿಯನ್ ಟೂರಿಸ್ಟ್ ಸಂಸ್ಥೆಯಿಂದ ಟೂರ್ ಆಯೋಜನೆಗೊಂಡಿತ್ತು. ಮಂಜುನಾಥ್ ಆನ್‌ಲೈನ್‌ನಲ್ಲಿ ಟೂರ್ ಆಯೋಜಿಸಿಕೊಂಡಿದ್ದರು. ದುರಾದೃಷ್ಟವಶಾತ್ ಮಂಜುನಾಥ್ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರಿಂದ ಹತ್ಯೆಯಾಗಿದ್ದಾರೆ. ಉಗ್ರರು ಮಂಜುನಾಥ್ ಅವರ ಧರ್ಮ ಕೇಳಿ ಹತ್ಯೆ ಮಾಡಿದ್ದಾರೆ. ಜೊತೆಗಿದ್ದ ಪತ್ನಿ ಪಲ್ಲವಿ ಹಾಗೂ ಪುತ್ರನನ್ನು ಮೂವರು ಭಯೋತ್ಪಾದಕರು ಬಿಟ್ಟು ಕಳುಹಿಸಿದ್ದು, ‘ಜಾವೋ ಮೋದಿ ಕೋ ಬೋಲೋ’ ಎಂದು  ಹೇಳಿ ಸ್ಥಳದಿಂದ ತೆರಳಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ದಾಳಿ ಬೆನ್ನಲ್ಲೇ ಸೌದಿ ಅರೇಬಿಯಾ ಪ್ರವಾಸ ಮೊಟಕುಗೊಳಿಸಿದ ಮೋದಿ

ಸದ್ಯ ಮೃತ ಮಂಜುನಾಥ್ ತಾಯಿ ಸುಮತಿಗೆ ಇನ್ನೂ ಕೂಡ ಮಗನ ಹತ್ಯೆಯಾಗಿರುವ ವಿಚಾರ ತಿಳಿದಿಲ್ಲ. ಮಂಜುನಾಥ್ ಉಗ್ರರಿಂದ ಹತ್ಯೆಯಾಗಿದ್ದಾನೆಂದು ಕುಟುಂಬಸ್ಥರು ತಿಳಿಸಿಲ್ಲ. ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದಷ್ಟೇ ಕುಟುಂಬಸ್ಥರು ತಾಯಿಗೆ ತಿಳಿಸಿದ್ದಾರೆ. ಇದನ್ನೂ ಓದಿ: Pahalgam Attack | ಉಗ್ರರ ಗುಂಡಿಗೆ ವಾರದ ಹಿಂದೆಯಷ್ಟೇ ಮದ್ವೆಯಾಗಿದ್ದ ನೌಕಾಪಡೆ ಅಧಿಕಾರಿ ಬಲಿ

Share This Article